Recent Posts

Wednesday, November 13, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

“ಮಕ್ಕಳ ಮಾನಸಿಕ ಬೆಳವಣಿಗೆಯಲ್ಲಿ ಪೋಷಕರ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದುದು”: Rtn ಹರ್ಷಕುಮಾರ್ ರೈ-ಕಹಳೆ ನ್ಯೂಸ್

 ಪುತ್ತೂರು: “ಒಬ್ಬ ವಿದ್ಯಾರ್ಥಿಯ ಜೀವನ ಅರ್ಥಪೂರ್ಣವಾಗಬೇಕಾದರೆ ಶೈಕ್ಷಣಿಕ ಪ್ರಗತಿಯ ಜೊತೆಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ವ್ಯಕ್ತಿತ್ವ ನಿರ್ಮಾಣದ ಕಡೆಗೆ ಗಮನ ಕೊಡಬೇಕು. ಅದಕ್ಕೆ ಪೂರಕವಾದ ಚೌಕಟ್ಟನ್ನು ವಿವೇಕಾನಂದ ವಿದ್ಯಾವರ್ಧಕ ಸಂಘವು ಹಲವು ವರ್ಷಗಳಿಂದ ಒದಗಿಸುತ್ತಾ ಬಂದಿದೆ. ಹದಿಹರೆಯದ ಪ್ರತಿಯೊಬ್ಬ ವಿದ್ಯಾರ್ಥಿಯು ಎದುರಿಸುತ್ತಿರುವ ಹಲವು ಸಮಸ್ಯೆಗಳಲ್ಲಿ ಅತ್ಯಂತ ಅಪಾಯಕಾರಿಯಾಗಿರುವುದು ಮಾನಸಿಕ ಸಮಸ್ಯೆಗಳು. ಇಂದಿನ ಕಾಲಘಟ್ಟದಲ್ಲಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರದಷ್ಟೇ ಮಹತ್ವವಾದುದು ಒಬ್ಬ ಶಿಕ್ಷಕನ ಪಾತ್ರ. ಒಬ್ಬ ವಿದ್ಯಾರ್ಥಿಯ ಸಮಸ್ಯೆಗಳಿಗೆ ಶಿಕ್ಷಕರು ಸ್ಪಂದಿಸಬೇಕಾದರೆ ಅವರಿಗೆ ಅದಕ್ಕೆ ತಕ್ಕದಾದಂತಹ ತರಬೇತಿ ಲಭಿಸುವುದು ಅತ್ಯಗತ್ಯ. ಅದಕ್ಕೆ  ಮನೋಮಯ ದಂತಹ ಮಾಹಿತಿ ಕಾರ್ಯಾಗಾರಗಳು ಅತ್ಯಂತ ಸಹಕಾರಿಯಾಗಲಿದೆ.” ಎಂದು Rtn ಹರ್ಷಕುಮಾರ್ ರೈ¸ ಂಉ , ರೋಟರಿ ಜಿಲ್ಲೆ 3181 ಇವರು ನುಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ರೋಟರಿ ಇಂಟರ್ನಾಷನಲ್ ಜಿಲ್ಲೆ 3181 , ರೋಟರಿ ಕ್ಲಬ್ ಪುತ್ತೂರು ಇವರ ಸಹಯೋಗದೊಂದಿಗೆ ಡಾ. ತುಂಗಾಸ್ ಮನಸ್ವಿನಿ ಆಸ್ಪತ್ರೆ , ಮಂಗಳೂರು ಇದರ ನೇತೃತ್ವದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ನಡೆಸಲಾದ ಮಾನಸಿಕ ಆರೋಗ್ಯದ ಕುರಿತಾದ ಕಾರ್ಯಾಗಾರ “ಮನೋಮಯ”ದ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್, ಪುತ್ತೂರು ಇದರಅಧ್ಯಕ್ಷರಾದ ಖಣಟಿ.ಡಾ. ಶ್ರೀಪತಿ ರಾವ್ ಇವರು ಭಾಗವಹಿಸಿ “ಹದಿಹರೆಯದ ವಿದ್ಯಾರ್ಥಿಗಳು ಎದುರಿಸುವ ಹಲವು ಸಮಸ್ಯೆಗಳಲ್ಲೊಂದು ಮಾನಸಿಕ ಒತ್ತಡ. ಶರೀರದ ದೈಹಿಕ ಸಮಸ್ಯೆಗಳಿಗೆ ಯಾವ ರೀತಿ ಚಿಕಿತ್ಸೆ ಲಭಿಸುತ್ತದೋ,ಅದೇ ರೀತಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಇಂತಹ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ಲಭಿಸದೇ ಹೋದರೆ ಭವಿಷ್ಯದಲ್ಲಿ ಅದು ವಿದ್ಯಾರ್ಥಿಯ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಲ್ಲದು. ಈ ರೀತಿಯ ಮಾನಸಿಕ ಸಮಸ್ಯೆಗಳಿಗೆ ಸಮರ್ಪಕವಾದ ಪರಿಹಾರವನ್ನು ಕಂಡುಕೊAಡು ಶಾಶ್ವತವಾಗಿ ಬುಡದಿಂದಲೇ ಕಿತ್ತುಹಾಕುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ. ಒಬ್ಬ ಉತ್ತಮ ಶಿಕ್ಷಕನಿಗೆ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯ ಜೊತೆಗೆ ಆತನ ಸಂಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಿದೆ” ಎಂಬುದನ್ನು ನೈಜ ಉದಾಹರಣೆಯೊಂದಿಗೆ ತಿಳಿಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೋರ್ವ ಮುಖ್ಯ ಅತಿಥಿಗಳಾದ ಶಶಿಕಲಾ. ಬಿ , ಸಲಹೆಗಾರರು ಹಾಗೂ ಸಂಯೋಜಕರು ಸಮುದಾಯ ಸೇವೆಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು, ಮನಸ್ವಿನಿ ಆಸ್ಪತ್ರೆ , ಮಂಗಳೂರು ಇವರು ಪಾಲ್ಗೊಂಡು ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಕಾರ್ಯಾಗಾರದ ಅಗತ್ಯತೆಯ ಬಗ್ಗೆ ಮಾತನಾಡುತ್ತಾ, ಪ್ರತಿಯೊಬ್ಬನೂ ಕಾರ್ಯಾಗಾರದ ಉತ್ತಮ ಪ್ರಯೋಜನವನ್ನು ಪಡೆಯಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಬಳಿಕ ಸಂಪನ್ಮೂಲ ವ್ಯಕ್ತಿಗಳು ವಿವಿಧ ಅವಧಿಗಳಲ್ಲಿ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್ ವಹಿಸಿಕೊಂಡು “ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಅತ್ಯಂತ ನಿಕಟವಾಗಿ ಗಮನಿಸುವವರು ಪೋಷಕರು ಹಾಗೂ ಶಿಕ್ಷಕರು. ಅವರಿಗೆ ವಿದ್ಯಾರ್ಥಿಗಳ ಹಲವು ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ. ಆದರೆ ಶೈಕ್ಷಣಿಕ ಒತ್ತಡಗಳ ಮಧ್ಯೆ ಅತ್ಯಂತ ನಾಜೂಕಾಗಿ ಮಾಡಬೇಕಾದ ಇಂತಹ ಕೆಲಸವನ್ನು ಕಾರ್ಯರೂಪಕ್ಕೆ ತರಬೇಕಾದರೆ ಶಿಕ್ಷಕನಾದವನಿಗೆ ಉತ್ತಮ ರೀತಿಯ ಮಾರ್ಗದರ್ಶನ ಹಾಗೂ ಸಹಕಾರ ಲಭಿಸುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ರೋಟರಿ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ನಡೆಯುವ ಮನೋಮಯ ಕಾರ್ಯಾಗಾರದ ಪ್ರಥಮ ಹಂತವು ಶಿಕ್ಷಕರನ್ನು ಒಬ್ಬ ಆಪ್ತ ಸಮಾಲೋಚಕರನ್ನಾಗಿ ಮಾರ್ಪಡಿಸುವಲ್ಲಿ ಸಫಲವಾಗಲಿ” ಎಂದು ಕಾರ್ಯಾಗಾರದ ಸಫಲತೆಗೆ ಶುಭಹಾರೈಸಿದರು.

ಈ ಕಾರ್ಯಾಗಾರದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ., ಉಪಪ್ರಾಂಶುಪಾಲರಾದ ಎಂ. ದೇವಿಚರಣ್ ರೈ , ಉಪನ್ಯಾಸಕ ಉಪನ್ಯಾಸಕೇತರ ವೃಂದದವರು, ವಿವೇಕಾನಂದ ಸಹಸಂಸ್ಥೆಗಳಿAದ ಸುಮಾರು 50 ರಷ್ಟು ಶಿಕ್ಷಕ- ಶಿಕ್ಷಕಿಯರು , ರೋಟರಿ ಕ್ಲಬ್ ನ ಸದಸ್ಯರು ಹಾಗೂ ಮನಸ್ವಿನಿ ಆಸ್ಪತ್ರೆಯ ಆಪ್ತ ಸಮಾಲೋಚಕರು ಪಾಲ್ಗೊಂಡಿದ್ದರು.
ವಿವೇಕಾನAದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಸುಧಾ ಎಸ್. ರಾವ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವಿವೇಕಾನಂದ ಕೇಂದ್ರೀಯ ವಿದ್ಯಾಲಯ ಪುತ್ತೂರು ಇದರ ಆಡಳಿತ ಮಂಡಳಿ ಸಂಚಾಲಕರಾದ ಖಣಟಿ ಭರತ್ ಪೈ ವಂದಿಸಿದರು. ವಿವೇಕಾನಂದ ಕನ್ನಡಮಾಧ್ಯಮ ಶಾಲೆಯ ಶಿಕ್ಷಕಿಯರು ಪ್ರಾರ್ಥಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ರತ್ನಾವತಿ . ಬಿ ವಂದಿಸಿದರು.