ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಅದ್ವಯ ಸಾಹಿತ್ಯ ಸಂಘ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ, ಕನ್ನಡ ರಾಜ್ಯೋತ್ಸವ ವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಹರಿಶ್ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ‍್ಯ ದೊರೆತು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956ರ ನವೆಂಬರ್ 1ರಂದು ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ ಮೈಸೂರು ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಅವುಗಳೆಂದರೆ ಉತ್ತರ ಕರ್ನಾಟಕ, ಹಳೆಯ ಮೈಸೂರು ಹಾಗೂ ಮಲೆನಾಡು. ರಾಜ್ಯದ ಹೆಸರನ್ನು 1 ನವೆಂಬರ್ 1973 ರಂದು “ಕರ್ನಾಟಕ” ಎಂದು ಬದಲಾಯಿಸಲಾಯಿತು. ಹಲ್ಮಿಡಿ ಶಾಸನವು ಕನ್ನಡ ಭಾಷೆಯಲ್ಲಿ ಸಿಕ್ಕಿರುವ ಅತ್ಯಂತ ಹಳೆಯ ಶಾಸನ. ಕನ್ನಡ ಭಾಷೆಗೆ ಪುರಾತನ ಇತಿಹಾಸವಿದ್ದು , ತನ್ನದೇ ಲಿಪಿ, ಸಂಸ್ಕೃತಿಯಿAದ ಕನ್ನಡ ನಾಡು ಭವ್ಯ ಪರಂಪರೆಯನ್ನು ಹೊಂದಿದೆ ಎಂದು ಕನ್ನಡ ನಾಡಿನ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿನ ಅಧ್ಯಕ್ಷ ರಾದ ಶ್ರೀಯುತ ಜಯಂತ್ ನಡು ಬೈಲ್ , ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಕನ್ನಡ ನಾಡು- ನುಡಿ ,ಸಂಸ್ಕೃತಿ ಯನ್ನು ಉಳಿಸಿ ಬೆಳೆಸಬೇಕು ಮತ್ತು ನಮ್ಮ ಕನ್ನಡ ಭಾಷೆ ಯ ಮೇಲೆ ಪ್ರೀತಿ, ಗೌರವವಿರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ರಾದ ಶ್ರೀಯುತ ಸಂಪತ್ ಕೆ ಪಕ್ಕಳ ರವರು ಭಾಷೆ, ಸಂಸ್ಕೃತಿ ಉಳಿಯ ಬೇಕಾದರೆ ನಾವು ಅದನ್ನು ಸದಾ ಬಳಸುತ್ತೀರ ಬೇಕು. ಒಂದು ಭಾಷೆಯನ್ನು ಬಳಸುವಾಗ ಅನ್ಯ ಭಾಷೆಯ ಪದಗಳು ಸಾಕಷ್ಟು ಶಬ್ದಗಳು ಸೇರ್ಪಡೆಯಾಗುತ್ತದೆ ಮತ್ತು ಮಾತೃ ಭಾಷೆಯ ಸೊಗಸು ನಷ್ಟವಾಗುತ್ತದೆ ಹಾಗೂ ಕೆಲವು ಶಬ್ದಗಳು ಮಾಯವಾಗುದರ ಜೊತೆಗೆ ಭಾಷೆ ಕ್ಷೀಣಿಸುಸುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮಾತೃ ಭಾಷೆಯನ್ನು ನಿರಂತರವಾಗಿ ಅಚ್ಚುಕಟ್ಟಾಗಿ ಬಳಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ನಿರ್ದೇಶಕಿ ಶ್ರೀಮತಿ ಕಲಾವತಿ ಜಯಂತ್, ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ ಎ , ಉಪ ಪ್ರಾಂಶುಪಾಲ ರಾದ ರಕ್ಷಣ್ ಟಿ ಆರ್ , ಆಂತರಿಕ ಗುಣಮಟ್ಟದ ಭರವಸೆ ಕೋಶ ದ ಸಂಚಾಲಕಿ ಕುಮಾರಿ ಭವ್ಯ ಶ್ರೀ ಉಪಸ್ಥಿತರಿದ್ದರು.
ದ್ವಿತೀಯ ಪದವಿ ಫ್ಯಾಷನ್ ಡಿಸೈನ್ ವಿಭಾಗದ ಕುಮಾರಿ ಪ್ರಕೃತಿ ಪ್ರಾರ್ಥನೆ ಹಾಡಿದರು. ಅದ್ವಯ ಸಾಹಿತ್ಯ ಸಂಘ ಕಾರ್ಯದರ್ಶಿ ತೃತೀಯ ಪದವಿ ವಾಣಿಜ್ಯ ವಿಭಾಗದ ಕುಮಾರಿ ಕ್ಷೇಮಾ ಸ್ವಾಗತಿಸಿ , ಉಪಕಾರ್ಯದರ್ಶಿ ದ್ವಿತೀಯ ಪದವಿ ವಾಣಿಜ್ಯ ವಿಭಾಗದ ಕು.ಜೀವಿತಾ ವಂದಿಸಿದರು. ಕುಮಾರಿ ವಿಂಧು ಶ್ರೀ ಕಾರ್ಯಕ್ರಮ ವನ್ನು ನಿರೂಪಿಸಿದರು.