Sunday, January 19, 2025
ಕ್ರೈಮ್ದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರಿಲ್ಲಿ ಶಿವಳ್ಳಿ ಸ್ಪಂದನ ಬ್ರಾಹ್ಮಣ ಸಂಘದ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ : ಭಾಸ್ಕರ ಭಟ್ ಮತ್ತು ನಕಲಿ ಪದಾಧಿಕಾರಿಗಳ ವಿರುದ್ಧ ಕೇಸ್ ದಾಖಲು – ಕಹಳೆ ನ್ಯೂಸ್

ಮಂಗಳೂರು: ಶಿವಳ್ಳಿ ಸ್ಪಂದನ ಬ್ರಾಹ್ಮಣ ಸಂಘದ (Shivalli Spandana Organization) ಹೆಸರಿನಲ್ಲಿ ನಕಲಿ ಲೆಟರ್ ಹೆಡ್, ಸೀಲ್ ಬಳಸಿ ವಂಚನೆ ಮಾಡಿದ ಭಾಸ್ಕರ ಭಟ್ ಮತ್ತು ನಕಲಿ ಪದಾಧಿಕಾರಿಗಳ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ (Kadri Police Station) ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾಸ್ಕರ ಭಟ್‌ ಬಿ ಮಂಗಳಾದೇವಿ ಎಂಬವರು ತಾವೇ ಕಾರ್ಯದರ್ಶಿ ಎಂದು ಹೇಳಿಕೊಂಡು ಸಂಘದ ನಕಲಿ ಕಾಗದ ಪತ್ರ ತಯಾರಿಸಿ, ಲೆಟರ್ ಹೆಡ್ ಮತ್ತು ಸೀಲ್ ಬಳಸಿ ವಂಚನೆ ಮಾಡಿದ್ದಾರೆ ಎಂದು ಶಿವಳ್ಳಿ ಸ್ಪಂದನ ಕಾರ್ಯದರ್ಶಿ ಕದ್ರಿಯ ಕೆ.ಕೃಷ್ಣ ಭಟ್ ದೂರು ನೀಡಿದ್ದರು.

ಡಿಆರ್ ರಿಜಿಸ್ಡ್ರಾರ್ ಕಚೇರಿಗೆ ಸಂಘದ ನವೀಕರಣ ಮಾಡಲು ಹೋದಾಗ ಅಲ್ಲಿ ಭಾಸ್ಕರ ಭಟ್ ಬೇರೆಯೇ ಪದಾಧಿಕಾರಿಗಳ ಪಟ್ಟಿ ನೀಡಿ ಅರ್ಜಿ ಸಲ್ಲಿಸಿದ್ದರು.