Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಪ್ರಜ್ಞಾನ ಸಾಹಿತ್ಯ ಸಂಘದ ವತಿಯಿಂದ ಕವನ ವಾಚನ ಸ್ಪರ್ಧೆ-ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀರಾಮ ಪ್ರಥಮದರ್ಜೆ ಕಾಲೇಜಿನಲ್ಲಿ ಪ್ರಜ್ಞಾನ ಸಾಹಿತ್ಯ ಸಂಘದ ವತಿಯಿಂದ ಪಠ್ಯಪುಸ್ತಕದಿಂದ ಆಯ್ದ ಕವನಗಳ ವಾಚನ ಸ್ಪರ್ಧೆ ನಡೆಯಿತು.

ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪರ್ಚನೆಗೈದು ಆರಂಭಗೊAಡ ಕಾರ್ಯಕ್ರಮದಲ್ಲಿ ಪಠ್ಯಪುಸ್ತಕದಿಂದ ಆಯ್ದ ಕವನಗಳನ್ನು ಮುಕ್ತವಾಗಿ 50 ವಿದ್ಯಾರ್ಥಿಗಳು ವಾಚಿಸಿದರು. ಬಿ. ಎ ವಿಭಾಗದಲ್ಲಿ ಪದ್ಮಶ್ರೀ ತೃತೀಯ ಬಿ. ಎ- ಪ್ರಥಮ , ಕವಿತಾ ದ್ವಿತೀಯ ಬಿ. ಎ ದ್ವಿತೀಯ ಶುಭಲಕ್ಷ್ಮಿ, ದ್ವಿತೀಯ ಬಿ. ಎ ಮತ್ತು ಕವನ ಪ್ರಥಮ ಬಿ. ಎ ತೃತೀಯ ಬಿ.ಕಾಂ ವಿಭಾಗದಲ್ಲಿ ಪಲ್ಲವಿ ತೃತೀಯ ಬಿ.ಕಾಂ ಪ್ರಥಮ ಮನ್ವಿತ ತೃತೀಯ ಬಿ.ಕಾಂ ದ್ವಿತೀಯ ವಿಜೇತ ತೃತೀಯ ಬಿ.ಕಾಂ ತೃತೀಯ ಬಿ. ಸಿ.ಎ ವಿಭಾಗದಲ್ಲಿ ಯಜ್ಞಶ್ರೀ ದ್ವಿತೀಯ ಬಿ.ಸಿ.ಎ ಪ್ರಥಮ ಅಶ್ವಿನಿ ದ್ವಿತೀಯ ಬಿ.ಸಿ.ಎ ದ್ವಿತೀಯ, ಗೌತಮಿ ತೃತೀಯ ಬಿ.ಸಿ.ಎ ತೃತೀಯ ಬಹುಮಾನವನ್ನು ಪಡೆಕೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅತಿಥಿ ಮತ್ತು ಅಧ್ಯಕ್ಷತೆಯನ್ನು ವಹಿಸಿದ್ದ ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತಿಕ ಸಂಸ್ಥೆ ಕರ್ನಾಟಕದ ಅಧ್ಯಕ್ಷರಾಗಿದ್ದ ಶ್ರೀ ವಿಜಯ್ ಕುಮಾರ್ ಜೈನ್ ಇವರು ಕವಿಗೋಷ್ಠಿಯ ಅಧ್ಯಕ್ಷಿಯ ನೆಲೆಯಲ್ಲಿ ಸಾಹಿತ್ಯದ ಪ್ರಕಾರಗಳು ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಕುರಿತು ಶುಭಾಂಸ ನುಡಿಗಳನ್ನಾಡುತ್ತಾ ವಿಜೇತರಿಗೆ ಅಭಿನಂದನಾ ಪತ್ರ, ಲೇಖನಿ ಮತ್ತು ಹೊತ್ತಗೆಯನ್ನು ಬಹುಮಾನವಾಗಿ ವಿತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕವನ ವಾಚಿಸಿದ ಎಲ್ಲರಿಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪನ್ಯಾಸಕರುಗಳು ಅಭಿನಂದನಾ ಪತ್ರ ನೀಡಿ ಗೌರವಿಸಿದರು. ತೀರ್ಪುಗಾರರಾಗಿ ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಮಾತಾಜಿ ಮತ್ತು ಹಿಂದಿಭಾಷಾ ಉಪನ್ಯಾಸಕಿ ಶ್ರೀಮತಿ ವಿಭಾನಿ ಮಾತಾಜಿ ಸಹಕರಿಸಿದರು.

ವೇದಿಕೆಯಲ್ಲಿ ಶ್ರೀರಾಮ ಪದವಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀಮತಿ ಸುಕನ್ಯ ಮತ್ತು ಶ್ರೀ ಯತಿರಾಜ್ ಮತ್ತು ಪ್ರಜ್ನಾನ ಸಾಹಿತ್ಯ ಸಂಘದ ನಿರ್ದೇಶಕಿಯಾದ ಶ್ರೀಮತಿ ರಶ್ಮಿತಾ ಕವಿಗೋಷ್ಠಿಗೆ ಚಾಲನೆಯಿತ್ತು, ಸಹ ನಿರ್ದೇಶಕಿಯಾದ ಶ್ರೀಮತಿ ಸಂಧ್ಯಾ ಸ್ವಾಗತಿಸಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯಾದ ಮನ್ವಿತಾ (ತೃತೀಯ ಬಿ. ಕಾಂ) ಪ್ರಾರ್ಥಿಸಿ, ಪದ್ಮಶೀ ( ತೃತೀಯ ಬಿ. ಎ ) ವಂದಿಸಿ, ಅಶ್ವಿನಿ ದ್ವಿತೀಯ (ಬಿ.ಸಿ.ಎ) ನಿರೂಪಿಸಿದರು. ಶಾಂತಿ ಮಂತ್ರದೊAದಿಗೆ ಕಾರ್ಯಕ್ರಮವು ಕೊನೆಗೊಂಡಿತು.