Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಖಾಸಗಿ ವಿಡಿಯೋ ಲೀಕ್.. ನೋಡಿ ಮಜಾ ಮಾಡಿ ಎಂದಿದ್ದ ‘ಕಿರಾತಕ’ ನಟಿಯ ದೇವಿ ಅವತಾರ ; ನೆಟ್ಟಿಗರಿಗೇ ಶಾಕ್ – ಕಹಳೆ ನ್ಯೂಸ್

‘ಕಿರಾತಕ’ ಸಿನಿಮಾ ಯಾರಿಗೆ ಇಷ್ಟ ಇಲ್ಲ ಹೇಳಿ. ಈ ಸಿನಿಮಾದ ಒಂದೊಂದು ದೃಶ್ಯವನ್ನು ನೋಡಿ ಇಂದಿಗೂ ಎಂಜಾಯ್ ಮಾಡುತ್ತಾರೆ. ಯಶ್ ನಟಿಸಿದ ಸಿನಿಮಾ ಕನ್ನಡದ ಬೆಸ್ಟ್ ಕಾಮಿಡಿ ಸಿನಿಮಾಗಳಲ್ಲಿ ಒಂದು. ಅದೇ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಓವಿಯಾ ಹೆಲೆನ್.

ಈ ನಟಿ ಇತ್ತೀಚೆಗೆ ಬೇಡದ ವಿಷಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಓವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಲೀಕ್ ಆಗಿತ್ತು. ಅದು ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಡಿತ್ತು. ಹದಿನೇಳು ಸೆಕೆಂಡುಗಳಿರುವ ಆ ವಿಡಿಯೋ ನೋಡಿ ಈ ನಟಿಯ ಅಭಿಮಾನಿಗಳ ಹೃದಯ ಚೂರು ಚೂರಾಗಿತ್ತು. ಆ ವೇಳೆ ಓವಿಯಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ನೊಂದ ಅಭಿಮಾನಿಗಳು ಆ ವಿಡಿಯೋ ನಿಮ್ಮದೇನಾ ಅಂತ ಭಾರದ ಹೃದಯದಿಂದಲೇ ಕಾಮೆಂಟ್ ಕೂಡ ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಡಿಯೋ ಲೀಕ್ ಆದ ವಿಷಯ ಟ್ರೆಂಡಿಂಗ್‌ನಲ್ಲಿತ್ತು. ಆ ವೇಳೆ ಸುಮ್ಮನಿರದ ‘ಕಿರಾತಕ’ ನಟಿ ಖಾಸಗಿ ವಿಡಿಯೋ ನೋಡಿ ಮಜಾ ಮಾಡಿ ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದರು. ನಾಲ್ಕೈದು ವಾರಗಳ ಹಿಂದಂತೂ ಓವಿಯಾ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿ ಇದ್ದರು. ಈ ನಟಿಯದ್ದೇ ಎನ್ನಲಾದ ಖಾಸಗಿ ವಿಡಿಯೋ ನೋಡಿ ಬೆಚ್ಚಿ ಬಿದ್ದಿದ್ದ ಅಭಿಮಾನಿಗಳಿಗೆ ಮತ್ತೊಂದು ಶಾಕಿಂಗ್ ಅವತಾರ ನೋಡುವುದಕ್ಕೆ ಸಿಕ್ಕಿದೆ. ಅದೇನು ಅಂತಿರಾ ಮುಂದೆ ಓದಿ.

ದಕ್ಷಿಣ ಭಾರತದ ಕೆಲವು ಬೋಲ್ಡ್ ನಟಿಯರಲ್ಲಿ ಓವಿಯಾ ಕೂಡ ಒಬ್ಬರು. ಅವರು ಲೈಫ್‌ ಸ್ಟೈಲ್‌ ಕೂಡ ಹಾಗೇ ಇದೆ. ಅವರು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು ಕೂಡ ಹಾಗೇ ಬೋಲ್ಡ್ ಆಗಿ ಇರುತ್ತವೆ. ಇಂತಹ ಪಾತ್ರಗಳಲ್ಲಿ ನಟಿಸಿದ್ದರಿಂದಲೇ ಆಕೆಗೆ ಬೋಲ್ಡ್ ಫ್ಯಾನ್ಸ್ ಇದ್ದಾರೆ. ಈ ನಟಿಯ ಸಿನಿಮಾಗಳನ್ನು ಇಷ್ಟ ಪಡುತ್ತಾರೆ. ಖಾಸಗಿ ವಿಡಿಯೋ ಲೀಕ್ ಆದ ಬೆನ್ನಲೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರ ಪೋಸ್ಟರ್ ಅನ್ನು ಇತ್ತೀಚೆಗೆ ಶೇರ್ ಮಾಡಿಕೊಂಡಿದ್ದರು. ಅದು ನೆಟ್ಟಿಗರಿಗೆ ಶಾಕ್ ಕೊಟ್ಟಿದೆ.

‘ಕಿರಾತಕ’ ನಟಿ ಓವಿಯಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾದ ಹೆಸರು ‘ಸೇವಿಯರ್. ಈ ಸಿನಿಮಾದಲ್ಲಿ ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ದೇವಿಯ ಅವತಾರವೆತ್ತಿದ್ದಾರೆ. ಈ ಪೋಸ್ಟರ್ ನೋಡಿ ಮೂರು-ನಾಲ್ಕು ವಾರಗಳ ಹಿಂದಿದ್ದ ಟ್ರೆಂಡ್ ಆಗಿದ್ದ ನಟಿ ಈಕೆನಾ ಅಂತ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಹೌದು, ಇದು ಓವಿಯಾ ನಟಿಸುತ್ತಿರುವ ಹೊಸ ಸಿನಿಮಾ. ಈ ಸಿನಿಮಾದ ಪೋಸ್ಟರ್ ಅನ್ನು ಸ್ವತ: ‘ಕಿರಾತಕ’ ಬೆಡಗಿಯೇ ಎರಡು ದಿನಗಳ ಹಿಂದಷ್ಟೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಜಾನ್ ಮತ್ತು ಟೀಮ್‌ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ. ಈ ಸಿನಿಮಾ ನಿಮಗೆ ಅದ್ಭುತ ಮನರಂಜನೆಯನ್ನು ನೋಡುತ್ತೆ. ರೆಡಿಯಾಗಿ” ಎಂದು ಹೇಳಿಕೊಂಡಿದ್ದಾರೆ.

ಇದೇ ಸಿನಿಮಾದಲ್ಲಿ ಭಾರತದ ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, “ಮತ್ತೊಮ್ಮೆ ಜಾನ್ ಅಂಡ್ ಟೀಮ್ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಿದೆ. ಇದು ಎಲ್ಲರಿಗೂ ಅದ್ಭುತ ಮನರಂಜನೆ ಕೊಡುತ್ತೆ” ಎಂದು ಹೇಳಿದ್ದಾರೆ. ಓವಿಯಾ 2019ರಲ್ಲಿ ಬಳಿಕ ಮತ್ತೆ ಇದೇ ವರ್ಷ ತಮಿಳು ಚಿತ್ರರಂಗಕ್ಕೆ ‘ಬೂಮರ್ ಸರ್ಕಲ್’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ದರು.