Friday, September 20, 2024
ಸುದ್ದಿ

ಜವಳಿ ಉದ್ಯಮದಲ್ಲಿ ಸಾಕಷ್ಟು ಪೈಪೋಟಿಯಿದೆ : ರಮೇಶ್ ಪಟೇಲ್ – ಕಹಳೆ ನ್ಯೂಸ್

ಪುತ್ತೂರು: ನಾವು ಏನು ಮಾಡುತ್ತೇವೆ ಎಂಬುದನ್ನು ನಮ್ಮ ಮನಸ್ಸಿನಲ್ಲಿ ದೃಢವಾಗಿ ಮನದಟ್ಟು ಮಾಡಿಕೊಂಡಿದ್ದಾಗ ಮಾತ್ರ ಯಾವುದನ್ನೇ ಆದರೂ ಸಾಧಿಸಬಹುದು. ಜವಳಿ ಉದ್ಯಮದಲ್ಲಿ ಸಾಕಷ್ಟು ಪೈಪೋಟಿ ಇದೆ. ಅದನ್ನು ಎದುರಿಸಿ ಮುಂದೆ ಸಾಗುವುದು ಒಂದು ಕಲೆ ಎಂದು ಪುತ್ತೂರಿನ ಜವಳಿ ಉದ್ಯಮಿ ರಮೇಶ್ ಪಟೇಲ್ ಹೇಳಿದರು.

ಅವರು ಇಲ್ಲಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪ್ರತಿಕೋದ್ಯಮ ವಿಭಾಗ ಆಯೋಜಿಸಿದ ಜನಮನ ಕಾರ‍್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜವಳಿ ಅಂಗಡಿಯ ಅನೇಕರ ಗಮನ ಸೆಳೆಯುತ್ತದೆ. ಒಂದೇ ವಸ್ತುವಿಗೆ ಕೆಲವೊಮ್ಮೆ ಅನೇಕ ಬೇಡಿಕೆ ಇರುತ್ತದೆ. ಹಾಗೆಂದು ಕೆಲವೊಂದಕ್ಕೆ ಬೇಡಿಕೆಯೇ ಇರುವುದಿಲ್ಲ. ಹಾಗಾಗಿ ಜನರ ಮನಸ್ಥಿತಿಯನ್ನು ಅರಿತು ಮುಂದೆ ಸಾಗಬೇಕಾದ್ದು ಅಗತ್ಯ. ಜವಳಿ ಉದ್ಯಮದಲ್ಲಿ ಹೆಚ್ಚು ಹೊಸತನವನ್ನು ನಿರ್ಮಾಣ ಮಾಡವುದರ ಜೊತೆಗೆ ನಾನಾ ಅಭಿವೃದ್ಧಿಗಳು ಆಗಬೇಕಿದೆ ಎಂದರು.

ಜಾಹೀರಾತು

ಯಾವುದೇ ಉದ್ಯಮಕ್ಕೆ ಮುಖ್ಯವಾಗಿ ತಾಳ್ಮೆ ಇರಬೇಕು. ಆಗ ಮಾತ್ರ ನಮ್ಮಲ್ಲಿ ಬೆಳೆಯುವ ಲಕ್ಷಣ ಮೂಡುತ್ತದೆ. ವಿದ್ಯಾರ್ಥಿಗಳು ಸ್ವಂತ ಉದ್ಯೋಗದ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ಸಾಕರಗೊಳಿಸುವ ಮನಸ್ಸು ರೂಪಿಸಿಕೊಳ್ಳಬೇಕು. ಆಸಕ್ತಿಯ ಹಾದಿಯಲ್ಲಿ ಹೆಚ್ಚಿನ ಶ್ರಮವನ್ನು ಪಟ್ಟರೆ ಕರ‍್ಯ ಸಾಧಿಸಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಜನಮನ ಕರ‍್ಯಕ್ರಮ ವಿದ್ಯರ್ಥಿಗಳಿಗೆ ಬೇರೆ ಬೇರೆ ರೀತಿಯ ಅನುಭವವನ್ನು ನೀಡುತ್ತಾದೆ. ಜೊತೆಗೆ ಒಳ್ಳೆಯ ಕನಸುಗಳನ್ನು ಕಾಣುವ ಅವಕಾಶವನ್ನು ನೀಡಿದೆ. ಸಾಮಾನ್ಯ ವ್ಯಕ್ತಿಯ ವೇದಿಕೆ ಇದು, ಅವರಿಗೊಂದು ಅವಕಾಶವನ್ನು ಕಲ್ಪಿಸುವ ಮತ್ತು ಅವರು ನಡೆದು ಬಂದ ಹಾದಿಯನ್ನು ತಿಳಿಸಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಮಾರ್ಗವನ್ನು ತೋರುವ ಕಾರ್ಯ ಇಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬ ವ್ಯಕ್ತಿಯು ಪ್ರತಿ ಹಂತದಲ್ಲಿ ಬೆಳೆಯಬೇಕು. ನಮ್ಮ ಕಾರ್ಯದಲ್ಲಿ ನಮ್ಮನ್ನು ನಾವು ಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಮತ್ತು ಐಕ್ಯೂಎಸಿಯ ಸಂಯೋಜಕ ಡಾ. ಎಚ್.ಜಿ ಶ್ರೀಧರ್ ಉಪಸ್ಥಿತರಿದರು. ಉಪನ್ಯಾಸಕಿ ಭವ್ಯ ಪಿ. ಆರ್ ನಿಡ್ಪಳ್ಳಿ ಸ್ವಾಗತಿಸಿದರು. ಉಪನ್ಯಾಸಕಿ ಪ್ರಜ್ಞಾ ವಂದಿಸಿ, ವಿದ್ಯಾರ್ಥಿನಿ ಸುಷ್ಮಾ ನಿರೂಪಣೆಗೈದರು.