Friday, September 20, 2024
ಸುದ್ದಿ

ಸಮಾಜಮುಖಿ ಕಾರ್ಯಗಳಿಂದಲೇ ಜನ ಮನ ಗೆದ್ದ ಅಶೊಕ್ ರೈ ಕೊಡಿಂಬಾಡಿ – ಕಹಳೆ ನ್ಯೂಸ್

ಪುತ್ತೂರು: ಉದ್ಯಮ ಕ್ಷೇತ್ರವೆಂದರೆ ಬರೀ ಹಣಗಳಿಕೆ ಮಾಡೋದು ಮಾತ್ರ ಎಂದು ಎಲ್ಲರ ನಂಬಿಕೆ ಆದ್ರೆ ಇದನ್ನು ಅಲ್ಲಗೆಳದವರು ನಮ್ಮ ಮುಂದೆಯೇ ಇದ್ದಾರೆ. ಅಂತಹವರಲ್ಲಿ ಅಶೊಕ್ ರೈ ಕೊಡಿಂಬಾಡಿ ಕೂಡ ಒಬ್ಬರು. ಪುತ್ತೂರು ಕೊಡಿಂಬಾಡಿಯ ಹಳ್ಳಿ ಸೊಗಡಿನಲ್ಲೇ ಬೆಳೆದ ಅಶೋಕ್ ರೈ ಸದಾ ನಗುಮುಖ, ಅಪರಿಮಿತ ತಾಳ್ಮೆ, ಎಲ್ಲರೊಂದಿಗೆ ಬೆರೆಯೋ ಮನಸ್ಸು, ಧಾರ್ಮಿಕ, ಸಮಾಜಮುಖಿ ಕಾರ್ಯಗಳಿಂದಲೇ ಜನರ ಮನಸ್ಸಿನಿಂದಲೇ ನೆಲೆಯೂರಿದವರು.

ಉದ್ಯಮ ಕ್ಷೇತ್ರದಲ್ಲಿ ಗೆಲುವಿನ ಶಿಖರವನ್ನೇರುತ್ತಿರುವ ಅಶೋಕ್ ಉದ್ಯಮವನ್ನು ಬರೀ ಹಣಗಳಿಕೆಗೆಂದೇ ಸೀಮಿತವಾಗಿರಿಸದೇ ಸಮಾಜದ ಸೇವೆಗಾಗಿ ಮುಡಿಪಾಗಿರಿಸಿದ್ದಾರೆ. ಮೇರು ವ್ಯಕ್ತಿತ್ವದ ಅಶೋಕ್ ಬಾಲ್ಯದಲ್ಲಿ ಕಳೆದ ಬಡತನದ ಜೀವನ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿತು. ಕಷ್ಟ ಏನೆಂಬುದನ್ನು ತಿಳಿದ ಜೀವಕ್ಕೆ ಬೇರೆಯವರ ಕಷ್ಟಗಳು ಬೇಗ ಅರ್ಥವಾಗಿತ್ತು ಜಿವ ಮಿಡಿದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗ್ಲೇ ಹಲವಾರು ಸಮಾಜಸೇವೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಅಶೋಕ್, ಪೆರ್ನೆ ಅನಿಲ ದುರಂತದಲ್ಲಿ ನೊಂದ ಜೀವಗಳಿಗೆ ಆಸರೆಯಾಗಿದ್ರು. ಮಂಗಳೂರಿನಲ್ಲಿ 50 ಹೆಚ್‍ಐವಿ ಪೀಡಿತ ಮಕ್ಕಳ ಬಾಳಲ್ಲಿ ಆಶಾಕಿರಣವಾದ್ರು. ಅದೆಷ್ಟೋ ದೇವಾಲಯಗಳ ಬ್ರಹ್ಮಕಲಶೊತ್ಸವದ ಜವಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದು. ಪ್ರತಿವರ್ಷ ದೀಪಾವಳಿ ಸಮಯದಲ್ಲಂತೂ ಸಾವಿರಾರು ಮಂದಿಗೆ ವಸ್ತ್ರದಾನವನ್ನು ಮಾಡ್ತಾರೆ. ಅಂತೆಯೆ ರೈ ಚಾರಿಟೇಬಲ್ ಟ್ರಸ್ಟ್ ಮುಖಾಂತರ ವಿದ್ಯಾಭ್ಯಾಸ, ಹೊಲಿಗೆ ತರಬೇತಿ ಬಸ್‍ಪಾಸ್, ಇತ್ಯಾದಿ ಸೌಲಭ್ಯಗಳನ್ನು ಒದಗಿಸಿದ್ದಾರೆ.

ಜಾಹೀರಾತು

ಇವರ ಈ ಸಮಾಜಕಾರ್ಯಕ್ಕೆ ಸಂಸದ ನಳಿನ್ ಸೇರಿ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದ್ದು, ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾಗಲಿ ಎಂಬುವುದೇ ನಮ್ಮ ಆಶಯ.