Recent Posts

Sunday, January 19, 2025
ಸುದ್ದಿ

ಬಾಯೊಳಗೆ ಸಿಡಿದ ಪಟಾಕಿ: ಬಾಲಕಿ ಗಂಭೀರ ಗಾಯ – ಕಹಳೆ ನ್ಯೂಸ್

ಮೀರತ್‌: ಹುಡುಗನೊಬ್ಬ ಆಟವಾಡುತ್ತಿದ್ದ ಮೂರು ವರ್ಷದ ಬಾಲಕಿ ಬಾಯೊಳಗೆ ಪಟಾಕಿ ಇಟ್ಟು ಸಿಡಿಸಿದ್ದು ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ.

ಆರೋಪಿ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕಿಯ ತಂದೆ ಶಶಿ ಕುಮಾರ್ ಈ ಕುರಿತು ದೂರಿನಲ್ಲಿ ಕೆಲವು ಅಂಶಗಳನ್ನು ಹೇಳಿಕೊಂಡಿದ್ದು, ಗ್ರಾಮದ ಹರ್ಪಾಲ್ ಎಂಬಾತ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಬಳಿ ಬಂದು ಕೈಯಲ್ಲಿದ್ದ ಸಿಡಿಮದ್ದನ್ನು ಬಾಲಕಿಯ ಬಾಯಿಗೆ ಇಟ್ಟು ಸಿಡಿಸಿದ್ದಾನೆ ಇದರಿಂದ ಬಾಲಕಿ ಮುಖಕ್ಕೆ ಗಾಯವಾಗಿದ್ದು 50 ಹೊಲಿಗೆಗಳನ್ನು ಹಾಕಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕಿಯ ತಂದೆ ಶಶಿ ಕುಮಾರ್ ಈ ಕುರಿತು ಪೊಲೀಸರಿಗೆ ದೂರಿನಲ್ಲಿ ಕೆಲವು ಅಂಶಗಳನ್ನು ಹೇಳಿಕೊಂಡಿದ್ದು, ಗ್ರಾಮದ ಹರ್ಪಾಲ್ ಎಂಬಾತ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಬಳಿ ಬಂದು ಕೈಯಲ್ಲಿದ್ದ ಸಿಡಿಮದ್ದನ್ನು ಬಾಲಕಿಯ ಬಾಯಿಗೆ ಇಟ್ಟು ಸಿಡಿಸಿದ್ದಾನೆ. ಇದರಿಂದ ಬಾಲಕಿ ಮುಖಕ್ಕೆ ಗಾಯವಾಗಿದ್ದು 50 ಹೊಲಿಗೆಗಳನ್ನು ಹಾಕಲಾಗಿದೆ. ಗಂಟಲಿನಲ್ಲೂ ಕೂಡ ಸೋಂಕು ಉಂಟಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದೃಷ್ಟವಶಾತ್ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.