Recent Posts

Friday, November 22, 2024
ದಕ್ಷಿಣ ಕನ್ನಡಮಂಗಳೂರುಸುದ್ದಿ

ಪಿ.ಎ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಪಿ ಯು ಕ್ಯಾಂಪಸ್ ಕ್ರೋಮ ಮತ್ತು ಡಯೆಟೆಕ್ 6.0 -ಕಹಳೆ ನ್ಯೂಸ್

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಏಕದಿನ ಅಂತರ್ ಪಿ ಯು ಕಾಲೇಜು ಸ್ಪರ್ಧೆ ಕ್ಯಾಂಪಸ್ ಕ್ರೋಮ  ಪಿ ಎ ಕ್ಯಾಂಪಸ್ ನಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆಸಿಸಿಐ ಅಧ್ಯಕ್ಷರಾದ ಆನಂದ್ ಜಿ ಪೈ ‘ಇಂದಿನ ಈ ಸ್ಪರ್ಧೆ ಗೆಲುವಿಗಿಂತಲೂ ಅನುಭವಕ್ಕೆ ಹೆಚ್ಚು ಒತ್ತನ್ನು ನೀಡಲಿ. ಸೋಲು ಗೆಲುವು ಇದ್ದದ್ದೆ ಆದರೆ ಅನುಭವ ಅದಕ್ಕಿಂತಲೂ ಮಿಗಿಲು’ ಎಂದರು.

ಪಿ ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಸರ್ಫ್ರಾಜ್ ಜೆ ಹಾಸಿಂ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕೆಸಿಸಿಐ ಕಾರ್ಯ ನಿರ್ವಾಹಕ ಮುಖ್ಯಸ್ಥರಾದ ಮೈತ್ರೇಯ ಎ, ಪಿ ಎ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲರಾದ ಡಾ ಹರಿಕೃಷ್ಣಣ್ ಜಿ, ಪಿ.ಎ.ಇ.ಟಿ ಯ ಎ.ಜಿ.ಎಂ ಶರಫುದ್ದೀನ್ ಪಿ.ಕೆ, .ಎ.ಇ.ಟಿ ಯ ವಿದ್ಯಾರ್ಥಿ ಡೀನ್ ಡಾ. ಸಯ್ಯಿದ್ ಅಮೀನ್ ಅಹ್ಮದ್, ಪಿ.ಎ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ. ಸಲೀಮುಲ್ಲಾ ಖಾನ್,ಪಿ ಎ ಪಾಲಿಟೆಕ್ನಿಕ್ ನ ಉಪಪ್ರಾಂಶುಪಾಲರಾದ ಪ್ರೊ. ಇಸ್ಮಾಯಿಲ್ ಖಾನ್, ಕ್ಯಾಂಪಸ್ ವ್ಯವಸ್ಥಾಪಕರಾದ ಡಾ ಇಕ್ಬಾಲ್, ಐ.ಕ್ಯೂ.ಎ.ಸಿ ಯ ಮುಖ್ಯಸ್ಥೆ ವಾಣಿಶ್ರೀ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಆಶಲತಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಪ್ತಿ ಉದ್ಯಾವರ್, ಮಾನವಿಕ ವಿಭಾಗದ ಮುಖ್ಯಸ್ಥೆ ನೂರ್ ಜಹಾನ್ ಬೇಗಂ, ಪಿ.ಎ.ಇ.ಟಿ ದಾಖಲಾತಿ ನಿರ್ವಹಣಾಧಿಕಾರಿ ಶಫಿನಾಝ್, ಕಾಲೇಜ್ ನ ಖರೀದಿ ವಿಭಾಗದ ನಿರ್ದೇಶಕರಾದ ಹಾರಿಸ್ ಟಿಡಿ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಮುಹಮ್ಮದ್ ಸಂಶೀರ್ ಕೆ.ಎಸ್, ಲವೀನ ಡಿ ಸೋಜ ಮತ್ತು ಸಜೀರ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಧ್ಯಾರ್ಥಿನಿ ಹಿಬಾ ಮರ್ಯಂ ಮತ್ತು ಮುಹಮ್ಮದ್ ಫರ್ಹಾನ್ ಕಾರ್ಯಕ್ರಮ ನಿರೂಪಿಸಿದರೆ ಹೈಫ್ನಾ ಸ್ವಾಗತಿಸಿ ಶಾಝಿಮ ವಂದಿಸಿದರು ಮತ್ತು ಸಾಹಿಲ್ ಪ್ರಾರ್ಥನೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಾದ ನಂತರದಲ್ಲಿ ಆಹಾರ ಮೇಳ ಡಯೆಟಕ್ 6.0 ಅಥಿತಿಗಳಿಂದ ಉದ್ಘಾಟನ ಕಾರ್ಯಕ್ರಮ ನೆರವೇರಿತು. ವಿವಿಧ ರೀತಿಯ ಆಹಾರ ಪ್ರದರ್ಶನ ಎಲ್ಲರ ಗಮನವನ್ನು ಸೆಳೆಯಿತಲ್ಲದೆ ಹೋಮ್ ಬೇಕರ್ ಗಳ ಆಹಾರ ಪ್ರದರ್ಶನ ಇನ್ನಷ್ಟು ಆಕರ್ಷಣೆಯ ಬಿಂದುಗಳಾಗಿದ್ದವು. ಅತ್ಯುತ್ತಮ ಸ್ಟಾಲ್ ಪ್ರಶಸ್ತಿಯೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಯಿತು.
ಸಂಜೆ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರನ್ನು ಅಥಿತಿಗಳು ಸನ್ಮಾನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಪರ್ಧೆಯ ಭಾಗವಾಗಿ ವಿವಿಧ ವಿಭಾಗಗಳಿಂದ 10 ಕ್ಕೂ ಅಧಿಕ ಸ್ಪರ್ಧೆಗಳನ್ನು ಏರ್ಪಡಿಸಿದ್ದು 15 ಕ್ಕೂ ಅಧಿಕ ಕಾಲೇಜುಗಳು ಭಾಗವಹಿಸದರು ಮತ್ತು ಅದರಲ್ಲಿ ವಿಜೇತರಾದವರ ವಿವರ ಇಂತಿದೆ. ಟೆಕ್ಟೋನಿಕ್ 2.0ರ ಭಾಗವಾಗಿ ಬ್ರೈನ್ ಬ್ಲಾಸ್ಟ್ ಐಟಿ ಕ್ವಿಝ್ ನಲ್ಲಿ ಪ್ರಥಮ ಸೇಂಟ್ ಅಲೋಶಿಯಸ್ ಪಿ.ಯು ಕಾಲೇಜ್ ಮತ್ತು ದ್ವಿತೀಯ ಹಿರಾ ವಿಮೆನ್ಸ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು. ಪೋಸ್ಟರ್ ಕ್ವಿಸ್ಟ್ ಅಲ್ಲಿ ಪ್ರಥಮ ಕೆ ಪಾಂಡ್ಯರಾಜ ಬಲ್ಲಾಲ್ ಪಿ.ಯು ಕಾಲೇಜ್ ಮತ್ತು ದ್ವಿತೀಯ ಸೇಂಟ್ ಅಲೋಶಿಯಸ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು.

ಹ್ಯೂಮನಿಸ್ಟ್ 2.0 ರ ಭಾಗವಾಗಿ ಟ್ರಾಂಕ್ಯುಲ್ ಫ್ಲಾಶ್ ನಲ್ಲಿ ಪ್ರಥಮ ಕನಚೂರ್ ಪಿ ಯು ಕಾಲೇಜ್ ಮತ್ತು ದ್ವಿತೀಯ ಕುನಿಲ್ ಪಿ.ಯು ಕಾಲೇಜ್ ತಮ್ಮದಾಗಿಸಿಕೊಂಡರು.
ಕ್ರೋಮ ರೀಲ್ಸ್ ಅಲ್ಲಿ ಪ್ರಥಮ ವಿಶ್ವಮಂಗಳ ಪಿ ಯು ಕಾಲೇಜ್ ಮತ್ತು ದ್ವಿತೀಯ ಹಿರಾ ವುಮೆನ್ಸ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು. ಡಯಟೆಕ್ 6.0 ರ ಭಾಗವಾಗಿ ಫ್ರೂಟ್ ಆರ್ಟ್ ಗ್ಯಾಲರಿಯಲ್ಲಿ ಪ್ರಥಮ ಹಿರಾ ವುಮೆನ್ಸ್ ಪಿ ಯು ಕಾಲೇಜ್ ಹಾಗೂ ದ್ವಿತೀಯ ವಿಶ್ವಮಂಗಳ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು.

ಕುಕಿAಗ್ ಕಂಫೇಶನ್ಸ್ ಅಲ್ಲಿ ಪ್ರಥಮ ಸೇಂಟ್ ಅಲೋಶಿಯಸ್ ಪಿ ಯು ಕಾಲೇಜ್ ಹಾಗೂ ದ್ವಿತೀಯ ಹಿರಾ ವುಮೆನ್ಸ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು. ಟೇಸ್ಟೀ ಟಾಸ್ಕ್ ಪ್ರಥಮ ಕಣಚೂರ್ ಪಿ ಯು ಕಾಲೇಜ್ ಮತ್ತು ದ್ವಿತೀಯ ಕೆ ಪಾಂಡ್ಯರಾಜ ಬಲ್ಲಾಲ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು. ಕಾಮಿಯೋ 2.0 ಭಾಗವಾಗಿ ಮಿಸ್ಟರಿ ಟ್ರೈಲ್ಸ್ ಅಲ್ಲಿ ಪ್ರಥಮ ಜಿ ಎಚ್ ಎಸ್ ಎಸ್ ಪಿ ಯು ಕಾಲೇಜ್ ಉಡ್ಮಾ ಮತ್ತು ದ್ವಿತೀಯ ಮಾಪ್ಸ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು.

ದಿ ಕ್ರಿಯೇಟಿವ್ ಬ್ರೈನ್ ಅಲ್ಲಿ ಪ್ರಥಮ ಮತ್ತು ದ್ವಿತೀಯ ಎರಡನ್ನು ಕಣಚೂರ್ ಪಿ ಯು ಕಾಲೇಜ್ ತಮ್ಮದಾಗಿಸಿಕೊಂಡರು. ಸ್ಪಾರ್ಟನ್ (ಬೆಸ್ಟ್ ಮ್ಯಾನೆಜರ್) ಅಲ್ಲಿ ಕಣಚೂರು ಅತ್ಯುತ್ತಮ ವಾಗಿ ಹೊರಹೊಮ್ಮಿತು. ಒಟ್ಟು ಸ್ಪರ್ಧೆಯ ಚಾಂಪಿಯನ್ ಆಗಿ ಕಣಚೂರ್ ಪಿ ಯು ಕಾಲೇಜ್ ಹೊರಹೊಮ್ಮಿದರೆ ರನ್ನರ್ ಆಗಿ ಹಿರಾ ವುಮೆನ್ಸ್ ಪಿ ಯು
ಕಾಲೇಜ್ ತನ್ನ ಮುಡಿಗೇರಿಸಿಕೊಂಡಿತು.