Thursday, November 21, 2024
ದಕ್ಷಿಣ ಕನ್ನಡಸುದ್ದಿಸುಳ್ಯ

ಸುಳ್ಯ: ಎನ್ನೆಂಸಿ, ವಿಜ್ಞಾನ ಸಂಘದ ವತಿಯಿಂದ ವಿಜ್ಞಾನ ಮಾದರಿ ರಚನೆ ಸ್ಪರ್ಧೆ-ಕಹಳೆ ನ್ಯೂಸ್

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ನವೆಂಬರ್ 09 ಶನಿವಾರದಂದು ವಿಜ್ಞಾನ ಮಾದರಿ ರಚನೆ ಸ್ಪರ್ಧೆ ಆಯೋಜಿಸಲಾಗಿತ್ತು. ಕಾಲೇಜಿನ ವಿಜ್ಞಾನ ವಿಭಾಗ ಸಂಯೋಜಕರು ಮತ್ತು ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರಾದ ಸತ್ಯಪ್ರಕಾಶ್ ಡಿ ಹಾಗೂ ವಿಜ್ಞಾನ ಸಂಘದ ಸಂಚಾಲಕಿ ಅಶ್ವಿನಿ ಕೆ ಸಿ ಮುಂದಾಳತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ವಿಜ್ಞಾನ ವಿಭಾಗಗಳ ವಿವಿಧ ಪ್ರಯೋಗಾಲಯಗಳಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ನೆಹರೂ ಮೆಮೋರಿಯಲ್ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ವಿನುತ, ಭೌತಶಾಸ್ತ್ರ ಉಪನ್ಯಾಸಕಿ ಸುಚೇತ ಮತ್ತು ಗಣಕಶಾಸ್ತ್ರ ಉಪನ್ಯಾಸಕಿ ನಯನ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜ್ಞಾನ ಪದವಿ ಉಪನ್ಯಾಸಕರಾದ ಉಷಾ ಎಂ ಪಿ, ಅಕ್ಷತಾ ಬಿ, ಕುಲದೀಪ್ ಪೆಲ್ತಡ್ಕ, ಕೃತಿಕಾ ಕೆ ಜೆ, ಹರ್ಷಕಿರಣ ಬಿ ಆರ್, ಪಲ್ಲವಿ ಕೆ ಎಸ್, ಹರ್ಷಿತಾ ಮತ್ತು ಅಜಿತ್ ಕುಮಾರ್ ಮಾರ್ಗದರ್ಶನ ನೀಡಿದರು. ಲ್ಯಾಬ್ ಸಹಾಯಕಿ ಸಿಬ್ಬಂದಿಗಳಾದ ಜಯಂತಿ, ಸೌಮ್ಯ, ಗೀತಾ ಮತ್ತು ಭವ್ಯ ಸಹಕರಿಸಿದರು. ವಿಜ್ಞಾನ ಪದವಿ ವಿಭಾಗಗಳ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.