Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕಾರಂತರು ಅಪ್ಪಟ ಪರಿಸರ ಪ್ರೇಮಿ-ಡಾ.ನರೇಂದ್ರ ರೈ ದೇರ್ಲ-ಕಹಳೆ ನ್ಯೂಸ್

ಪುತ್ತೂರು, ಅ.23: ಶಿವರಾಮ ಕಾರಂತರು ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು. ಅಂತೆಯೇ ಪರಿಸರದ ಬಗೆಗೆ ಅತೀವ ಕಾಳಜಿಯುಳ್ಳವರಾಗಿದ್ದವರು. ನಾವು ಬದುಕುವ ಪರಿಸರ, ನಾವು ಉಸಿರಾಡುವ ಗಾಳಿ, ಸೇವಿಸುವ ಆಹಾರ, ಕುಡಿಯುವ ನೀರು ಇವೆಲ್ಲದರ ಪ್ರಾಮುಖ್ಯತೆಯನ್ನು ಎಲ್ಲರಿಗೂ ತಿಳಿಸಿಕೊಟ್ಟು ಕನ್ನಡ ಸಾಹಿತ್ಯದ ಮುಖೇನ ಜಾಗೃತಿ ಮೂಡಿಸಿದವರು ಶಿವರಾಮ ಕಾರಂತರು.
ಕಾರAತರು ತಾವು ಬದುಕಿದ ಹಾಗೆ ಬರೆದವರು, ಬರೆದ ಹಾಗೆ ಬಾಳಿದವರು ಎಂದು ಸರ್ಕಾರಿ ಮಹಿಳಾ ದರ್ಜೆ ಕಾಲೇಜು ಪುತ್ತೂರು ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನರೇಂದ್ರ ರೈ ದೇರ್ಲ ಹೇಳಿದರು.
ಇವರು ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಐ.ಕ್ಯೂ.ಎ.ಸಿ, ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ನಡೆದ ಶಿವರಾಮ ಕಾರಂತರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷೀಯ ಮಾತುಗಳನ್ನಾಡಿ, ಕಾರಂತರAತವರ ಪುಸ್ತಕಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಹಿಂದಿನ ಕಾಲದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಅನೇಕ ಸಾಧನೆಯನ್ನು ಮಾಡಿದ ಮಹಾನ್ ಸಾಧಕರಿದ್ದು, ಅಂತಹ ಸಾಧಕರಲ್ಲಿ ಶಿವರಾಮ ಕಾರಂತರು ಕೂಡ ಒಬ್ಬರು. ಕಾರಂತರು ಓರ್ವ ವಾಸ್ತವವಾದಿ ಎಂದರೆ ತಪ್ಪಿಲ್ಲ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್, ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಮತ್ತು ಪರೀಕ್ಷಾಂಗ ಕುಲ ಸಚಿವ ಡಾ. ಎಚ್. ಜಿ. ಶ್ರೀಧರ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು