Sunday, January 19, 2025
ಕುಂದಾಪುರಸುದ್ದಿ

ಕುಂದಾಪುರ: ಅಮ್ಮ ಪಟಾಕಿ ಮೇಳದಿಂದ ಕ್ಯಾನ್ಸರ್ ಪೀಡಿತರಿಗೆ ಸಹಾಯಧನ ವಿತರಣೆ-ಕಹಳೆ ನ್ಯೂಸ್

ಕುಂದಾಪುರ : ಎಲ್ಲರೂ ಲಾಭಕ್ಕಾಗಿ, ಹಣ ಮಾಡುವ ಉದ್ದೇಶದಿಂದ ವ್ಯವಹಾರ ನಡೆಸಿದರೆ ಕುಂದಾಪುರದ ಅಮ್ಮ ಪಟಾಕಿ ಮೇಳ ಭಿನ್ನವಾಗಿದೆ, ಅಶಕ್ತರಿಗೆ ನೆರವು ನೀಡುವ ಕೆಲಸ ಮಾಡುತ್ತಿದೆ, ಹಾಗಾಗಿ ವ್ಯಾಪಾರ ಹೆಚ್ಚಾಗಲಿ ಎಂದು ಖ್ಯಾತ ನ್ಯಾಯವಾದಿ ರವಿಕಿರಣ್ ಮುಡೇಶ್ವರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಅಮ್ಮ ಪಟಾಕಿ ಮೇಳದ ಅಶಕ್ತರಿಗೆ ಸಹಾಯಧನ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದರು. ನ್ಯಾಯವಾದಿ ವಿಕಾಸ್ ಹೆಗ್ಡೆ ಮಾತನಾಡಿ,ಲಾಭದ ದೃಷ್ಟಿಯಿಂದ ಎಲ್ಲರೂ ಪಟಾಕಿ ಮಾರಟ ಮಾಡುತ್ತಾರೆ ಹೊರತು ಸಮಾಜಸೇವೆ,ಅಶಕ್ತರಿಗೆ,ಅನಾರೋಗ್ಯ ಪೀಡಿತರಿಗೆ ಪಾಲು ಕೊಡವ ಕೆಲಸ ಯಾರೂ ಮಾಡುವುದಿಲ್ಲ.ಆದರೆ, ತಾವು ಸಮಾಜದಲ್ಲಿ ಕಾಣುತ್ತಿರುವ ವ್ಯವಸ್ಥೆಗೆ ಸಹಾಯ ಮಾಡುವ ಉದ್ದೇಶ ಅಮ್ಮ ಮೇಳದ ಸಹೋದರರು.ವ್ಯಾಪಾರದ ಒಂದು ಭಾಗವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಏಳು ವರ್ಷಗಳಿಂದ ಅಮ್ಮ ಪಟಾಕಿ ಮೇಳ ಅಶಕ್ತರಿಗೆ ಸಹಾಯಧನ ವಿತರಿಸುತ್ತಿದ್ದು, ಈ ಬಾರಿ ಕ್ಯಾನ್ಸರ್ ನಿಂದ ಬೀಳುತ್ತಿರುವ ಆನಗಳ್ಳಿ ನಿವಾಸಿ ಉದಯ್ ಅವರಿಗೆ ಸಹಾಯಧನ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಮಾರ್ಕೊಡು ಸುರ್ಧಿರ್ ಕುಮಾರ ಶೆಟ್ಟಿ,ಕಿರಿಟ ಶೆಟ್ಟಿ, ಶಮಂತ್, ಶಶಿರಾಜ್,ವಿಶ್ವರಾಜ್,ಅಮ್ಮ ಪಟಾಕಿ ಮೇಳ ಪಾಲುದಾರ ವಿಜಯ್ ಅಂಕದಕಟ್ಟೆ,ನಟೇಶ್,ಪ್ರಶಾಂತ್,ಪ್ರಸಾದ್,ರಕ್ಷಿತ್, ಅಶೋಕ, ಸುಖಪಾಲ್ ಮೊದಲಾದವರು ಉಪಸ್ಥಿತರಿದ್ದರು.ರಾಘು ವಿಠಲವಾಡಿ ಕಾರ್ಯವನ್ನು ನಿರೂಪಿಸಿದರು.