Saturday, January 18, 2025
ಕಾಸರಗೋಡುಕೇರಳಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಎಡನೀರು ಶ್ರೀಗಳ ವಾಹನದ ಮೇಲೆ ನಡೆದ ದಾಳಿ ಖಂಡಸಿ, ಪುತ್ತೂರಿನಲ್ಲಿ ಕೆಮ್ಮಾಯಿ ಮಹಾವಿಷ್ಣುಮೂರ್ತಿ ದೇವಸ್ಥಾನದ ಭಕ್ತ ವೃಂದ ಉಗ್ರ ಹೋರಾಟದ ಎಚ್ಚರಿಕೆ ; ಆಕ್ರೋಶ ವ್ಯಕ್ತಪಡಿಸಿದ ನಾಗೇಶ್ ಟಿ.ಎಸ್. – ಕಹಳೆ ನ್ಯೂಸ್

ಕಾಸರಗೋಡು : ಎಡನೀರು ಶ್ರೀಗಳ ವಾಹನದ ಮೇಲೆ ನಡೆದ ದಾಳಿ ಖಂಡನೀಯ ಎಂದು ಕೆಮ್ಮಾಯಿ ಮಹಾವಿಷ್ಣುಮೂರ್ತಿ ದೇವಸ್ಥಾನ ಭಕ್ತ ವೃಂದದ ನಾಗೇಶ್ ಟಿ ಎಸ್ ಹೇಳಿದ್ದಾರೆ.

ಖಂಡನೆಯಲ್ಲಿ ಏನಿದೆ..!?

ಜಾಹೀರಾತು
ಜಾಹೀರಾತು
ಜಾಹೀರಾತು

ಎಡನೀರು ಮಠದ ಸ್ವಾಮೀಜಿಗಳು ನಮಗೆಲ್ಲ ಮಾರ್ಗದರ್ಶಕರು ನಮ್ಮ ಕೆಮ್ಮಾಯಿ ಮಹಾವಿಷ್ಣುಮೂರ್ತಿ ದೇವಸ್ಥಾನದ ಎಲ್ಲಾ ಕಾರ್ಯಕ್ರಮಗಳಿಗೆ ಅವರ ಮಾರ್ಗದರ್ಶನದ ಮೂಲಕವೇ ನಾವು ಮುನ್ನಡೆಯುತ್ತಿದ್ದೇವೆ. ಕೆಮ್ಮಾಯಿ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರದ ಸ್ವಾಮೀಜಿಯವರು ಚಾತುರ್ಮಾಸ ವೃತವನ್ನು ಕೂಡ ನಡೆಸಿದ್ದಾರೆ. ಮಹಾ ವಿಷ್ಣು ದೇವಸ್ಥಾನದ ಭಕ್ತರಾಗಿರುವ ನಮಗೆಲ್ಲ ಮಾರ್ಗದರ್ಶರಾಗಿರುವಂತ ಶ್ರೀಗಳ ಈ ಒಂದು ಹಿಂದೂ ಧರ್ಮದ ಕಾರ್ಯಗಳಿಗೆ ಕಿಡಿಗೇಡಿಗಳು ಅಡ್ಡಿಯನ್ನು ಉಂಟುಮಾಡುವಂತದ್ದು ಅತ್ಯಂತ ಖಂಡನೀಯವಾಗಿದೆ ಕೇರಳದ ಗಡಿ ಭಾಗದಲ್ಲಿರುವಂತ ಎಡನೀರು ಮಠ ಅತ್ಯಂತ ಪವಿತ್ರವಾದ ಮತ್ತು ಪ್ರಾಚೀನ ಪರಂಪರೆ ಹೊಂದಿರುವ ಮಠ, ಈ ಮಠದ ಸ್ವಾಮೀಜಿಗಳಿಗೆ ರಕ್ಷಣೆ ಕೊಡುವಲ್ಲಿ ಕೇರಳ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಮ್ಮಾಯಿ ಮಹಾವಿಷ್ಣುಮೂರ್ತಿ ದೇವರ ಭಕ್ತರು ಇಲ್ಲಿಯ ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ಉಗ್ರವಾಗಿ ಹೋರಾಟ ಮಾಡುತ್ತೇವೆ. ಈ ಘಟನೆ ಹಿಂದುಗಳ ಧಾರ್ಮಿಕ ಭಾವನೆಗೆ ನಂಬಿಕೆಗೆ ಧಕ್ಕೆಯನ್ನುಂಟು ಮಾಡಿದೆ ನಮಗೆಲ್ಲ ಅಪಾರ ನೋವಾಗಿದೆ ನಾವೆಲ್ಲ ಶ್ರೀಗಳ ಪರವಾಗಿ ಶ್ರೀಮಠದ ಪರವಾಗಿ ಈ ಕೃತ್ಯವನ್ನು ಗಟ್ಟಿ ಧ್ವನಿಯಲ್ಲಿ ಖಂಡಿಸುತ್ತಿದ್ದೇವೆ ಎಚ್ಚರಿಕೆಯನ್ನು ಕೂಡ ನೀಡುತ್ತಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು