Tuesday, January 28, 2025
ಬೆಳಗಾವಿಸಂತಾಪಸುದ್ದಿ

ಜಮಖಂಡಿ ಓಲೆಮಠದ ಅಭಿನವ ಕುಮಾರ ಚೆನ್ನಬಸವ ಸ್ವಾಮಿಗಳು ಹೃದಯಾಘಾತದಿಂದ ಲಿಂಗೈಕ್ಯ – ಕಹಳೆ ನ್ಯೂಸ್

ಬಾಗಲಕೋಟೆ: ಜಮಖಂಡಿ ತಾಲೂಕಿನ ಮಠದ ಶ್ರೀ ಡಾ.ಅಭಿನವ ಕುಮಾರ ಚೆನ್ನಬಸವ ಮಹಾಸ್ವಾಮಿಗಳು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.ಸ್ವಾಮೀಜಿಗಳು ಶುಗರ್, ಬಿಪಿ, ಹೃದಯ ಸಮಸ್ಯೆಯಿಂದ ಕಳೆದ ಎರಡು ವರ್ಷದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ 9:30 ಕ್ಕೆ ಜೀವ ತ್ಯಜಿಸಿದ್ದಾರೆ.

ಸವದತ್ತಿಯ ಗೊರವಿನಕೊಳ್ಳದ ಓಲೆ‌ಮಠದ ಶಾಖಾಮಠದಲ್ಲಿ ಕೊನೆಯುಸಿರೆಳೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಗ್ಗೆ 9:30 ರ ನಂತರ ಗೊರವಿನಕೊಳ್ಳ ಸವದತ್ತಿಯಲ್ಲಿ ಪಾರ್ಥಿವ ಶರೀರ ಮೆರವಣಿಗೆ ನಡೆಯಲಿದೆ. ನಂತರ ಬೆಳಗ್ಗೆ 11 ಕ್ಕೆ ಜಮಖಂಡಿಗೆ ಸಾಗಿಸಲಾಗುವುದು. ಓಲೆಮಠದ ಆವರಣದಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು