Sunday, January 19, 2025
ಕಾಸರಗೋಡುಬದಿಯಡ್ಕಸುದ್ದಿ

ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಬದಿಯಡ್ಕದಲ್ಲಿ ಪ್ರತಿಭಟನೆ – ಕಹಳೆ ನ್ಯೂಸ್

ದಿಯಡ್ಕ: ನಾಡಿನ ಶಾಂತಿ ಸಮಾಧಾನವನ್ನು ಹಾಳುಗೆಡಹುವಲ್ಲಿ ಕಾರಣವಾದ ಸಮಾಜ ವಿದ್ರೋಹಿಗಳ ಗುಂಪನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸ್‌ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ.

ದೇಶಾದ್ಯಂತ ಪೂಜಿಸಲ್ಪಡುವ ಕೇರಳದ ಏಕೈಕ ಶಂಕರಾಚಾರ್ಯ ಪೀಠದ ಯತಿಗಳಿಗೆ ಕಾಸರಗೋಡು ಜಿಲ್ಲೆಯಲ್ಲಿ ಆದ ಅನ್ಯಾಯವನ್ನು ಇಡೀ ಹಿಂದೂ ಸಮಾಜವು ಎದುರಿಸುತ್ತದೆ ಎಂದು ಪರಿವಾರ ಸಂಘಟನೆಗಳ ರಾಜ್ಯ ಮುಖಂಡ ಸುನಿಲ್‌ ಪಿ.ಆರ್‌.ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ನಡೆಸಿದವರನ್ನು ಬಂಧಿಸ ಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಬದಿಯಡ್ಕದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಮುಖರು ಉಪಸ್ಥಿತರಿದ್ದರು. ಬದಿಯಡ್ಕ ಮೇಲಿನ ಪೇಟೆಯಿಂದ ಪ್ರಾರಂಭಗೊಂಡ ಪ್ರತಿಭಟನ ಮೆರವಣಿಗೆ ಬಸು ತಂಗುದಾಣದಲ್ಲಿ ಸಮಾಪನಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು