Thursday, November 21, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ರೆಖ್ಯ: ಹಿಂದೂ ರಾಷ್ಟ್ರದ ಘೋಷಣೆಯೊಂದಿಗೆ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ ; ಹಿಂದೂಗಳ ಸಂಘರ್ಷದಿAದ ಹಿಂದೂ ರಾಷ್ಟ್ರದ ಸ್ಥಾಪನೆಯು ಸಾಧ್ಯ – ಶ್ರೀ. ಚಂದ್ರ ಮೊಗೇರ-ಕಹಳೆ ನ್ಯೂಸ್

ರೆಖ್ಯ:ಹಿಂದೂ ರಾಷ್ಟ್ರದ ವಿಚಾರ, ಹಿಂದೂ ರಾಷ್ಟ್ರದ ಬೇಡಿಕೆಯನ್ನು ಇಡುವುದು ಪ್ರತಿಯೊಂದು ಹಿಂದೂವಿನ ಅನಿವಾರ್ಯತೆ ಆಗಿದೆ . ಹಿಂದುಗಳಿಗೆ ತಮ್ಮ ಹಬ್ಬವನ್ನು ಆಚರಿಸಲು ಕೂಡ ಅಡಚಣೆ ಬರುತ್ತಿದ್ದು – ದೀಪಾವಳಿ, ರಾಮನವಮಿ, ಗಣೀಶೋತ್ಸವ ಇತ್ಯಾದಿ ಹಬ್ಬದ ಸಮಯದಲ್ಲಿ ಕಲ್ಲುತೂರಾಟ, ಹಿಂಸಾಚಾರ ನಡೆಯುತ್ತಿದೆ. ವಕ್ಫ್ ಆಕ್ಟ್, ಲವ್ ಜಿಹಾದ್ ನಂತಹ ಸಮಸ್ಯೆ ಹಿಂದೂಗಳು ಎದುರಿಸಬೇಕಾಗಿದೆ. ಹಿಂದೂ ರಾಷ್ಟ್ರ ಸಧ್ಯದ ಕಾಲದ ಅವಶ್ಯಕತೆಯಾಗಿದೆ. ಶಿವಾಜಿ ಮಹಾರಾಜರು ತಮ್ಮ ಸಾಧನೆಯ ಬಲದಿಂದ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದ್ದರು. ಅದೇ ರೀತಿ ನಾವೆಲ್ಲರೂ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೈಜೋಡಿಸಬೇಕೆಂದು ಸಭೆಯಲ್ಲಿ ಉಪಸ್ಥಿತಿರಿದ್ದ ರೇಖ್ಯದ ಧರ್ಮಬಾಂಧವರಿಗೆ ಶ್ರೀ ಚಂದ್ರ ಮೊಗೇರ ಇವರು ಕರೆಯನ್ನು ನೀಡಿದರು.

ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ ಹಿಂದೂ ರಾಷ್ಟ್ರ-ಜಾಗೃತಿ ಸಭೆಯು ನವೆಂಬರ್ 10 ಭಾನುವಾರ ದಂದು ಶ್ರೀ ಗುಡ್ರಾಮಲ್ಲೇಶ್ವರ ಸಭಾಭವನ, ಗುಡ್ರಾದಿ, ರೆಖ್ಯದಲ್ಲಿ ಉತ್ಸಾಹಭರಿತ ವಾತಾವರದಲ್ಲಿ ಸಂಪನ್ನವಾಯಿತು. ಧರ್ಮವು ಕೇವಲ ಒಂದೆ, ಅದು ಸನಾತನ ವೈದಿಕ ಹಿಂದೂ ಧರ್ಮ – ಸೌ. ಅಶ್ವಿನಿ ನಾಯ್ಕ್ , ಸನಾತನ ಸಂಸ್ಥೆ ಸನಾತನ ಹಿಂದೂ ಧರ್ಮವೂ ಅತ್ಯಂತ ಶಾಸ್ತ್ರೀಯ ಮತ್ತು ವೈಜ್ನ್ಯಾನಿಕ ಧರ್ಮವಾಗಿದೆ. ನಮ್ಮ ಪ್ರಾಚೀನ ಭಾರತ ವೈಭವದ ಶಿಖರದ ಮೇಲೆ ಇತ್ತು. ಭಾರತದ ವೈಭವಕ್ಕೆ ಸನಾತನ ವೈದಿಕ ಹಿಂದೂ ಧರ್ಮ ಕಾರಣವಾಗಿತ್ತು. ಇದನ್ನು ಅರಿಯದವರು ಇಂದು ಸರ್ವಧರ್ಮ ಸಮಾಭಾವ, ಸನಾತನ ದ್ವೇಷವನ್ನು ಮೈಗೂಡಿಸಿಕೊಂಡಿದ್ದಾರೆ ಮತ್ತು ಹಿಂದುಗಳಾದ ನಾವು ಪಾಶ್ಚಾತ್ಯ ಅಂಧಾನುಕರಣೆಯನ್ನು ಮಾಡಿ ಹಾನಿ ಮಾಡಿಕೊಳ್ಳುತ್ತಿದ್ದೇವೆ. ಹಿಂದೂ ಧರ್ಮ ಶಿಕ್ಷಣವನ್ನು ಪಡೆದು, ಧರ್ಮಾಭಿಮಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಖಸ್ಯ ಮೂಲ ಧರ್ಮ – ನ್ಯಾಯವಾದಿ ಶ್ರೀ. ಈಶ್ವರ ಕೊಟ್ಟಾರಿ ಧರ್ಮ, ಅರ್ಥ, ಕಾಮ, ಮೋಕ್ಷ ಇವು 4 ಪುರುಷಾರ್ಥಗಳಲ್ಲಿ ಧರ್ಮ ಮತ್ತು ಮೋಕ್ಷದ ಪಾಲನೆಯನ್ನು ನಾವು ಮಾಡುತ್ತಿಲ್ಲ. ಧರ್ಮಾಚರಣೆ ಹಾಗೂ ರಾಷ್ಟ್ರ ರಕ್ಷಣೆಯಿಂದ ನಾವು ಧರ್ಮ ಮತ್ತು ಮೋಕ್ಷ ಈ ಪುರುಷಾರ್ಥಗಳ ಪಾಲನೆಯನ್ನು ಮಾಡಿ ಸಾಧನೆಯನ್ನು ಮಾಡಬೇಕಾಗಿದೆ ಮತ್ತು ಧರ್ಮಾಚರಣೆಯಿಂದಲೇ ನಮ್ಮ ರಕ್ಷಣೆ ಆಗುವುದು ಹಾಗೂ ಸುಖವು ಲಭಿಸುವುದು ಎಂದು ಎಲ್ಲರ ಮನಮುಟ್ಟುವಂತೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಗುಡ್ರಾದಿ ದೇವಸ್ಥಾನದ ಅಧ್ಯಕ್ಷರು ಶ್ರೀ ಮಂಜುನಾಥ ಗೌಡ ಕೈಕುರೆ, ಶ್ರೀ ಶಿಶಿಲೇಶ್ವರ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷರು ಶ್ರೀ ಜಯರಾಮ ನೆಲ್ಲಿತ್ತಾಯ, ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ನಾಯಕ್, ಶಿಶಿಲಾ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಶ್ರೀ ಸುಧೀನ್ ಡಿ, ಅರಸಿನಮಕ್ಕಿ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರು ಶ್ರೀ ನವೀನ್ ರೆಖ್ಯ, ಶ್ರೀ ಕರುಣಾಕರ ಶಿಶಿಲ, ಶ್ರೀ ಅಖಿಲ್ ರೆಖ್ಯ,ವಿಶ್ವ ಹಿಂದೂ ಪರಿಷತ್,ಬಜರಂಗದಳ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಊರ ಹಾಗೂ ಪರ ಊರ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.