Thursday, November 14, 2024
ಅಂತಾರಾಷ್ಟ್ರೀಯವಾಣಿಜ್ಯಸುದ್ದಿ

ಭಾರತೀಯರಿಗೆ ಥೈಲ್ಯಾಂಡ್ ಪ್ರವಾಸ ಮುಕ್ತ ಮುಕ್ತ: ಇನ್ಮುಂದೆ ಬೇಡ ವೀಸಾ! – ಕಹಳೆ ನ್ಯೂಸ್

ಡಿಜಿಟಲ್ ಡೆಸ್ಕ್: ವಿದೇಶಕ್ಕೆ ಪ್ರವಾಸ ಹೋಗಬೇಕು ಎಂದು ಕನಸು ಕಾಣುವವರಿಗೆ ಶುಭ ಸುದ್ದಿ. ಥೈಲ್ಯಾಂಡ್ ಪ್ರವಾಸ ಈಗ ಭಾರತೀಯರಿಗೆ ವೀಸಾ ಮುಕ್ತವಾಗಿದೆ.

ಹೌದು, ಥೈಲ್ಯಾಂಡ್ ಪ್ರವೇಶವನ್ನು ಭಾರತೀಯ ಪ್ರಯಾಣಿಕರಿಗೆ ವೀಸಾ ಮುಕ್ತವಾಗಿ ಅನಿರ್ದಿಷ್ಟವಧಿ ವರೆಗೆ ವಿಸ್ತರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಥೈಲ್ಯಾಂಡ್ ಪ್ರವಾಸೋದ್ಯಮ ಆಕರ್ಷಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಈ ಯೋಜನೆಯ ಭಾಗವಾಗಿ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯರಿಗೆ ಥೈಲ್ಯಾಂಡ್ ವೀಸಾ ಮುಕ್ತ ಪ್ರವೇಶ ನೀತಿಯ ಅನಿರ್ದಿಷ್ಟ ಅವಧಿಗೆ ವಿಸ್ತರಿಸಲಾಗಿದ್ದು, ಇದು 2024ರ ನವೆಂಬರ್ 11ರಂದು ಕೊನೆಗೊಳ್ಳಲಿದೆ. ಈ ನೀತಿಯ ಅನ್ವಯ ಭಾರತೀಯ ಸಂದರ್ಶಕರು ವೀಸಾ ಇಲ್ಲದೆ 60 ದಿನಗಳವರೆಗೆ ಥೈಲ್ಯಾಂಡ್‌ನಲ್ಲಿ ಉಳಿಯಬಹುದು. ಇದರೊಂದಿಗೆ ಸ್ಥಳೀಯ ವಲಸೆ ಕಚೇರಿಯ ಅನುಮತಿ ಪಡೆದು ಹೆಚ್ಚುವರಿ 30 ದಿನಗಳವರೆಗೆ ಉಳಿಯುವ ಆಯ್ಕೆ ಇರುತ್ತದೆ. ಈ ಮೂಲಕ ಭಾರತೀಯ ಪ್ರವಾಸಿಗರಿಗೆ ಥೈಲ್ಯಾಂಡ್‌ನಲ್ಲಿ ಪ್ರಯಾಣವನ್ನು ಹೆಚ್ಚು ಸುಲಭವಾಗಿಸುವ ಗುರಿಯನ್ನು ಹೊಂದಿದೆ.

ವೀಸಾ ಅರ್ಜಿಯ ಅಗತ್ಯವಿಲ್ಲದೆಯೇ ಥೈಲ್ಯಾಂಡ್‌ನ ಆಕರ್ಷಕ ಪ್ರದೇಶಗಳನ್ನು ಕಾಣಲು ಭಾರತೀಯರಿಗೆ ಅವಕಾಶ ನೀಡುವ ಥೈಲ್ಯಾಂಡ್ ಸರ್ಕಾರದ ನಿರ್ಧಾರವನ್ನು ಥಾಯ್ಲೆಂಡ್‌ನ ಪ್ರವಾಸೋದ್ಯಮ ಪ್ರಾಧಿಕಾರ (TAT) ದೃಢಪಡಿಸಿದೆ. ದೆಹಲಿಯ ರಾಯಲ್ ಥಾಯ್ ರಾಯಭಾರ ಕಚೇರಿಯ ಅಧಿಕಾರಿಗಳು ಥಾಯ್ ಪ್ರವಾಸೋದ್ಯಮ ಮತ್ತು ಭಾರತೀಯ ಪ್ರವಾಸಿಗರಿಗೆ ಸುಲಭ ಪ್ರಯಾಣಕ್ಕೆ ವೀಸಾ ಮುಕ್ತ ಪ್ರವೇಶ ಅನಿರ್ದಿಷ್ಟ ವಿಸ್ತರಣೆ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ವೀಸಾ ಮುಕ್ತ ಥೈಲ್ಯಾಂಡ್ ಪ್ರವಾಸ ಯೋಜನೆಯು ದೇಶದ ಆದಾಯ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಈ ಮೂಲಕ ಪ್ರವಾಸಿಗರಿಂದ ವಸತಿ, ಊಟ, ಪ್ರವಾಸ, ಸಾರಿಗೆ ಸೇವೆಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗುತ್ತದೆ. ಇದರಿಂದ ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಬೆಳವಣಿಗೆಯಾಗುತ್ತದೆ. ಈ ಮೂಲಕ ದೇಶದ ಆದಾಯವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಇರಿಸಲಾಗಿದೆ. ಉದ್ಯೋಗ ಅವಕಾಶ ಸೃಷ್ಟಿ, ಸ್ಥಳೀಯ ವ್ಯವಹಾರಗಳಿಗೆ ಬೆಂಬಲ ಸೇರಿದಂತೆ ಈ ಯೋಜನೆಯು ಥೈಲ್ಯಾಂಡ್‌ನಾದ್ಯಂತ ಸಮುದಾಯಗಳಿಗೆ ಸಾಕಷ್ಟು ಪ್ರಯೋಜನವನ್ನು ನೀಡಲಿದೆ.