ಕುಂದಾಪುರ ತಾಲೂಕು ಭಜನ ಮಂಡಳಿಗಳ ಒಕ್ಕೂಟ (ರಿ) ಕುಂದಾಪುರ ಇದರ ನೇತೃತ್ವದಲ್ಲಿ ಭಜನಾ ಮಂಡಳಿಯ ಬಗ್ಗೆ ಭಜಕರ ಬಗ್ಗೆ ನಿಂದನೆ ಮಾಡಿದವರ ವಿರುದ್ಧ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರೊಂದಿಗೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.
ಇನ್ನು ಮುಂದೆ ಯಾವುದೇ ವ್ಯಕ್ತಿಯು ಈ ರೀತಿಯ ನಿಂದನೆ ಆಗಲಿ ಹೇಳಿಕೆಯಾಗಲಿ ನೀಡಬಾರದೆಂದು, ಅದಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.ಮನವಿ ನೀಡಲು ಆಗಮಿಸಿದಂತ ಎಲ್ಲಾ ಭಜಕರಿಗೆ, ಪದಾಧಿಕಾರಿಗಳಿಗೆ ಹಾಗೂ ವಿವಿಧ ಸಂಘಟನೆಗಳಿಗೆ ಒಕ್ಕೂಟದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ಉಪಸ್ಥಿತರಿದ್ದ ತಾಲೂಕು ಒಕ್ಕೂಟದ ಅಧ್ಯಕ್ಷರಾದ ನಿತಿನ್ ವಿಠಲವಾಡಿ,ಗೌರವ ಅಧ್ಯಕ್ಷರಾದ ಜಯಕರ್ ಪೂಜಾರಿ ಗುಲ್ವಾಡಿ, ಕಾರ್ಯಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಯಳೂರು ಹಕ್ಲಾಡಿ, ಉಪಾಧ್ಯಕ್ಷರಾದ ಶ್ರೀಮತಿ ಶೇಖರ್,ಕಲಾ ಕ್ಷೇತ್ರದ ಟ್ರಸ್ಟ್ ನ ಅಧ್ಯಕ್ಷರಾದ ಕಿಶೋರ್ ಕುಮಾರ್, ಮಹಾಜನ ಸಭಾದ ಅಧ್ಯಕ್ಷರಾದ ಸಚಿನ್ ನಕಾತ್ರಾಯ, ಕುಂದಾಪುರ ವಲಯದ ಅಧ್ಯಕ್ಷರಾದ ಅಣ್ಣಯ್ಯ ಖಾರ್ವಿ, ವಂಡ್ಸೆ ವಲಯದ ಅಧ್ಯಕ್ಷರಾದ ಸಂತೋಷ್ ಪೂಜಾರಿ, ಬೈಂದೂರು ವಲಯದ ಪ್ರಮುಖರಾದ ಸುಬ್ರಮಣ್ಯ ನಾವುಂದ, ಕೋಡಿ ಬಾಗದ ಸಾಮಾಜಿಕ ಕಾರ್ಯಕರ್ತರಾದ ಅಶೋಕ್ ಪೂಜಾರಿ ಹಾಗೂ ಕುಂದಾಪುರ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ಮಂಡಳಿಯ ಭಜಕರು ಉಪಸ್ಥಿತರಿದರು.