ಉಡುಪಿ: ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ. ಪ್ರತೀ ಮನೆಗಳಲ್ಲೂ ವೈವಿಧ್ಯಮಯ ಆಚರಣೆ ಜೊತೆಗೆ ಬಗೆಬಗೆಯ ಸಂಪ್ರದಾಯಗಳು. ಆದ್ರೆ ದೀಪಾವಳಿ ಹಬ್ಬದಂದು ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಜೊತೆಸೇರಿ ಅವರ ಮೊಗದಲ್ಲಿ ನಗುವಿನ ಬೆಳಕು ಚಿಮ್ಮಿಸುವ ಮೂಲಕ ಸಾರ್ಥಕ ರೀತಿಯಲ್ಲಿ ಹಬ್ಬಆಚರಿಸುವವರೂ ಇದ್ದಾರೆ.
ಉಡುಪಿಯ ಪಲಿಮಾರು ಗ್ರಾಮದಲ್ಲೂ ಕೂಡ ಇಂತದ್ದೊಂದು ಅಪರೂಪದ ಆಚರಣೆ ನಡೆದಿದೆ. ಇಲ್ಲಿ ಹಿಂದೂ ಮುಸ್ಲಿಂ ಕೈಸ್ತ ಬಾಂಧವರು ಜೊತೆಯಾಗಿಯೇ ಕೊರಗ ಸಮುದಾಯವದವರ ಜೊತೆ ಸೇರಿ ದೀಪಾವಳಿ ಆಚರಿಸಿದ್ದು ಸ್ಥಳೀಯರಾದ ಅಬ್ದುಲ್ಲ ,ಗ್ರಾಮಪಂಚಾಯತ್ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಮತ್ತು ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಸುವರ್ಣ ಆಚರಿಸಿದ್ರು. ಕೊರಗರು ತಮ್ಮ ಸಾಂಪ್ರದಾಯಿ ಕಡೋಲು ವಾದನ ಮಾಡಿ ಹಬ್ಬವನ್ನು ಸ್ಮರಣೀಯವಾಗಿಸಿದ್ರು. ಅಲ್ಲಿದ್ದ ಮಕ್ಕಳಿಗೆ ಪಟಾಕಿ, ಸಿಹಿ, ಹೊಸಬಟ್ಟೆ ,ಅಕ್ಕಿ, ಬೆಲ್ಲ ಮತ್ತು ಧವಸಧಾನ್ಯಗಳನ್ನೂ ವಿತರಿಸಲಾಯಿತು.