Friday, November 1, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಫುಡ್ ಕಾರ್ನಿವಲ್ 2024 ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು: ಕಾಲೇಜು ದಿನಗಳಲ್ಲೇ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವುದು ಅಗತ್ಯ. ಉದ್ಯಮ ಯಾರು ಬೇಕಾದರೂ ಆರಂಭಿಸಬಹುದು. ಅದರಲ್ಲಿ ಲಾಭ ಗಳಿಸಿದಾಗ ಮಾತ್ರವೇ ಯಶಸ್ವಿ ಉದ್ಯಮಿ ಎನಿಸಿಕೊಳ್ಳಲು ಸಾಧ್ಯ. ಕಾಲೇಜು ದಿನಗಳಲ್ಲೇ ಹಮ್ಮಿಕೊಳ್ಳುವ ಇಂತಹ ಫುಡ್ ಕಾರ್ನಿವಲ್‌ಗಳಿಂದ ವ್ಯವಹಾರ ಜ್ಞಾನ ಅಭಿವೃದ್ಧಿಯಾಗುತ್ತದೆ. ಗ್ರಾಹಕರನ್ನು ಸೆಳೆಯುವ ಕೌಶಲ್ಯವೂ ಕರಗತವಾಗುತ್ತದೆ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ದರ್ಬೆಯ ಶ್ರೀ ಫ್ಯಾಮಿಲಿ ರೆಸ್ಟೋರೆಂಟ್‌ನ ಮಾಲೀಕ ತೇಜಸ್.ಕೆ ಹೇಳಿದರು.

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ) ಕಾಲೇಜಿನ ವ್ಯವಹಾರ ಆಡಳಿತ ನಿರ್ವಹಣಾ ಸಂಘ ಮತ್ತು ಐಕ್ಯೂಎಸಿ ಘಟಕದ ಜಂಟಿ ಆಶ್ರಯದಲ್ಲಿ ಶನಿವಾರ ನಡೆದ ‘ಫುಡ್ ಕಾರ್ನಿವಲ್’ ಫುಡ್ ಮಾರ್ಕೆಟಿಂಗ್ ಎಕ್ಸ್ಪೋ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಮಾತನಾಡಿ, ಫುಡ್ ಫೆಸ್ಟ್ನಲ್ಲಿ ಆಹಾರ ತಿನ್ನುವುದು ಮಾತ್ರ ಮುಖ್ಯವಲ್ಲ, ವ್ಯವಹಾರದ ವಿಧಾನಗಳು ಪ್ರಮುಖ ಪಾತ್ರವಹಿಸುತ್ತವೆ. ವ್ಯವಹಾರದ ಆಗುಹೋಗುಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಅರಿತುಕೊಂಡರೆ ಭವಿಷ್ಯದಲ್ಲಿ ಉತ್ತಮ ಉದ್ಯಮಿಗಳಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಕಾಲೇಜಿನ ಬಿಬಿಎ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ತೃತೀಯ ಬಿಎ ವಿಭಾಗದ ವಿದ್ಯಾರ್ಥಿನಿ ಧನ್ಯಶ್ರೀ ನಿರೂಪಿಸಿದರು. ಫುಡ್ ಕಾರ್ನಿವಲ್ 2024ನಲ್ಲಿ ಬಿಬಿಎ ವಿಭಾಗದ ಒಟ್ಟು 14 ತಂಡಗಳು ಭಾಗವಹಿಸಿದ್ದವು.

ಫೋಟೋ ಕ್ಯಾಪ್ಶನ್: ವೇದಿಕೆಯಲ್ಲಿ ಶ್ರೀ ಫ್ಯಾಮಿಲಿ ರೆಸ್ಟೋರೆಂಟ್‌ನ ಮಾಲೀಕ ತೇಜಸ್.ಕೆ, ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್, ಬಿಬಿಎ ವಿಭಾಗದ ಮುಖ್ಯಸ್ಥೆ ರೇಖಾ.ಪಿ, ಉಪನ್ಯಾಸಕಿ ಅನ್ನಪೂರ್ಣ ಮುಂತಾದವರು ಉಪಸ್ಥಿತರಿದ್ದರು.