Thursday, November 21, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಹೆಜ್ಜೇನು ದಾಳಿಯಿಂದ ಮಗುವನ್ನು ರಕ್ಷಿಸಿದ ಮೇಲಂತ ಬೆಟ್ಟು ಗ್ರಾಮ ಪಂಚಾಯತ್ ಸಿಬ್ಬಂದಿ-ಕಹಳೆ ನ್ಯೂಸ್

ಬೆಳ್ತಂಗಡಿ: ಶನಿವಾರ ಸಂಜೆ ಮೇಲಂತ ಬೆಟ್ಟು ಗ್ರಾಮ ಪಂಚಾಯಿತಿ ಬಳಿ ಹೆಜ್ಜೇನು ಜನರ ಮೇಲೆ ದಾಳಿ ಮಾಡಿತು ಜನ ಭಯ ಯಿಂದ ಓಡಿಹೋದರು ಸುತ್ತಲೂ ಇದ್ದಂಥ ಮನೆಯವರು ಭೀತಿ ಯಿಂದ ಮನೆಬಾಗಿಲು ಮುಚ್ಚಿದರು.
ಆಗತಾನೆ ಸಂತ ತೇರೆಜ ಶಾಲೆ ಯ 8ನೇ ತರಗತಿ ವಿದ್ಯಾರ್ಥಿ ತೀರ್ಥೇಶ್ ಮೇಲಂತ ಬೆಟ್ಟು ಶಾಲೆಯಿಂದ ಮನೆ ಕಡೆ ಬರುತಿದ್ದು ಇವರ ಮೇಲೆ ತೀವ್ರ ವಾಗಿ ಹೆಜ್ಜೇನು ದಾಳಿ ನಡೆಸಿತು ಮಗು ದಾರಿತೋರದೆ ಕೆಲ ಮನೆಗಳಿಗೆ ಓಡಿತು ಭಯಭೀತಿಯಿಂದಾಗಿ ಮನೆ ಬಾಗಿಲು ಮುಚ್ಚಿತ್ತು.

ಹೆಜ್ಜೇನು ದಾಳಿಯಿಂದ ನೋವು ಉರಿ ತಾಳಲಾರದೆ ಅತ್ತು ಕರೆದರೂ ರಕ್ಷಣೆಗೆ ಯಾರು ಇಲ್ಲದಾಗ ಕೊನೆಗೆ ಉಪಾಯ ಇಲ್ಲದೆ ಪಂಚಾಯತ್ ಬಳಿ ಓಡಿದಾಗ ಪಂಚಾಯತ್ ಲೈಬ್ರೇಯನ್ ಸಿಬ್ಬಂದಿಯಾದ ಚಂದ್ರವತಿ ಯೋಗೀಶ್ ಪೂಜಾರಿ ಗೇರು ಕಟ್ಟೆ ಇವರು ದೇವತೆ ಯಂತೆ ಬಂದು ಮುಚ್ಚಿದ್ದ ಬಾಗಿಲನ್ನು ತೆರೆದು ಮಗುವನ್ನು ಪಂಚಾಯತ್ ಒಳಗೆ ಕರ್ಕೊಂಡು ಹೋದರು ಆದರೂ ಬೆನ್ನು ಬಿಡದ ಹೆಜ್ಜೇನು ಅಲ್ಲಿಯೂ ದಾಳಿ ಮಾಡಿತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಕ್ಕೆ ಅಧ್ಯಕ್ಷರ ಕೊಠಡಿಯ ಒಳಗೆ ಹೋಗಿ ಬಾಗಿಲು ಮುಚ್ಚಿ ನೋಡಿದಾಗ ಅಲ್ಲಿಯೂ ಕೂಡ ಹೆಜ್ಜೇನು ಇದ್ದು ದಾಳಿ ಮಾಡಿತು
ಮತ್ತೆ ಚಂದ್ರವತಿಯವರು ಹಿಡುಸುಡಿ ಸಹಾಯದಿಂದ ಬಹಳಷ್ಟು ಸಂಖ್ಯೆ ಯಲ್ಲಿ ಇದ್ದ ಹೆಜ್ಜೇನುವನ್ನು ಕೊಂದು ಮಗುವಿನ ಬಟ್ಟೆ ಬಿಚ್ಚಿಸಿ ಹೆಜ್ಜೇನು ಮುಳ್ಳನ್ನು ತುರ್ತಾಗಿ ತೆಗೆದು ಮನೆಯವರಿಗೆ ಸುದ್ದಿ ಮುಟ್ಟಿಸಿದರು ನಂತರ ಮಗುವನ್ನು ಆಸ್ಪತ್ರೆ ಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತು ಮಗು ಈಗಅರೋಗ್ಯ ದಿಂದ ಇದ್ದು ಚೇತರಿಸಿ ಕೊಳ್ಳು ತ್ತಿದ್ದಾನೆ.
ಪಂಚಾಂಯತ್ ನೌಕರ ರಾದ ಚಂದ್ರವತಿ ಯವರ ಸಮಯ ಪ್ರಜ್ಞೆ ತಾಯಿ ಮಮತೆ ಧೈರ್ಯ ವು ಗ್ರಾಮಸ್ಥರ ಪ್ರೀತಿಗೆ ಪಾತ್ರವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು