ಅಮ್ಟೂರು: ಶ್ರೀಕೃಷ್ಣ ಮಂದಿರದ 25ನೇ ವರ್ಷದ ವಾರ್ಷಿಕ ಮಹೋತ್ಸವದ ನಿಮಿತ್ತ ನಗರ ಭಜನೆ-ಕಹಳೆ ನ್ಯೂಸ್
ಅಮ್ಟೂರು: ಶ್ರೀಕೃಷ್ಣ ಮಂದಿರ ಅಮ್ಟೂರು ಇದರ ದಶಂಬರ ತಿಂಗಳಿನಲ್ಲಿ ನಡೆಯುವ 25ನೇ ವರ್ಷದ ವಾರ್ಷಿಕ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿರುವ 25 ಕಾರ್ಯಕ್ರಮಗಳಲ್ಲಿ ನಗರ ಭಜನೆ 22ನೇ ಕಾರ್ಯಕ್ರಮವಾಗಿದೆ. ಅಕ್ಟೋಬರ್ 14ರಂದು ಪ್ರಾರಂಭಗೊAಡ ಈ ನಗರ ಭಜನೆಯು ಅಕ್ಟೋಬರ್ 27ರಂದು ಸಂಪನ್ನಗೊAಡಿತ್ತು.
ಒಟ್ಟು 12 ದಿನಗಳ ನಗರ ಭಜನೆಯಲ್ಲಿ 365 ಮನೆಗಳಲ್ಲಿ ಭಜನಾ ಸೇವೆ ನಡೆದಿರುತ್ತದೆ ಕಾರ್ಯಕ್ರಮವನ್ನು ಶ್ರೀರಾಮ ಭಜನಾ ಮಂದಿರ ಕಜೆ ಇದರ ಅಧ್ಯಕ್ಷರಾದ ಶಿವರಾಮ ರೈ ಮೇರಾವು ಇವರು ದೀಪ ಬೆಳಗಿಸಿ ನಗರ ಭಜನೆಗೆ ಚಾಲನೆ ನೀಡಿದರು. ಪ್ರತೀ ದಿನ ಭಜನೆಯಲ್ಲಿ 35ಕ್ಕಿಂತ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದು, ಕೊನೆಯ ದಿನ 75ಕ್ಕಿಂತ ಹೆಚ್ಚು ಕಾರ್ಯಕರ್ತರು ಈ ನಗರ ಭಜನೆಯಲ್ಲಿ ಭಾಗವಹಿಸಿ ತಮ್ಮನ್ನು ತಾವು ತೊಡಗಿಸಿಕೊಂಡರು. ದೇವರ ಪೂಜೆಯನ್ನು ದಿನಕೊಬ್ಬ ಕಾರ್ಯಕರ್ತರು ನಡೆಸುತ್ತಿದ್ದು, ಎಲ್ಲಾ ಮನೆಗಳಲ್ಲಿ ಉತ್ತಮವಾದ ಸ್ಪಂದನೆ ದೊರಕಿರುತ್ತದೆ.
ಮನೆಯಿಂದ ಮನೆಗೆ ಭಜನೆ ಹೋಗುವಾಗ ಸುತ್ತಮುತ್ತಲಿನ ಮನೆಗಳ ಸದಸ್ಯರು ಈ ಭಜನೆಯಲ್ಲಿ ಸೇರಿಕೊಳ್ಳುತ್ತಿದ್ದರು. ಸಂಜೆ 7 ಗಂಟೆಗೆ ಹೊರಟ ಭಜನೆ ರಾತ್ರಿ 9.30ರವರೆಗೆ ನಡೆಯುತ್ತಿದ್ದು, ಕೊನೆಯ ಮನೆಯವರು ಭಜನಾ ಕಾರ್ಯಕರ್ತರಿಗೆ ಭೋಜನ ವ್ಯವಸ್ಥೆ ಮಾಡುತ್ತಿದ್ದರು.
ಮಂದಿರದ ಅಧ್ಯಕ್ಷರು ರಮೇಶ್ ಕರಿಂಗಾಣ, ಪ್ರಧಾನ ಕಾರ್ಯದರ್ಶಿ ಕುಶಾಲಪ್ಪ ಅಮ್ಟೂರು, ಭಜನಾ ಸಂಘಟಕರುಗಳಾದ ಸುರೇಶ ಅಮ್ಟೂರು, ಸುರೇಂದ್ರ ಪೊಯ್ಯಕಂಡ, ಸತೀಶ, ಪುರುಷೋತ್ತಮ ಶಾಂತಿಪಲ್ಕೆ, ಉಮಾನಾಥ ಉಪಾಧ್ಯಕ್ಷರುಗಳಾದ ಶರತ್ ಕುಮಾರ್, ಮಹಾಬಲ ಕುಲಾಲ್, ಕೌಶಿಲ್ ಶೆಟ್ಟಿ, ಕರ‍್ಯದರ್ಶಿ ರೋಹಿತ್ ಅಮ್ಟೂರು, ಶೇಖರ ಕೊಟ್ಟಾರಿ, ಲೆಕ್ಕಪರಿಶೋಧಕರು ಶಂಕರ ಅಂಚನ್, ಸರ‍್ಯ ಅಮ್ಟೂರು, ಮತ್ತು ಮಂದಿರದ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಜ್ಯೋತಿ ಮಹಿಳಾ ಮಂಡಲದ ಸದಸ್ಯರುಗಳು ಉಪಸ್ಥಿತರಿದ್ದು ನಗರ ಭಜನೆಯನ್ನು ಯಶಸ್ವಿಗೊಳಿಸಿದರು.