Sunday, January 19, 2025
ಸುದ್ದಿ

ಹಿರಿಯ ನಾಯಕ ಅಡ್ವಾಣಿಗೆ ಜನ್ಮ ದಿನದ ಅಧಿಕೃತ ಶುಭಾಶಯ ಕೋರಿದ ಪ್ರಧಾನಿ – ಕಹಳೆ ನ್ಯೂಸ್

ದೆಹಲಿ: ಇಂದು ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿಯವರ ಜನ್ಮ ದಿನವಾಗಿದ್ದು, 91 ನೇ ಜನ್ಮ ದಿನ ಆಚರಿಸುತ್ತಿದ್ದು, ಇಡೀ ದೇಶವೇ ದೀಪಾವಳಿ ಸಡಗರದ ಜೊತೆಗೆ ದೇಶದ ನಾಯಕನ ಜನ್ಮ ದಿನವನ್ನು ಆಚರಿಸಿಕೊಡುತ್ತಿದೆ.

ಈ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭಾಶಯವನ್ನು ಕೋರಿದ್ದಾರೆ. ಎಲ್ ಕೆ ಅಡ್ವಾಣಿಯವರು ದೇಶದ ರಾಜಕೀಯದಲ್ಲಿ ಅತೀ ಹೆಚ್ಚು ಪ್ರಭಾವ ಬೀರಿದವರು, ಇವರು ಬಿಜೆಪಿ ಮತ್ತು ಕಾರ್ಯಕರ್ತರನ್ನ ದೇಶಕ್ಕಾಗಿ ಸಜ್ಜುಗೊಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು