Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ ಶ್ರೀ ಯೋಗೀಶ್ವರ ಜೋಗಿ ಮಠ ಪುನರ್ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಅನುದಾನದ ಚೆಕ್ ಹಸ್ತಾಂತರ – ಕಹಳೆ ನ್ಯೂಸ್

ವಿಟ್ಲ : ಬಂಟ್ವಾಳ ತಾಲೂಕಿನ ವಿಟ್ಲ ಶ್ರೀ ಯೋಗೀಶ್ವರ ಜೋಗಿ ಮಠ ಪುನರ್ ನಿರ್ಮಾಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ರೂ.2 ಲಕ್ಷ ಮಂಜುರಾಗಿದ್ದು, ಸದರಿ ಚೆಕ್ಕನ್ನು ವಿಟ್ಲ ಶ್ರೀ ಯೋಗೀಶ್ವರ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಗುರು ಶ್ರದ್ಧಾನಾಥಾಜಿ ಮಠಾಧೀಶರಿಗೆ ಹಸ್ತಾಂತರ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ಯೋಜನಾಧಿಕಾರಿ ರಮೇಶ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಯಶವಂತ್ ವಿಟ್ಲ, ಸಮಿತಿಯ ಕಾರ್ಯಾಧ್ಯಕ್ಷರಾದ ಸುರಕ್ಷಾ ಹೆಲ್ತ್ ಸೆಂಟರ್ ನ ಡಾ. ಗೀತಾ ಪ್ರಕಾಶ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವಲಯ ಅಧ್ಯಕ್ಷರಾದ ಕೃಷ್ಣಯ್ಯ ಬಲ್ಲಾಲ್, ಸ್ವ-ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ನವೀನ್ ಚಂದ್ರ,ವಲಯ ಮೇಲ್ವಿಚಾರಕರಾಕಿ ಸರಿತಾ, ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು