Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಏಕಾಏಕಿ ಕೋರ್ಟ್ ಮೆಟ್ಟಿಲೇರಿದ ಯಶ್, ರಾಧಿಕಾ ಪಂಡಿತ್ : ಸ್ಟಾರ್ ಜೋಡಿ ಬಾಳಲ್ಲಿ ಅಂಥದ್ದೇನಾಯ್ತು? – ಕಹಳೆ ನ್ಯೂಸ್

ಸ್ಯಾಂಡಲ್ ವುಡ್ ನ ಬೆಸ್ಟ್ ಜೋಡಿಗಳಲ್ಲಿ ಒಂದು ಯಶ್ ಹಾಗೂ ರಾಧಿಕಾ ಪಂಡಿತ್. ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿ ಇದೀಗ ಮುದ್ದಾಗಿ ಸಂಸಾರ ಮಾಡುತ್ತಿದ್ದಾರೆ. ಅತ್ತ ಕೋಟಿ ಕೋಟಿ ಬಜೆಟ್ ನ ಸಿನಿಮಾಗಳಲ್ಲಿ ಯಸ್ ಬ್ಯುಸಿಯಾಗಿದ್ರೆ ಇತ್ತ ನಟಿ ರಾಧಿಕಾ ಪಂಡಿತ್ ಪತಿಗೆ ಬೆನ್ನುಲುಭಾಗಿ ನಿಂತಿದ್ದಾರೆ.

ಜೊತೆಗೆ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಅಂದ ಹಾಗೆ ಪ್ರತಿ ಬಾರಿಯೂ ಯಶ್ ಗೆ ರಾಧಿಕಾ ಬಗ್ಗೆ ಕೇಳಿದಾಗೆಲ್ಲಾ ಆಕೆಯ ಬಗ್ಗೆ ಉತ್ತಮವಾಗಿಯೇ ಮಾತನಾಡಿದ್ದಾಋಎ.

ಜಾಹೀರಾತು
ಜಾಹೀರಾತು
ಜಾಹೀರಾತು

‘ನನ್ನಂತಹ ವಿಚಿತ್ರ ಆಲೋಚನೆ ಇರುವ ವ್ಯಕ್ತಿಯನ್ನು ಸಹಿಸಿಕೊಳ್ಳುವುದು ಸುಲಭ ಅಲ್ಲ. ಈ ನಿಟ್ಟಿನಲ್ಲಿ ನನಗೆ ರಾಧಿಕಾ ಬಾಳಸಂಗಾತಿಯಾಗಿ ಸಿಕ್ಕಿರುವುದಕ್ಕೆ ನಾನು ಅದೃಷ್ಟವಂತ. ನನ್ನ ಯಾವ ನಿರ್ಧಾರಕ್ಕೂ ಅವರು ಅಡ್ಡಿ ಬರುವುದಿಲ್ಲ. ಅವರಿಗೆ ಹೆಚ್ಚು ಸಮಯ ನೀಡಬೇಕು ಅನಿಸುತ್ತದೆ. ರಾಧಿಕಾ ನನಗೆ ಮೊದಲು ಬೆಸ್ಟ್‌ ಫ್ರೆಂಡ್‌, ನಂತರ ಹೆಂಡತಿ’ ಎಂದು ಹೇಳಿದ್ದರು. ಯಶ್ ತನ್ನ ನೂರಾರು ಕೋಟಿ ಬಜೆಟ್‌ನ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಮನೆಯ ಕಾರ್ಯಕ್ರಮಗಳಲ್ಲಿ ಮಿಸ್ ಮಾಡದೇ ಭಾಗಿ ಆಗ್ತಾರೆ. ತನ್ನ ಫ್ಯಾಮಿಲಿಗೆ ಸಂಬಂಧಿಸಿದ ಯಾವ ಇವೆಂಟ್‌ಗಳೂ ಮಿಸ್ ಆಗದ ಹಾಗೆ ನೋಡಿಕೊಳ್ತಾರೆ. ಆದರೆ ಈಗ ಇದೇ ಯಶ್ ಮತ್ತು ರಾಧಿಕಾ ಕೋರ್ಟ್ ಮೆಟ್ಟಿಲೇರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೆಲೆಬ್ರಿಟಿಗಳು ಕೋರ್ಟಿಗೆ ಹೋಗೋದು ಇತ್ತೀಚೆಗೆ ಸಾಮಾನ್ಯ ಅಂತಾಗಿದೆ. ಆದರೆ ಯಶ್, ರಾಧಿಕಾ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ಬೇರೆ ಇದೆ. ಅಂದ ಹಾಗೆ ಯಶ್ ಹಾಗೂ ರಾಧಿಕಾ ಕೋರ್ಟ್ ಮೆಟ್ಟಿಲೇರಿರೋದು ರಿಯಲ್ ಲೈಫ್ ನಲ್ಲಿ ಅಲ್ಲ. ಬದಲಾಗಿ ಜಾಹೀರಾತೊಂದಕ್ಕೆ.

ಹೌದು, ಇತ್ತೀಚೆಗೆ ಯಶ್ ಜಾಹೀರಾತೊಂದರಲ್ಲಿ ನಟಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಯಶ್ ವಕೀಲರ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಟಾಕ್ಸಿಕ್ ಸೀನ್ ಅನ್ನೋ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು. ಆದರೆ ಅದು ಜಾಹೀರಾತು ಅನ್ನೋದು ಇದೀಗ ಗೊತ್ತಾಗಿದೆ. ಆ ಇದರಲ್ಲಿ ನಟಿ ರಾಧಿಕಾ ಪಂಡಿತ್ ಅವರು ಒಂದು ವಿಷಯಕ್ಕೆ ಕೋರ್ಟ್​ ಕಟಕಟೆಯಲ್ಲಿ ನಿಂತಿದ್ದಾರೆ. ಅವರ ಪತಿ ಯಶ್​ ಜೋರು ಜೋರಾಗಿ ವಾದ ಮಾಡಿದ್ದಾರೆ.

ಹಾಗಾದರೆ, ಅವರಿಬ್ಬರ ತಕರಾರು ಏನು ಎಂಬ ಪ್ರಶ್ನೆ ಮೂಡುವುದು ಸಹಜ. ಇದರಲ್ಲಿ ರಾಧಿಕಾ ಪಂಡಿತ್ ಮೋಸಕ್ಕೆ ಒಳಗಾದ ಗ್ರಾಹಕಿಯ ಪಾತ್ರ ಮಾಡಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಬಂದ ಲಾಯರ್ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಕಂಪನಿಯ ನಿಜವಾದ ಅಡುಗೆ ಎಣ್ಣೆ ಯಾವುದು ಎಂಬುದನ್ನು ಸಾಬೀತು ಮಾಡಲು ಯಶ್​ ಫುಲ್ ಜೋಶ್‌ನಲ್ಲಿ ವಾದ ಮಾಡಿದ್ದಾರೆ. ಸದ್ಯ ಯಶ್ ರಾಧಿಕಾ ಅವರ ಈ ಜಾಹೀರಾತು ಸಖತ್ ವೈರಲ್ ಆಗ್ತಿದೆ.