Friday, November 1, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಲಿಟ್ಲ್ ಫ್ಲವರ್ ಶಾಲೆಯಿಂದ ಕಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಬಡ್ಡಿ ಆಟಗಾರ್ತಿಯರಿಗೆ ಅಭಿನಂದನಾ ಸಮಾರಂಭ ಮತ್ತು ಭವ್ಯ ಮೆರವಣಿಗೆಯಲ್ಲಿ ಅದ್ದೂರಿ ಸ್ವಾಗತ -ಕಹಳೆ ನ್ಯೂಸ್

ಪುತ್ತೂರು: 14 ವಯೋಮಾನದ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಸತತ ಎರಡನೇ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಪುತ್ತೂರಿನಲ್ಲಿ ಇತಿಹಾಸ ನಿರ್ಮಿಸಿದ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರಿಗೆ ಶಾಲೆಯ ವತಿಯಿಂದ ಅದ್ದೂರಿ ಸ್ವಾಗತ ಹಾಗೂ ಅಭಿನಂದನಾ ಸಮಾರಂಭ ಅ.25ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿಗಳನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಮಾಯಿದೇ ದೇವುಸ್ ಚರ್ಚ್ ಬಳಿಯಿಂದ ಪ್ರಾರಂಭಗೊAಡ ಮೆರವಣಿಗೆಗೆ ಚರ್ಚ್ನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಪ್ರಾರ್ಥನೆ ಸಲ್ಲಿಸಿ, ವಿದ್ಯಾರ್ಥಿಗಳಿಗೆ ಚಿನ್ನದ ಪದಕ ತೊಡಿಸಿ ಅಭಿನಂದಿಸಿದರು. ನಂತರ ತೆರೆದ ಎರಡು ವಾಹನದನಲ್ಲಿ ವಿದ್ಯಾರ್ಥಿಗಳ ಮೆರವಣಿಗೆಯಲ್ಲಿ ಸ್ವಾಗತ ಮೆರವಣಿಗೆ ನಡೆಯಿತು. ಚರ್ಚ್ ಬಳಿಯಿಂದ ಹೊರಟ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ದರ್ಬೆ ಕುಡ್ಗಿ ಎಂಟರ್ ಪ್ರೈಸಸ್ ಬಳಿ ಸಾಗಿ ಅಲ್ಲಿಂದ ಬ್ಯಾಂಡ್ ವಾಲಗದೊಂದಿಗೆ ಆಕರ್ಷಕ ಮೆರವಣಿಗೆಯ ಮೂಲಕ ಶಾಲೆ ತನಕ ಸಾಗಿಬಂದಿದೆ.

ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಪೋರೇಟ್ ಮ್ಯಾನೇಜರ್, ಶಿಕ್ಷಣ ಸಂಯೋಜಕಕರಿಗೆ ಸ್ವಾಗತ:
ಮಂಗಳೂರು ಪ್ರಾಂತ್ಯದ ಬೆಥನಿ ಶಿಕ್ಷಣ ಮಂಡಳಿಯ ಕಾರ್ಪೋರೇಟ್ ಮ್ಯಾನೇಜರ್ ಆಗಿ ಲಿಲ್ಲಿ ಪಿರೇರಾ ಬಿ.ಎಸ್. ಹಾಗೂ ಸಂಯೋಜಕಿ ಮಾರಿಯೋಲ ಬಿ,ಎಸ್‌ರವರು ನೇಮಕಗೊಂಡು ಪ್ರಥಮ ಬಾರಿಗೆ ಶಾಲೆಗೆ ಭೇಟಿ ನೀಡಿದ ಅವರನ್ನು ಶಾಲಾ ಸ್ಕೌಟ್, ಗೈಡ್ಸ್ ವಿದ್ಯಾರ್ಥಿಗಳ ಆಕರ್ಷಕ ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ನಡೆದ ಕಾರ್ಯಕ್ರಮದಲ್ಲಿ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಪೋಷಕರನ್ನು ಗೌರವಿಸಲಾಯಿತು. ನಂತರ 14ರ ವಯೋಮಾನದ ಕಬಡ್ಡಿ ಪಂದ್ಯಾಟದಲ್ಲಿ ತಾಲೂಕು, ಜಿಲ್ಲೆ, ವಲಯ ಹಾಗೂ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿದ ವಿದ್ಯಾರ್ಥಿಗಳಾದ ಜುಏನಾ ಡ್ಯಾಝಲ್ ಕುಟಿನ್ಹಾ, ಜೆನಿಟ ಸಿಂಧು ಪಸನ್ನ, ಸನ್ನಿಧಿ, ಸುಶ್ರಾವ್ಯ, ಹಾರ್ದಿಕ ಪಿ., ಜಶ್ಮಿತಾ, ಫಾತಿಮಾತ್ ಅಫ್ರ, ಫಾತಿಮಾತ್ ಶೈಮ, ಸಾಕ್ಷಿ, ನಮೃತಾ ಶೆಟ್ಟಿ , ಪೂರ್ವಿ ಕೆ., ಕೃತಿಕಾ, ಘನಶ್ರೀ., ಸಾಕ್ಷಿ ಹರೀಶ್ ಕಲ್ಲರ್ಪೆಯವರನ್ನು ಅಭಿನಂದಿಸಲಾಯಿತು.

ಜಾಹೀರಾತು
ಜಾಹೀರಾತು

ಎಸ್.ಐ ಆಂಜನೇಯ ರೆಡ್ಡಿ, ಮೋಹನದಾಸ್ ರೈ, ರಝಾಕ್ ಬಪ್ಪಳಿಗೆಯವರಿಂದ ನಗದು ಪುರಸ್ಕಾರ:
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರಿಗೆ ನಗರ ಠಾಣಾ ಎಸ್.ಐ ಆಂಜನೇಯ ರೆಡ್ಡಿಯವರು ಸ್ವಾಗತ ಮೆರವಣಿಗೆಯ ಸಂದರ್ಭದಲ್ಲಿ ಚಿನ್ನದ ಪದಕ ನೀಡಿದರು. ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ನಗದು ಪುರಸ್ಕಾರ ನೀಡಿದರು. ದಾನಿಗಳಾದ ಮೋಹನದಾಸ ರೈ ಹಾಗೂ ರಝಾಕ್ ಬಪ್ಪಳಿಗೆಯವರು ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದರು.

ಸನ್ಮಾನ:
ಎರಡನೇ ಬಾರಿಗೆ ರಾಷ್ಟ್ರ ಮಟ್ಟದ ತರಬೇತುದಾರರಾಗಿ ಆಯ್ಕೆಯಾಗಿರುವ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್, ಟೀಮ್ ಮ್ಯಾನೇಜರ್ ಶಿಕ್ಷಕಿ ವಿಲ್ಮಾ ಫೆರ್ನಾಂಡೀಸ್‌ರವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಎಸ್.ಐ ಆಂಜನೇಯ ರೆಡ್ಡಿ, ಮೋಹನದಾಸ್ ರೈ, ಮತ್ತು ರಝಾಕ್ ಬಪ್ಪಳಿಗೆಯವರು ಸನ್ಮಾನಿಸಿದರು. ಮಂಗಳೂರು ಪ್ರಾಂತ್ಯದ ಬೆಥನಿ ಶಿಕ್ಷಣ ಮಂಡಳಿಯ ಕಾರ್ಪೋರೇಟ್ ಮ್ಯಾನೇಜರ್ ಲಿಲ್ಲಿ ಪಿರೇರಾ ಬಿ.ಎಸ್., ಶಿಕ್ಷಣ ಸಂಯೋಜಕಕ ಭಗಿನಿ ಮಾರಿಯೋಲಾ ಬಿ. ಎಸ್.ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

 

ಸಮಾರಂಭದ ಅಧ್ಯಕ್ಷತೆಯನ್ನು ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಕಾರ್ಪೊರೇಟ್ ಮ್ಯಾನೇಜರ್ ಭಗಿನಿ ಲಿಲ್ಲಿ ಪಿರೇರ ವಹಿಸಿದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್. ಪುತ್ತೂರು ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಆಂಜನೇಯ ರೆಡ್ಡಿ,ಮಂಗಳೂರು ಪ್ರಾಂತ್ಯದ ಬೆಥನಿ ಶಿಕ್ಷಣ ಮಂಡಳಿಯ ಶಿಕ್ಷಣ ಸಂಯೋಜಕಕ ಭಗಿನಿ ಮಾರಿಯೋಲಾ ಬಿ. ಎಸ್., ಶಾಲಾ ಸಂಚಾಲಕಿ ಪ್ರಶಾಂತಿ ಬಿ.ಎಸ್., ಉದ್ಯಮಿಗಳು ದಾನಿಯೂ ಆಗಿರುವ ಮೋಹನದಾಸ್ ರೈ ಕುಂಬ್ರ, ದಾನಿಗಳಾದ ಸಂತೋಷ್ ಡಿ ಅಲ್ಮೆಡಾ, ಸುನಿತಾ ಡಿ ಅಲ್ಮೇಡಾ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರಾಮಚಂದ್ರ ಭಟ್, ನಿವೃತ್ತ ಶಿಕ್ಷಕ ಜೊಸೆಫ್, ನಗರ ಠಾಣೆಯ ಸ್ಕರಿಯ,ಪ್ರವೀಣ್ ಮಡ್ಯoಗಳ ನಿರ್ದೇಶಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕುಂಬ್ರ, ಶಾಲಾ ರಕ್ಷಕ ಶಿಕ್ಷಕ ಸಂಘದ ಮಾಜಿ ಉಪಾಧ್ಯಕ್ಷ ರಘುನಾಥ ರೈ, ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕೋಶಾಧಿಕಾರಿ ರಝಾಕ್ ಬಪ್ಪಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಷಾ ಬಿ.ಎಸ್ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಾಸ್ಲಿನ್ ಪಾಯಸ್ ವಂದಿಸಿದರು. ಶಿಕ್ಷಕರು ಸಹಕರಿಸಿದರು.