Thursday, December 5, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಿAದ  ಎನ್ವೋಟೆಕ್  ರಾಜ್ಯ ಮಟ್ಟದ ವಿಚಾರ ಸಂಕಿರಣ, ಸ್ಪರ್ಧೆ-ಕಹಳೆ ನ್ಯೂಸ್

ಪುತ್ತೂರು. : ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿಯ ಭರಾಟೆಗೆ ಪರಿಸರ ಬಲಿ ಆಗುತ್ತಿರುವುದು ಅತ್ಯಂತ ಖೇದಕರ ಸಂಗತಿ. ಕೇವಲ ತಂತ್ರಜ್ಞಾನದ ಮುಖೇನ ಪರಿಸರದ ಸಮತೋಲನವನ್ನು ಕಾಪಾಡಲು ಸಾಧ್ಯವಿಲ್ಲ. ಬದಲಾಗಿ ಪರಿಸರದ ಮೂಲವನ್ನು ಅಧ್ಯಯನ ಮಾಡಿ ಸಾಂಪ್ರದಾಯಿಕವಾಗಿ ಹಾಗೂ ತಾಂತ್ರಿಕವಾಗಿ ಸುಸ್ಥಿರತೆಯನ್ನು ಕಾಪಾಡಬಹುದು ಎಂದು ಮಣಿಪಾಲದ ಎಂಐಟಿಯ ಜಿಯೋಲಾಜಿ ವಿಭಾಗದ ಮುಖ್ಯಸ್ಥ ಡಾ. ಕೆ. ಬಾಲಕೃಷ್ಣ ನುಡಿದರು.

ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ ) ದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದಶಮಾನೋತ್ಸವದ ಪ್ರಯುಕ್ತ ಕಾಲೇಜಿನ ಐಕ್ಯೂಎಸಿ ಹಾಗೂ ವಿವೇಕಾನಂದ ಸಂಶೋಧನಾ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ವಿಚಾರ ಸಂಕಿರಣ, ಪ್ರಬಂಧ ಮಂಡನೆ ಮತ್ತು ಪೋಸ್ಟರ್ ವಿನ್ಯಾಸ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇತ್ತೀಚೆಗೆ ಪರಿಸರ ಮತ್ತು ತಂತ್ರಜ್ಞಾನ ಪರಸ್ಪರ ವಿರೋಧಿಗಳಾಗಿವೆ. ತಂತ್ರಜ್ಞಾನ ಬದಲಾಗುತ್ತಿರುವ ಹಾಗೇ ಅಂತರ್ಜಲ ಕುಸಿಯುತ್ತದೆ. ತಂತ್ರಜ್ಞಾನವು ಹೀಗೆ ಮುಂದುವರೆದರೆ ಪರಿಸರವು ಅಪಾಯದ ಸ್ಥಿತಿಗೆ ತಲುಪಬಹುದು ಹಾಗೆಯೇ ಪರಿಸರಕ್ಕೆ ಉಪಯುಕ್ತವಾಗುವ ತಂತ್ರಜ್ಞಾನವನ್ನು ಹೇಗೆ ಬಳಸಬೇಕೆಂದು ಈಗಿನ ಯುವಜನತೆ ಯೋಚಿಸಬೇಕಿದೆ ಎಂದು ಹೇಳಿದರು.
ಕರ‍್ಯಕ್ರಮದಲ್ಲಿ ಪರಿಸರವಾದಿ, ಖ್ಯಾತ ಅಂಕಣಕಾರ ಶಿವಾನಂದ ಕಳವೆ ಹಾಗೂ ಮಣಿಪಾಲದ ಎಂಐಟಿಯ ಜಿಯೋಲಾಜಿ ವಿಭಾಗದ ಮುಖ್ಯಸ್ಥ ಡಾ. ಕೆ. ಬಾಲಕೃಷ್ಣ ಇವರಿಂದ ಪರಿಸರ ಹಾಗೂ ತಂತ್ರಜ್ಞಾನದ ಕುರಿತಾದ ವಿಚಾರ ಗೋಷ್ಟಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರೋಪ ಸಮಾರಂಭ: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ವಹಿಸಿ, ಸಂಚಾಲಕ
ಮುರಳಿಕೃಷ್ಣ. ಕೆ. ಎನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್. ಕೆ. ಎಸ್. ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು, ಸ್ನಾತಕೋತ್ತರ ಪದವಿ ವಿಭಾಗದ ಡೀನ್ ಹಾಗೂ ಕರ‍್ಯಕ್ರಮದ ಸಂಯೋಜಕಿ ಡಾ. ವಿಜಯಸರಸ್ವತಿ ಸ್ವಾಗತಿಸಿ,ವಾಣಿಜ್ಯ ವಿಭಾಗದ ಉಪನ್ಯಾಸಕಿ ಲಕ್ಷ್ಮಿ. ವಿ. ಭಟ್ ವಂದಿಸಿದರು. ವಿದ್ಯಾರ್ಥಿನಿ ಮೇಘನಾ. ಜೆ. ರೈ ನಿರ್ವಹಿಸಿದರು.

ಫಲಿತಾಂಶ: ಎಂಕಾA ವಿಭಾಗದ ಪೋಸ್ಟರ್ ವಿನ್ಯಾಸ ಸ್ಫರ್ಧೆಯಲ್ಲಿ ಕಾರ್ಕಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಶರಣ್ಯಾ ನಾಯಕ್ ಹಾಗೂ ವಿಜೇತಾ ನಾಯಕ್ ಪ್ರಥಮ ಹಾಗೂ ಬಿಕಾಂ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ಸುದೀಪ್ ಹಾಗೂ ಹಿತೇಶ್ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಎಂಎ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ಕಮಲಾಕ್ಷ ಹಾಗೂ ಶೈನಿತಾ ಪ್ರಥಮ ಹಾಗೂ ಬಿಎ ವಿಭಾಗದಲ್ಲಿ ಸೌಜನ್ಯಾ ಹಾಗೂ ಕೃತ್ತಿಕಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ ಪ್ರಬಂಧ ಮಂಡನೆ ಸ್ಪರ್ಧೆಯಲ್ಲಿ ಸ್ನಾತಕೋತ್ತರ ವಿಜ್ಞಾನ ವಿಭಾಗದಲ್ಲಿ ವಿವೇಕಾನಂದ ಕಾಲೇಜಿನ ಪೂಜಾ ಎಸ್ ಪ್ರಭು ಹಾಗೂ ಪದವಿ ವಿಭಾಗದಲ್ಲಿ ಸೃಜೇಶ್ ಹಾಗೂ ಅನುಶ್ರೀ ಪ್ರಥಮ ಸ್ಥಾನ ಪಡೆದಿದ್ದಾರೆ.

ಪದವಿ ವಿಭಾಗದ ಪ್ರಬಂಧ ಮಂಡನೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾದ ಪೂರ್ಣಪ್ರಜ್ಞ ಪ್ರಥಮ, ವೈಷ್ಣವಿ ದ್ವಿತೀಯ ಸ್ಥಾನವನ್ನು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ
ಹರಿಪ್ರಸಾದ್ ಹಾಗೂ ಸ್ವಸ್ತಿಕ್ ಪ್ರಥಮ, ಸುಲಕ್ಷಣ ದ್ವಿತೀಯ ಮಬಹುಮಾನವನ್ನು ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದ ಪ್ರಬಂಧ ಮಂಡನೆಯಲ್ಲಿ ಪದವಿ ವಿಭಾಗದಲ್ಲಿ, ಶ್ರಾವ್ಯಾ ಹಾಗೂ ರಕ್ಷಿತಾ ಪಿ.ಆರ್. ಸ್ನಾತಕೋತ್ತರ ವಿಭಾಗದಲ್ಲಿ ರಚಿತಾ ಹಾಗೂ ಲತಾಶ್ರೀ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾರೆ.

ಅAತೆಯೇ ಪ್ರಬಂದ ಮಂಡನೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀದೇವಿ ಪ್ರಥಮ ಹಾಗೂ ಪದವಿ ವಿಭಾಗದಲ್ಲಿ ಸುಳ್ಯ ಎನ್‌ಎಂಸಿ ಕಾಲೇಜಿನ ಆಕಾಶ್ ಹಾಗೂ ಲಾರೆನ್ಸ್ ಪ್ರಥಮಬಹುಮಾನವನ್ನು ಪಡೆದುಕೊಂಡಿದ್ದಾರೆ.