Recent Posts

Wednesday, November 13, 2024
ದಕ್ಷಿಣ ಕನ್ನಡಪುತ್ತೂರುಶಿಕ್ಷಣಸುದ್ದಿ

ನ.19 ರಂದು ವಿವೇಕಾನಂದ ಪದವಿ ಕಾಲೇಜಿನಲ್ಲಿ ಅಂತರ್ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ -ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾಲೇಜಿನ ಲಲಿತ ಕಲಾ ಸಂಘ, ವಿದ್ಯಾರ್ಥಿ ಸಂಘ ಹಾಗೂ ಐಕ್ಯೂಎಸಿ ಘಟಕದ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಪ್ರತಿಭೋತ್ಸವ 2024-25’ ಇದೇ ತಿಂಗಳ 19 ರ ಮಂಗಳವಾರದAದು ಕಾಲೇಜಿನ ಸುವರ್ಣ ಮಹೋತ್ಸವ ಸಭಾ ಭವನದಲ್ಲಿ ನಡೆಯಲಿದೆ.
ಕಾಲೇಜಿನ ಸ್ನಾತಕ ವಿಭಾಗದ ಷಷ್ಟö್ಯಬ್ದ ಹಾಗೂ ಸ್ನಾತಕೋತ್ತರ ವಿಭಾಗದ ದಶಮಾನೋತ್ಸವದ ಸವಿನೆನಪಿಗಾಗಿ ಹಾಗೂ ವಿವೇಕಾನಂದ ಜಯಂತಿ 2025 ರ ಅಂಗವಾಗಿ ಪಿಯುಸಿಯ ವಿದ್ಯಾರ್ಥಿಗಳಿಗಾಗಿ ಈ ಸ್ಫರ್ಧೆಗಳು ನಡೆಯಲಿದ್ದು ವೈಯಕ್ತಿಕ ಸ್ಫರ್ಧೆಗಳಲ್ಲಿ ಕನ್ನಡ ಭಾಷಣ,ಇಂಗ್ಲೀಷ್ ಭಾಷಣ, ಹಿಂದಿ ಭಾಷಣ, ಸಂಸ್ಕೃತ ಭಾಷಣ, ಕರ್ನಾಟಕ ಶಾಸ್ತಿçÃಯ ಸಂಗೀತ, ಭಾವಗೀತೆ, ಜಾನಪದ ಗೀತೆ, ಭಗವದ್ಗೀತೆ ಕಂಠಪಾಠ, ವರ್ಣಚಿತ್ರ ಕಲೆ, ಕನ್ನಡ ಪ್ರಬಂಧ,ಇAಗ್ಲೀಷ್ ಪ್ರಬಂಧ, ಹಿಂದಿ ಪ್ರಬಂಧ, ಸಂಸ್ಕೃತ ಪ್ರಬಂಧ, ತಾಳ ವಾದ್ಯ ಸಂಗೀತ ಸ್ಪರ್ಧೆ, ಭರತನಾಟ್ಯ ನಡೆಯಲಿದೆ. ಗುಂಪು ಸ್ಫರ್ಧೆಗಳಲ್ಲಿ ನೃತ್ಯ ರೂಪಕ, ಕುಣಿತ ಭಜನೆ, ಬೀದಿ ನಾಟಕ, ಕನ್ನಡ ಕವನ ರಚನೆ, ಚಿತ್ರ ಲೇಖನ ಸ್ಪರ್ಧೆ, ಕ್ವಿಜ್, ಜಾಹೀರಾತು ರಚನೆ ಮುಂತಾದವುಗಳು ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಮಡಿಕೇರಿ, ಮಂಗಳೂರು, ಕಾಸರಗೋಡು ವ್ಯಾಪ್ತಿಗೆ ಒಳಪಟ್ಟ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಬಹುದೆಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಪರ್ಧೆಯ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕ ಡಾ.ಮನಮೋಹನ 9972672259 ಇವರನ್ನು ಸಂಪರ್ಕಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು