Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಭವಿಷ್ಯದ ಕನಸು ಯುವ ಜನತೆಯ ಮನದಲ್ಲಿ ಜಾಗೃತವಾಗಲಿ – ರಾಜೇಶ್ ಪದ್ಮಾರ್-ಕಹಳೆ ನ್ಯೂಸ್

ಪುತ್ತೂರು, : ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ದಿನಗಳು ಮಹತ್ತರ ಪಾತ್ರ ವಹಿಸುತ್ತದೆ. ಇದು ಸಮಯ ಕಳೆಯುವ ವಯಸ್ಸಲ್ಲ ಸಾಧಿಸುವ ವಯಸ್ಸು. ವಿದ್ಯಾರ್ಥಿಗಳು ಅಂಕ ಪಡೆಯುವ ಉದ್ದೇಶ ಹೊಂದಿದರೆ ಸಾಲದು, ಪ್ರತಿಭೆ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಪಡೆದುಕೊಳ್ಳುವ ಅಗತ್ಯವಿದೆ. ಅಂತಹ ಶಿಕ್ಷಣವನ್ನು ಒದಗಿಸುವಲ್ಲಿ ವಿವೇಕಾನಂದ ಕಾಲೇಜು ಸುಮಾರು ಆರು ದಶಕಗಳಿಂದ ತೊಡಗಿಸಿಕೊಂಡಿರುವುದುಪ್ರಶAಸನೀಯ. ಇಂದಿನ ಯುವಜನತೆ ವರ್ತಮಾನದ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಹಾಗೂ ಅದನ್ನು ಯಾವ ರೀತಿ ಬಗೆಹರಿಸಬೇಕು ಎಂಬುದನ್ನು ಗಮನಿಸಬೇಕು, ಅಂತೆಯೇ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ತೊಡಗಿಸಿಕೊಳ್ಳಬೇಕು &quoಣ; ಎಂದು ಕರ್ನಾಟಕ ದಕ್ಷಿಣ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.

ಇವರು ವಿವೇಕಾನಂದ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವದ ಸಭಾ ವೇದಿಕೆ ಅಹಲ್ಯಾಬಾಯಿ ಹೋಳ್ಕರ್‌ನಲ್ಲಿ ನಡೆದ ಮೊದಲನೇ ದಿನದ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ವಕ್ತಾರರಾಗಿ ಆಗಮಿಸಿ ದಿಕ್ಸೂಚಿ ಮಾತುಗಳನ್ನಾಡಿದರು. &quoಣ;ಏಕತೆಯ ಭಾರತ, ಗೌರವಶಾಲಿ ಭಾರತ, ಸುರಕ್ಷಿತ ಭಾರತ, ವಿಕಸಿತ ಭಾರತ ಹಾಗೂ ರಾಷ್ಟ್ರೀಯ ಏಕತೆ ಇವು ನಮ್ಮ ಯುವ ಜನತೆಯ ಮುಂದೆ ಇರುವ ಸವಾಲುಗಳು. ಯವಜನತೆಯು ಆತ್ಮವಿಶ್ವಾಸವನ್ನು ಇರಿಸಿಕೊಂಡು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಏರಬೇಕು&quoಣ; ಎಂದು ಅವರು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಸರಕಾರದ ವಿಧಾನ ಪರಿಷತ್‌ನ ಸದಸ್ಯ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿಯಿರಬೇಕು. ಆ ಗುರಿಯತ್ತ ಸಾಗಲು ಜ್ಞಾನ ಅತೀ ಅಗತ್ಯ. ಆಗ ಮಾತ್ರ ಗುರಿ ತಲುಪಲು ಸಾಧ್ಯ. ವಿದ್ಯಾಭ್ಯಾಸವನ್ನು ಪಡೆಯುವುದರ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು&quoಣ; ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುಖಕ್ಕಿಂತ ಪರರ ಹಿತಕ್ಕಾಗಿ ಶ್ರಮಿಸಬೇಕು. ವಿವೇಕಾನಂದ ಕಾಲೇಜಿನಿಂದ ಶಿಕ್ಷಣ ಮುಗಿಸಿ ಹೊರಸಾಗುವ ವಿದ್ಯಾರ್ಥಿಗಳು ಸಜ್ಜನರಾಗಿ, ಗುಣ ಸಂಪನ್ನರಾಗಿ ತಾವು ಮುಂದಿನ ದಿನಗಳಲ್ಲಿ ಯಾವ ದಾರಿಯಲ್ಲಿ ಸಾಗಬೇಕು ಎಂಬುದನ್ನು ನಿರ್ಧರಿಸಿರಬೇಕು. ಭವಿಷ್ಯದ ನಡೆ ಯಾವ ಕಡೆ ಎಂಬ ವಿಚಾರದಲ್ಲಿ ಜಾಗೃತರಾಗುವುದು ಅನಿವಾರ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಉಪಾಧ್ಯಕ್ಷ ಸತೀಶ್ ರಾವ್,ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ.ಗೋಪಾಲಕೃಷ್ಣ ಭಟ್, ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಪಿ. ಕೆ ಪರಮೇಶ್ವರ ಶರ್ಮ ಸ್ವಾಗತಿಸಿ, ಉಪಪ್ರಾಂಶುಪಾಲರಾದ ಎಂ.ದೇವಿಚರಣ್ ರೈ ವಂದಿಸಿದರು. ಉಪನ್ಯಾಸಕಿ ಕವಿತಾ ನಿರೂಪಿಸಿ, ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.