Friday, November 15, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು : “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್ ಆತಿಥ್ಯ ಉದ್ಯಮದ ಕುರಿತು ಸಂವಾದ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ಅಕ್ಷಯ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಬಿ ಎಚ್ ಎಸ್ ವಿಭಾಗ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “ಡೆಲಿಸಿಯಾ” ಹಾಸ್ಪಿಟಲಿಟಿ ಕ್ಲಬ್ ಆತಿಥ್ಯ ಉದ್ಯಮದ ಕುರಿತು ಸಂವಾದ ಕಾರ್ಯಕ್ರಮ ವನ್ನು ಸಂಘಟಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀಯುತ ಯತೀರಾಜ್ ಪೂಜಾರಿ,ಪೆಸ್ಟ್ರಿ ಶೇಫ್ Ncl  ಕ್ರೂಸ್ ಲೈನ್, USA ಇವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಹಾಸ್ಪಿಟಾಲಿಟಿ ಸೈನ್ಸ್ ಗ್ರಾಹಕರಿಗೆ ಆಹಾರ ಮತ್ತು ವಸತಿ ಅಗತ್ಯಗಳನ್ನು ಪೂರೈಸುವ ಸೇವಾ ಉದ್ಯಮವಾಗಿದೆ. ಹಾಸ್ಪಿಟಾಲಿಟಿ ಸೈನ್ಸ್ ನಲ್ಲಿ ವಿವಿಧ ಆಡಳಿತಾತ್ಮಕ,ವ್ಯವಸ್ಥಾಪನಾ ಅಂಶಗಳAತಹ ವಿಭಿನ್ನ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳು ಹೊಂದಬೇಕಾದ ಕೌಶಲ್ಯಗಳ ಬಗ್ಗೆ ,ವಿಹಾರ ನೌಕಾಯಾನ ವಲಯದಲ್ಲಿ ಲಭ್ಯವಾಗುವ ಉದ್ಯೋಗ ಸಾಧ್ಯತೆ ಮತ್ತು ವ್ಯಾಪ್ತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿದವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಆಡಳಿತಧಿಕಾರಿಯಾದ ಅರ್ಪಿತ್ . ಟಿ. ಎ ಅವರು ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳಿಗೆ ಪ್ರಸ್ತುತ ಮತ್ತು ಭವಿಷ್ಯದಲ್ಲಿ ಧಾರಾಳವಾಗಿ ಉದ್ಯೋಗ ಅವಕಾಶಗಳು ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಲಭ್ಯವಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಕಲ ಕೌಶಲ್ಯ ಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಆಂತರಿಕ ಗುಣಮಟ್ಟದ ಭರವಸೆ ಕೋಶ ಯೋಜಕರಾದ ಕುಮಾರಿ ಭವ್ಯಶ್ರೀ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಿ ಎಚ್ ಎಸ್ ವಿಭಾಗದ ಮುಖ್ಯಸ್ಥರಾದ ಶ್ರೀ ರತ್ನಾಕರ ಪ್ರಭು, ಬಿ ಎಚ್ ಎಸ್ ವಿಭಾಗದ ಉಪನ್ಯಾಸಕಿ ಕುಮಾರಿ ಶ್ರತ ಉಪಸ್ಥಿತರಿದ್ದರು.

ಆತಿಥ್ಯ ಉದ್ಯಮದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಪ್ರಥಮ ಮತ್ತು ದ್ವಿತೀಯ ಬಿ ಎಚ್ ಎಸ್ ವಿದ್ಯಾರ್ಥಿಗಳು ಭಾಗವಹಿಸಿದರು .

ಡೆಲಿಸಿಯಾ ಕ್ಲಬ್ ನ ಸಂಚಾಲಕರಾದ ನಂದನ್ ಪೂಜಾರಿ ಇವರು ಸಂಪನ್ಮೂಲ ವ್ಯಕ್ತಿಯ ಕಿರುಪರಿಚಯವನ್ನು ಮಾಡಿದರು.
ಡೆಲಿಸಿಯಾ ಕ್ಲಬ್ ನಾಯಕನಾದ ಸಿಂಚನ್. ಬಿ. ಎಸ್ ಇವರು ಸ್ವಾಗತಿಸಿ, ನಿರೂಪಿಸಿದರು.