Recent Posts

Sunday, January 19, 2025
ಸುದ್ದಿ

ಆಳ್ವಾಸ್ ನಲ್ಲಿ ನ. 16 ರಿಂದ ನುಡಿಸಿರಿಯ ಸಂಭ್ರಮ – ಕಹಳೆ ನ್ಯೂಸ್

ಮೂಡಬಿದಿರೆ: ಜೈನ ಕಾಶಿ ಮೂಡಬಿದ್ರೆಯಲ್ಲಿ ಆಳ್ವಾಸ್ ನುಡಿಸಿರಿಯ ಕಂಪು ಹರಡಲು ಕ್ಷಣಗಣನೆ ಆರಂಭವಾಗಿದೆ. 15ನೇ ವರ್ಷದ ‘ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನ’ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ವಿದ್ಯಾಗಿರಿಯಲ್ಲಿ ಶ್ರೀಮತಿ ಸುಂದರಿ ಆನಂದ ಆಳ್ವ ಆವರಣದಲ್ಲಿ  3 ದಿನಗಳ ಕಾಲ ಜರುಗಲಿದೆ.

ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಕುರಿತ ಗಂಭೀರ ಚಿಂತನೆಗೆ ವೇದಿಕೆಯಾಗುವ ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ವೈಭವ ನವೆಂಬರ್ 16 17 18 ರವರೆಗೆ ನಡೆಯಲಿದ್ದು, ನುಡಿಸಿರಿಯು ಕಲೆ,ಕನ್ನಡ ಪ್ರೇಮಿಗಳು ಮತ್ತು ಸಾಹಿತ್ಯಾಸಕ್ತರಿಗೆ ಸಂಸ್ಕೃತಿಯ ರಸದೌತಣ ಉಣಬಡಿಸಲಿದೆ. ಈ ವರ್ಷವು ಸಮರೋಪ ಸಮಾರಂಭದಲ್ಲಿ ಕನ್ನಡ ನಾಡು ನುಡಿ, ಹಾಗೂ ಸಂಸ್ಕೃತಿಗಾಗಿ ಶ್ರಮಿಸಿದ 12 ಸಾಧಕರನ್ನ ಆಳ್ವಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ,

ಜಾಹೀರಾತು
ಜಾಹೀರಾತು
ಜಾಹೀರಾತು

ಲಕ್ಷಾಂತರ ಕಲಾಸಕ್ತರ ಸಮಾಗಮಕ್ಕೆ ಮೂಡಬಿದ್ರೆ ವೇದಿಕೆ ಸನ್ನದ್ದವಾಗಲಿದ್ದು, 15 ನೇ ವರ್ಷದ ಆಳ್ವಾಸ್ ನುಡಿಸಿರಿ ಸಾಧಕರಿಗೆ ನೀಡುವ ಪ್ರಶಸ್ತಿಯು 25 ಸಾವಿರ ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನ ಬಳಗೊಂಡಿದೆ, ಪ್ರಶಸ್ತಿಯು ಜಿಡಿ ಜೋಶಿ ಮುಂಬೈ, ಡಾ ಎ.ಬಿ ನರಸಿಂಹ ಮೂರ್ತಿ, ಪದ್ಮ ಶ್ರೀ ಪುರಸೃತ ಡಾ ಭಾರತಿ ವಿಷ್ಣು ವರ್ದನ್, ಡಾ ಅರುಂಧತಿ ನಾಗ್, ಎಲ್ ಬಂಧಿನವಾಜ ಕಲಿಂ ಆಲ್ತಾಳ, ಡಾ ಕೆ ರಮಾನಂದ್ ಬನರಿ, ಡಾ ನರಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೋ.ಎವಿ ನಾವುಡ, ಫಾದರ್ ಪ್ರಶಾಂತ್ ಮಾಡ್ತಾ, ಹೋನಾ ರಾಘವೇಂದ್ರ, ಅರ್ವ ಕೊರಗಪ್ಪ ಶೆಟ್ಟಿ, ಡಾ, ಮೈಸೂರು ನಟರಾಜ ಇವರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಲಬಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ, ಮೈಸೂರು ನಟರಾಜ. ಅವರಿಗೆ ನವೆಂಬರ್ 18ರ ಭಾನುವಾರ ಸಂಜೆ 4 ರಿಂದ ನಡೆಯುವ ಆಳ್ವಾಸ್ ನುಡಿಸಿರಿ ಸಮ್ಮೇಳನದ ಸಮರೋಪ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದೆಂದು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅದ್ಯಕ್ಷ ಡಾ. ಎಂ ಮೋಹನ್ ಆಳ್ವಾ ತಿಳಿಸಿದ್ದಾರೆ.