Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಸಹಜ ಜೀವನ ನಡೆಸಲು ಸಾಧ್ಯವಾದರೆ ನಮಗೂ ಸಂತೃಪ್ತಿ: ಕೃತಕ ಅಂಗಾAಗ ಸಲಕರಣೆ ವಿತರಿಸಿ ಡಾ.ಭರತ್ ಶೆಟ್ಟಿವೈ-ಕಹಳೆ ನ್ಯತೂಸ್

ಪಣಂಬೂರು: ಅನೇಕ ಜನರು ಕೆಲವೊಂದು ಅವಘಡ, ಗ್ಯಾಂಗ್ರಿನ್ ಮತ್ತಿತರ ವಿಚಾರಗಳಿಗೆ ಕಾಲು ಕಳೆದುಕೊಂಡ ಅನಿವಾರ್ಯ ಸ್ಥಿತಿಗಳಲ್ಲಿ ಕೃತಕ ಅವಯವದ ಜೋಡಣೆಯಿಂದ ತಕ್ಕಮಟ್ಟಿಗೆ ಸಹಜ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಂಸಿಎಫ್ ಎಸ್‌ಆರ್ ಸಹಕಾರದಲ್ಲಿ ಕೃತಕ ಅಂಗಾAಗ ಜೋಡಣೆ ಸಲಕರಣೆ ನೀಡುತ್ತಾ ಬರುತ್ತಿರುವುದು ನಮಗೂ ಸಂತೃಪ್ತಿ ತರುವ ಕರ್ತವ್ಯ ಎಂದು ತಿಳಿದಿದ್ದೇನೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು. ಶನಿವಾರ ಎಂ ಎಂಸಿಎಫ್ ಸಂಸ್ಥೆಯಲ್ಲಿ ನಡೆದ ಕೃತಕ ಅಂಗಾAಗ ಜೋಡಣೆ ಸಲಕರಣೆ ವಿತರಿಸಿ ಮಾತನಾಡಿದರು. ಸಾಮಾಜಿಕ ಜವಾಬ್ದಾರಿ ಹಣಕಾಸಿನಡಿ ಕ್ಲಾಸ್ ರೂಂ ನವೀಕರಣ, ಅಂಗನವಾಡಿ ಕೇಂದ್ರದ ನವೀಕರಣ, ಟ್ರೋಲಿ, ವಿತರಣೆ ಸಹಿತ ಅಭಿವೃದ್ಧಿ ಕಾರ್ಯಗಳು ನಡೆದಿವೆ.ಈ ಸಂದರ್ಭ ಕೃತಜ್ಞತೆ ಅರ್ಪಿಸುವುದಾಗಿ ಶಾಸಕರು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಂಸಿಎಫ್‌ನ ಸಿಇಒ ಆಗಿರುವ ನಿತಿನ್ ಎಂ. ಕಾಂಟಕ್ ಅವರು ಮಾತನಾಡಿ,ಸಿಎಸ್‌ಆರ್ ನಿಧಿಯಡಿ ಈ ಒಂದು ಕಾರ್ಯಕ್ರಮ ನನಗೆ ವೈಯುಕ್ತಿಕವಾಗಿ ಸಂತಸವನ್ನು ನೀಡಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ಮುಂದೆಯೂ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.ಮೇಯರ್ ಮನೋಚ್ ಕುಮಾರ್, ಮನಪಾ ಸದಸ್ಯರಾದ ಅನಿಲ್ ಕುಮಾರ್ ಅವರು ಸಂಸ್ಥೆಯ ಮಾನವೀಯ ಕರ್ತವ್ಯವನ್ನು ಶ್ರಾಯಿಸಿದರು. ಕಾರ್ಯಕ್ರಮದಲ್ಲಿ ಎಂಸಿಎಫ್ ಉತ್ಪಾದನಾ ವಿಭಾಗದ ಮುಖ್ಯಸ್ಥಗಿರೀಶ್ ಎಸ್. ಅವರು ಸಿಎಸ್‌ಆರ್ ಯೋಜನೆಯ ಕುರಿತಂತೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮನಪಾ ಸದಸ್ಯೆ ಸುಮಂಗಳ ರಾವ್ ಉಪಸ್ಥಿತರಿದ್ದರು. ಡಾ.ಯೋಗೀಶ್ ನಿರೂಪಿಸಿ ,ಚೇತನ್ ಮೆಂಡೋನ್ಸ ವಂದಿಸಿದರು. ಎಂಸಿಎಫ್ ಅಧಿಕಾರಿಗಳು,ರೋಟರಿ ಇನ್ನರ್ ವೀಲ್ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

11 ಮಂದಿಗೆ ಕೃತಕ ಕಾಲು ಜೋಡಣೆ,3 ಮಂದಿಗೆ ಶ್ರವಣ ಸಾಧನ ವಿತರಣೆ,ಸೆಂಟ್ರಲ್ ,ಜಂಕ್ಷನ್ ರೈಲು ನಿಲ್ದಾಣಕ್ಕೆ ವೀಲ್ ಚೇರ್, ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟ್ರೋಲಿ,ಯಂತ್ರ ಕೊಡುಗೆ,ಸೇವಾ ಭಾರತಿಗೆ ಸಂಸ್ಥೆಗೆ ಫಿಸಿಯೋಥೆರೆಪಿ ಸಾಧನ ವಿತರಣೆ ಮಾಡಲಾಯಿತು.