Sunday, January 19, 2025
ಸಿನಿಮಾಸುದ್ದಿ

ಗುಡ್​ನ್ಯೂಸ್  ಕೊಟ್ಟ  ಸ್ಯಾಂಡಲ್​ವುಡ್​ ನ ಮುದ್ದಾದ ಜೋಡಿ ಹರಿಪ್ರಿಯಾ-ವಸಿಷ್ಠ ಸಿಂಹ- ಕಹಳೆ ನ್ಯೂಸ್

ಚಂದನವನದ ಚೆಲುವೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಸ್ಯಾಂಡಲ್​ವುಡ್​ ನ ಮುದ್ದಾದ ಜೋಡಿಯಾಗಿದ್ದಾರೆ. ಕೆಲವು ದಿನಗಳಿಂದ ಹರಿಪ್ರಿಯಾ ಅವರು ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಸಾಕಷ್ಟು ವೈರಲ್‌ ಆಗಿತ್ತು. ಜತೆಗೆ ನಟಿಯ ಬೇಬಿ ಬಂಪ್‌ ಫೋಟೋಗಳು ವೈರಲ್‌ ಆಗಿದ್ದವು. ಈ ಎಲ್ಲ ವದಂತಿಗಳಿಗೆ ದಂಪತಿ ಫುಲ್‌ ಸ್ಟಾಪ್‌ ಇಟ್ಟಿದೆ. ಕನ್ನಡ ರಾಜ್ಯೋತ್ಸವ ದಿನದಂದೇ ಸಿಹಿ ಸುದ್ದಿ ಶೇರ್‌ ಮಾಡಿಕೊಂಡಿದೆ ಜೋಡಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ದಿನಗಳ ಹಿಂದೆಯಷ್ಟೇ ನಟಿಯ ಬೇಬಿ ಬಂಪ್‌ ಫೋಟೋಗಳು ವೈರಲ್‌ ಆಗಿದ್ದವು. ರೆಸಾರ್ಟ್‌ಗೆ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಕಾರಿನಿಂದ ಇಳಿದು ಬರುತ್ತಿರುವುದು ಹಾಗೂ ರೆಸಾರ್ಟ್‌ನಲ್ಲಿ ಎಂಜಾಯ್ ಮಾಡುವ ದೃಶ್ಯಗಳ ವಿಡಿಯೋ ಭರ್ಜರಿ ವೈರಲ್‌ ಆಗಿತ್ತ ಇದರಲ್ಲಿ ಹರಿಪ್ರಿಯಾ ಬೇಬಿ ಬಂಪ್‌ ಫೋಟೋ ವೈರಲ್‌ ಆಗಿತ್ತು. ಇದೀಗ ಸ್ವತಃ ನಟಿಯೇ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹರಿಪ್ರಿಯಾ ಪೋಸ್ಟ್‌ ಮಾಡಿದ್ದೇನು?

ಪ್ರೀತಿಯ ಕನ್ನಡ ಮನಸ್ಸುಗಳಿಗೆ ಕರ್ನಾಟಕ ರಾಜ್ಯೋತ್ಸವದ ಹಾಗೂ ದೀಪಾವಳಿಯ ಶುಭಾಶಯಗಳು. ಈ ಶುಭ ದಿನದಂದು, ನಿಮ್ಮೆಲ್ಲರೊಡನೆ ಶುಭಸುದ್ದಿಯೊಂದನ್ನು ಹಂಚಿಕೊಳ್ಳುವಾಸೆ ನಮ್ಮದು. ನಿಮ್ಮಲ್ಲಿ ಬಹುತೇಕರು ಊಹಿಸಿದ್ದು ಸರಿಯೇ.. ಹೌದು, ನಾವು ನಮ್ಮ ಕುಡಿಗಾಗಿ ಎದುರುನೋಡುತ್ತಿದ್ದೇವೆ. ನಿಮ್ಮೆಲ್ಲರ ಹಾರೈಕೆ- ಆಶೀರ್ವಾದಗಳ ನಿರೀಕ್ಷೆಯಲ್ಲಿ ನಿಮ್ಮ ಸಿಂಹಪ್ರಿಯ’ ಎಂದು ಪೋಸ್ಟ್ ಮಾಡಿಕೊಂಡಿದ್ದಾರೆ.

ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ಆಗಿದ್ದರು. ಪ್ರೀತಿಸಿ ಮದುವೆಯಾದ ಈ ಜೋಡಿ ಸಂತೋಷವಾಗಿ ಜೀವನವನ್ನು ಸಾಗಿಸ್ತಾ ಇದ್ದಾರೆ. ಬಳಿಕ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್​ ಕೂಡ ಮಾಡಿಕೊಂಡಿದ್ರು. ಹರಿಪ್ರಿಯಾ ಕನ್ನಡ ಅಷ್ಟೇ ಅಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ.