Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಗುಜರಾತ್‌ನ ಕೆವಾಡಿಯಾದ ಏಕ್ತಾ ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ ರಾಷ್ಟ್ರೀಯ ಏಕತಾ ದಿವಸಕ್ಕೆ ಸಂತ ಫಿಲೋಮಿನಾ ಕಾಲೇಜಿನ ಕೆಡೆಟ್ ಗಳ ಆಯ್ಕೆ- ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ನೇವಲ್ ಸಬ್‌ ಯುನಿಟ್ ಪಿಒ ಕೆಡೆಟ್ ನಿಶ್ಮಾ ಮತ್ತು ಎಲ್‌ಡಿ ಕೆಡೆಟ್ ದಿಶಾಲ್ ಪ್ರತಿಮಾ ಡಿಸೋಜಾ ಅವರು ಗುಜರಾತ್‌ನ ಕೆವಾಡಿಯಾದ ಏಕ್ತಾ ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ ರಾಷ್ಟ್ರೀಯ ಏಕತಾ ದಿನದ ಪರೇಡ್ 2024 ಕ್ಕೆ ಆಯ್ಕೆಯಾಗಿದ್ದಾರೆ.

ದೇಶದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಸಂರಕ್ಷಿಸುವ ಮತ್ತು ಬಲಪಡಿಸುವ ಮನೋಭಾವವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಭಾರತದ ಮೊದಲ ಗೃಹ ಸಚಿವ ದಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದಂದು ರಾಷ್ಟ್ರೀಯ ಏಕತಾ ದಿವಸವನ್ನು ಆಚರಿಸಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಗಸ್ಟ್ 15 ಮತ್ತು ಜನವರಿ 26 ಸ್ವಾತಂತ್ರ್ಯ ಮತ್ತು ಗಣರಾಜ್ಯ ದಿನವಾಗಿ ವಿಶೇಷತೆಯನ್ನು ಪಡೆದಂತೆ ಅಕ್ಟೋಬರ್ 31 ದೇಶದಾದ್ಯಂತ ಏಕತೆಯ ಹಬ್ಬವಾಗಿದೆ. ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕರ್ತವ್ಯಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ಮತ್ತು ನರ್ಮದಾ ನದಿಯ ದಡದಲ್ಲಿರುವ ಏಕತಾ ಪ್ರತಿಮೆಯಲ್ಲಿನ ರಾಷ್ಟ್ರೀಯ ಏಕತಾ ದಿನಾಚರಣೆಗಳು ರಾಷ್ಟ್ರದ ಮೂರು ಪ್ರಮುಖ ಉತ್ಸವಗಳಾಗಿ ಮಾರ್ಪಟ್ಟಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಏಕತಾ ದಿವಸ್ ಪರೇಡ್‌ನಲ್ಲಿ ಎನ್‌ಎಸ್‌ಜಿ, ಬಿಎಸ್‌ಎಫ್, ಎನ್‌ಸಿಸಿ ಮತ್ತು ವಿವಿಧ ರಾಜ್ಯ ಪೊಲೀಸ್‌ಗಳ 16 ಕವಾಯತು ತಂಡಗಳು, ಎಲ್ಲಾ ಮಹಿಳಾ ಸಿಆರ್‌ಪಿಎಫ್ ಬೈಕರ್‌ಗಳಿಂದ ಡೇರ್‌ಡೆವಿಲ್ ಶೋ, ಬಿಎಸ್‌ಎಫ್‌ನ ಮಹಿಳಾ ಪೈಪ್ ಬ್ಯಾಂಡ್, ಗುಜರಾತ್ ಮಹಿಳಾ ಪೊಲೀಸರಿಂದ ನೃತ್ಯ ಸಂಯೋಜನೆ ಕಾರ್ಯಕ್ರಮ, ವಿಶೇಷ ಎನ್‌ಸಿಸಿ ಸಾಂಸ್ಕೃತಿಕ ಪ್ರದರ್ಶನ, ಶಾಲಾ ಬ್ಯಾಂಡ್‌ಗಳ ಪ್ರದರ್ಶನ, ಭಾರತೀಯ ವಾಯುಪಡೆಯಿಂದ ವಿಶೇಷ ಹಾರಾಟ ಇತ್ಯಾದಿ ಸಂಭ್ರಮಗಳು ಕಳೆಗಟ್ಟಲಿವೆ.