Wednesday, December 4, 2024
ಸುದ್ದಿ

ಪುಡಿ ರಾಜಕಾರಣಿ ಎಂದ ಬಿಕೆ ಹರಿಪ್ರಸಾದ್ ಗೆ ಖಡಕ್ ತಿರುಗೇಟು ಕೊಟ್ಟ ಪೇಜಾವರ ಶ್ರೀ-ಕಹಳೆ ನ್ಯೂಸ್

ಮಂಗಳೂರು: ಪುಡಿ ರಾಜಕಾರಣಿಗಳಂತೆ ಮಾತನಾಡುತ್ತಾರೆ ಎಂದು ತಮ್ಮ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಕಾಂಗ್ರೆಸ್ ಎಂಎಲ್ ಸಿ ಬಿಕೆ ಹರಿಪ್ರಸಾದ್ ವಿರುದ್ಧ ಪೇಜಾವರಶ್ರೀಗಳು ಖಡಕ್ ತಿರುಗೇಟು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಜಾತಿಗಣತಿ ಬಗ್ಗೆ ಮಾತನಾಡಿದ್ದ ಪೇಜಾವರ ಶ್ರೀಗಳನ್ನು ಪುಡಿ ರಾಜಕಾರಣಿ ಎಂದು ಬಿಕೆ ಹರಿಪ್ರಸಾದ್ ಕರೆದಿದ್ದರು. ಜಾತಿಗಣತಿಯ ಅಗತ್ಯವೇನು ಎಂದಿದ್ದ ಶ್ರೀಗಳಿಗೆ ಪುಡಿ ರಾಜಕಾರಣಿಯಂತೆ ಮಾತನಾಡುತ್ತಿದ್ದಾರೆ. ಅಷ್ಟು ರಾಜಕೀಯ ಮಾತನಾಡಬೇಕೆಂದರೆ “ಖಾವಿ ಕಳಚಿಟ್ಟು ಬರಲಿ” ಎಂದು ಬಿಕೆ ಹರಿಪ್ರಸಾದ್ ಹಗುರವಾಗಿ ಮಾತನಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ವಿರುದ್ಧ ಶ್ರೀಗಳು ತಿರುಗೇಟು ನೀಡಿದ್ದಾರೆ. ‘ಜಾತಿ ವ್ಯವಸ್ಥೆಯೇ ಎಲ್ಲಾ ಅನಿಷ್ಠಗಳಿಗೂ ಮೂಲ ಎನ್ನುವವರೇ ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿದ್ದಾರೆ. ಜಾತಿ ವ್ಯವಸ್ಥೆ ಇರಬಾರದು ಎಂದು ಒಂದು ಕಡೆ ಹೇಳುವವರೇ ಇಂದು ಜಾತಿಗಣತಿ ಮಾಡಲು ಹೊರಟಿದ್ದಾರೆ. ಜಾತಿ ವ್ಯವಸ್ಥೆ ಇರಬಾರದು ಎಂದಾದರೆ ಜಾತಿ ಗಣತಿ ಯಾಕೆ ಬೇಕು ಎಂದು ನಾನು ಕೇಳಿದ್ದೆ. ನಾನೇನು ಯಾರನ್ನೂ ಕರೆದು ಹೀಗೆ ಮಾತನಾಡಲಿಲ್ಲ. ಲೋಕದ ವ್ಯವಸ್ಥೆಯಲ್ಲಿ ನಮ್ಮಲ್ಲಿ ಬಂದು ನಿಮ್ಮ ಅಭಿಪ್ರಾಯ ಏನು ಎಂದು ಕೇಳಿದಾಗ ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಅನ್ನೋದು ನಮ್ಮ ಅಭಿಪ್ರಾಯ ಎಂದಿದ್ದೆ. ಹೀಗೆ ಹೇಳಿದ್ದನ್ನು ಪುಡಿ ರಾಜಕಾರಣಿ ಎನ್ನುತ್ತಾರೆ. ಹಾಗಾದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮಲ್ಲಿ ಇರುವುದು ಹೌದೋ, ಅಲ್ವೋ ಹೇಳಲಿ. ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮಲ್ಲಿ ಇದೆ ಎಂದಾದರೆ ಇಲ್ಲಿ ಈ ದೇಶದ ಎಲ್ಲಾ ಪ್ರಜೆಗಳಿಗೆ ಮಾತನಾಡಲು ಹಕ್ಕಿದೆ. ಮಠಾಧಿಪತಿ ಎಂದಲ್ಲ, ಸಾಮಾನ್ಯ ಪ್ರಜೆಗೂ ಮಾತನಾಡುವ ಹಕ್ಕಿದೆ. ಹೀಗಿರುವಾಗ ಖಾವಿ ತೆಗೆದು ಬಂದರೆ ಉತ್ತರ ಕೊಡುತ್ತೇನೆ ಎಂದು ಹೇಳುವುದರ ಅರ್ಥವೇನು? ಅಂದರೆ ಸಮಾಜದಲ್ಲಿ ಮಾತನಾಡುವ ಹಕ್ಕು ಇರುವುದು ರಾಜಕಾರಣಗಳಿಗೆ ಮಾತ್ರವಾ? ಪ್ರಜೆಗಳಿಗೆ ಹಕ್ಕಿಲ್ಲ, ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ ಎಂದು ಹೇಳಲಿ. ಈಗ ಇರೋದು ಪ್ರಜಾಪ್ರಭುತ್ವ ಅಲ್ಲ, ರಾಜಕಾರಣಿಗಳ ರಾಜ್ಯ ಎಂದು ಹೇಳಲಿ. ಹಾಗಿಲ್ಲ ಅಂತಾದ್ರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೀಠಾಧಿಪತಿ ಮಾತ್ರವಲ್ಲ, ಸಾಮಾನ್ಯ ಪ್ರಜೆಗೂ ಅಭಿಪ್ರಾಯ ಮಂಡಿಸುವ ಹಕ್ಕಿದೆ’ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.