Recent Posts

Friday, November 1, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಾಣಿ ಸಂತೆ ಮಾರುಕಟ್ಟೆಯಲ್ಲಿ ನಡೆದ ದೀಪ ಸಂಜೀವಿನಿ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಬಂಟ್ವಾಳ ತಾಲೂಕು ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಸಹಯೋಗದಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮವು ಮಾಣಿ ಸಂತೆ ಮಾರುಕಟ್ಟೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಾಣಿ ಪಂಚಾಯತ್ ಚುನಾಯಿತ ಪ್ರತಿನಿಧಿ ಶ್ರೀಮತಿ ರಮಣಿಯವರು ಉದ್ಘಾಟಿಸಿ, ಶುಭ ಕೋರಿದರು. ವೇದಿಕೆಯಲ್ಲಿ ಬಂಟ್ವಾಳ ತಾಲೂಕು ಸಂಜೀವಿನಿ ಅಭಿಯಾನ ಘಟಕದ ಸಿಬ್ಬಂದಿ ವ್ಯವಸ್ಥಾಪಕರು ಶ್ರೀ ಪ್ರದೀಪ್ ಕಾಮತ್, ವಲಯ ಮೇಲ್ವಿಚಾರಕರು ಶ್ರೀ ಮತಿ ಕುಸುಮ, ಒಕ್ಕೂಟ ದ ಸಿಬ್ಬಂದಿ ಯವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವಿಧ ರೀತಿಯ ದೀಪಗಳ ಮಾರಾಟ ಉತ್ತಮವಾಗಿ ನಡೆಯಿತು. ಜೊತೆಗೆ ಸಂಜೀವಿನಿ ಮಾಸಿಕ ಸಂತೆಯನ್ನು ನಡೆಸಲಾಯಿತು. ಪೆರಾಜೆ, ನೆಟ್ಲ ಮೂಡ್ನೂರು, ಅನಂತಾಡಿ, ಮಾಣಿ, ವೀರಕಂಬ, ಕಡೆಶಿವಾಲಯ , ಬಾಳ್ತಿಲ, ಗೊಳ್ತಮಜಲು, ವೀರಕಂಬ, ಬರಿಮಾರು, ಕೆದಿಲ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸದಸ್ಯೆಯರು ಈ ಮಾಸಿಕ ಸಂತೆಯಲ್ಲಿ ಭಾಗವಹಿಸಿ ತಾವು ತಯಾರಿಸಿದ /ಬೆಳೆಸಿದ ಉತ್ಪನ್ನಗಳಾದ ಉಪ್ಪಿನಕಾಯಿ, ಫಿನಾಯಿಲ್, ಮಸಾಲ ಹುಡಿ, ಹಪ್ಪಳ, ಸಂಡಿಗೆ, ಬೇಕರಿ ಉತ್ಪನ್ನ, ದೀಪದ ಬತ್ತಿ, ಮೆಂತ್ಯೆ ಮದ್ದು, ಕμÁಯ ಹುಡಿ, ವಿವಿಧ ಬಗೆಯ ಬುಟ್ಟಿ, ಗೆರಸೆ, ಮಣ್ಣಿನ ಮಡಿಕೆ, ವೀಳ್ಯದೆಲೆ, ಮುಳ್ಳು ಸೌತೆ, ಹೀರೆಕಾಯಿ, ಬಸಳೆ, ಸೋರೆಕಾಯಿ,ಇತ್ಯಾದಿ ಉತ್ಪನ್ನಗಳನ್ನು ಮಾರಾಟ ಮಾಡಿ ಆದಾಯ ಗಳಿಸಿದರು. ಮಣ್ಣಿನ ಹಣತೆಯ ಬೇಡಿಕೆ ಉತ್ತಮವಾಗಿತ್ತು.

ಜಾಹೀರಾತು
ಜಾಹೀರಾತು