Thursday, November 14, 2024
ಉಡುಪಿಕಾರ್ಕಳಸುದ್ದಿ

ಕಾರ್ಕಳ: ಎನ್.ಎಸ್.ಎಸ್. ಶಿಬಿರಗಳು ಗ್ರಾಮೀಣ ಬದುಕಿಗೆ ಬೆಸೆಯುವ ಕೊಂಡಿ ಡಾ.ಗಣೇಶ ಪೂಜಾರಿ-ಕಹಳೆ ನ್ಯೂಸ್

ಕಾರ್ಕಳ: ರಾಷ್ಟçದಾದ್ಯಂತ ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ ಕೊಂಡಿಯಾಗಿದೆ, ಆ ಮೂಲಕ ವಿದ್ಯಾರ್ಥಿಗಳಿಗೆ ಶಿಬಿರಗಳು ಗ್ರಾಮೀಣ ಬದುಕಿನ ಸೊಗಡನ್ನು ಬಿಚ್ಚಿಟ್ಟು ಶೈಕ್ಷಣಿಕ ಬದುಕಿಗೆ ಹೊಸ ರೂಪ ಕೊಡುತ್ತಿದೆ. ನನ್ನ ವಿದ್ಯಾರ್ಥಿ ಜೀವನದಲ್ಲೂ ಎನ್.ಎಸ್.ಎಸ್. ನಲ್ಲಿ ತೊಡಗಿಸಿಕೊಂಡ ಸ್ವ ಅನುಭವದಿಂದ ಈ ಅರಿವಾಗಿದೆ ಎಂದು ಎನ್.ಎಂ.ಎ.ಎA. ಇಂಜಿನಿಯರಿAಗ್ ಕಾಲೇಜು ನಿಟ್ಟೆಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಗಣೇಶ ಪೂಜಾರಿ ಅವರು ಹೇಳಿದ್ದಾರೆ.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲಂಬಾಡಿ ಪದವು ಇಲ್ಲಿ ನಡೆದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಹತ್ತು ಶಿಬಿರಗಳನ್ನು ಯಶಸ್ವಿಯಾಗಿ ಸಂಘಟಿಸಿದ ಎನ್.ಎಸ್.ಎಸ್. ಶಿಬಿರಾಧಿಕಾರಿ ರವಿ ಜಿ. ಅವರನ್ನು ಸನ್ಮಾನಿಸಿ, ಪ್ರಸ್ತುತ ಶಿಬಿರಕ್ಕೆ ಸಹಕರಿಸಿದ ಸರ್ವರನ್ನು ಪ್ರಶಂಶಿಸಿದರು. ಉಡುಪಿ ಜಿಲ್ಲಾ ಎನ್.ಎಸ್.ಎಸ್. ನೋಡಲ್ ಅಧಿಕಾರಿ ಡಾ.ಜಯಶಂಕರ ಕಂಗಣ್ಣಾರು ಮಾತನಾಡಿ ಎನ್.ಎಸ್.ಎಸ್. ಶಿಬಿರದ ಮಹತ್ವ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿಬಿರದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರನ್ನು ಅಭಿನಂದಿಸಲಾಯಿತು. ಶಿಬಿರ ನಡೆದ ಸವಿನೆನಪಿಗೆ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ವತಿಯಿಂದ ರೂ.10,000 ದತ್ತಿನಿಧಿಯನ್ನು ಆತಿಥೇಯ ಶಾಲೆಗೆ ನೀಡಿ ಅದರ ಬಡ್ಡಿ ಮೊತ್ತವನ್ನು ಪ್ರತಿವರ್ಷ ಏಳನೇ ತರಗತಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆವ ವಿದ್ಯಾರ್ಥಿಗೆ ಕೊಡುವ ಯೋಜನೆಯನ್ನು ಪ್ರಸ್ತಾಪಿಸಲಾಯಿತು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕಶನ್ ಟ್ರಸ್ಟ್(ರಿ.) ಟ್ರಸ್ಟಿಗಳಾದ ಶ್ರೀ ಅನಿಲ್ ಕುಮಾರ್ ಜೈನ್, ಸಿ.ಎ. ನಿತ್ಯಾನಂದ ಪ್ರಭು, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಶಾಂತಿರಾಜ ಹೆಗ್ಡೆ, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂತೋಷ್, ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಸ್ಟೂಡೆಂಟ್ ಅಫರ‍್ಸ್ ಶ್ರೀಮತಿ ಶಕುಂತಲಾ ಎಂ. ಸುವರ್ಣ, ನಿಟ್ಟೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ನಿತಿನ್ ಸಾಲ್ಯಾನ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಶ್ರೀ ಜಯಂತ್ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಓ. ಶ್ರೀ ದಿನೇಶ್ ಎಂ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್. ಶಿಬಿರಾಧಿಕಾರಿ ರವಿ ಜಿ. ವಂದಿಸಿದರು. ಮಣಿಪಾಲ ಜ್ಞಾನಸುಧಾ ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು