Saturday, January 18, 2025
ಕಾಸರಗೋಡುಕ್ರೈಮ್ಸುದ್ದಿ

ಎಡನೀರು ಶ್ರೀಗಳ ಕಾರಿನ ಮೇಲೆ ದುಷ್ಕರ್ಮಿಗಳ ದಾಳಿ ಬೆನ್ನಲ್ಲೇ ಎಡನೀರು ಮಠಕ್ಕೆ ಅರುಣ್ ಕುಮಾರ್ ಪುತ್ತಿಲ ಭೇಟಿ – ಕಹಳೆ ನ್ಯೂಸ್

ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಭೇಟಿ ಮಾಡಿದ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಸ್ವಾಮಿಜೀಯ ಕಾರಿನ ಮೇಲಾದ ದಾಳಿಯ ಘಟನೆಯ ಕುರಿತು ಮಾಹಿತಿ ಪಡೆದುಕೊಂಡು ಸ್ವಾಮೀಜಿಯವರಿಗೆ ದೈರ್ಯ ತುಂಬಿದರು.

ಕಾಸರಗೋಡಿನ ಎಡನೀರು ಸಂಸ್ಥಾನದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರನ್ನು ಭೇಟಿ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಎಡನೀರು ಸಂಸ್ಥಾನದ ಸ್ವಾಮೀಜಿಗಳ ವಾಹನದ ಮೇಲೆ ಕೇರಳದ ಎಡಪಂಥೀಯ ಸರ್ಕಾರ ಪ್ರೇರಿತ ದಾಳಿಯನ್ನು ಖಂಡಿಸುತ್ತಾ , ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕೇರಳ ಸರ್ಕಾರ ನೀಡಬೇಕೆಂದು ಅರುಣ್ ಪುತ್ತಿಲ ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ ವಾಹನವನ್ನು ತಡೆದ ಪುಂಡರ ತಂಡವೊಂದು ತಗಾದೆ ಎಬ್ಬಿಸಿತ್ತು. ಇದೇ ದಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ಬರುವಾಗ ಇರಿಯಣ್ಣಿಯಿಂದಲೇ ಹಿಂಬಾಲಿಸಿದ ಬಂದವರ ಪೈಕಿ ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದರೆಂದೂ, ಕಾರಿನ ಗಾಜಿಗೆ ಹಾನಿಯಾಗಿದೆಯೆಂದೂ ತಿಳಿದುಬಂದಿದೆ. ಈ ಸಂದರ್ಭ ಸ್ವಾಮೀಜಿಯವರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದಿದ್ದಾರೆ.

ಅರುಣ್ ಕುಮಾರ್ ಪುತ್ತಿಲ ಜೊತೆ ಬಿಜೆಪಿ ಮುಖಂಡರಾದ ಪ್ರವೀಣ್ ಶೆಟ್ಟಿ ತಿಂಗಳಾಡಿ, ಪ್ರೇಮ್ ರಾಜ್ ಆರ್ಲಪದವು, ಕೃಷ್ಣಪ್ರಸಾದ್ ಶೆಟ್ಟಿ, ಕಿಶೋರ್ ಆರ್ಲಪದವು ಸಹಿತ ಹಲವರು ಉಪಸ್ಥಿತರಿದ್ದರು.