Friday, November 15, 2024
ದಕ್ಷಿಣ ಕನ್ನಡಸುದ್ದಿ

ಬೆಳೆ ಕಟಾವು ವೈಜ್ಞಾನಿಕವಾಗಿ ನಡೆಯಬೇಕು ತಹಶಿಲ್ದಾರ್ ಡಾ.ಪ್ರತಿಭಾ ಆರ್-ಕಹಳೆ ನ್ಯೂಸ್

ಇಂದು ತಹಶಿಲ್ದಾರ್ ಪ್ರತಿಭಾ ಆರ್ ನೇತೃತ್ವದಲ್ಲಿ ಮೂಡಬೆಟ್ಟು ಗ್ರಾಮದ ವ್ಯಾಪ್ತಿಯಲ್ಲಿ ಭತ್ತದ ಬೆಳೆ ಕಟಾವು ನಡೆಯಿತು.

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಭಾರತ ಸರ್ಕಾರದ ರಾಷ್ಟ್ರೀಯ ಮಾದರಿ ಸಮೀಕ್ಷೆ ಮಾರ್ಗಸೂಚಿಯಂತೆ 1945-46 ರಿಂದ ಬೆಳೆ ಅಂದಾಜು ಸಮೀಕ್ಷೆಯಡಿ ರಾಜ್ಯದಲ್ಲಿ ಬೆಳೆಯಲಾಗುತ್ತಿರುವ ವಿವಿಧ ಬೆಳೆಗಳಿಗೆ ಕೃಷಿ ಇಲಾಖೆಯಿಂದ ಅಧಿಸೂಚಿತ ಬೆಳೆಗಳ ಬೆಳೆ ಕಟಾವು ಪ್ರಯೋಗಗಳನ್ನು ಕಂದಾಯ ಕೃಷಿ ತೋಟಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಿಬ್ಬಂದಿ/ಅಧಿಕಾರಿಗಳ ಸಹಯೋಗದೊಂದಿಗೆ ಕೈಗೊಂಡು ಸರಾಸರಿ ಇಳುವರಿಯನ್ನು ಅಂದಾಜು ಮಾಡಿ ಅದರ ಆಧಾರದ ಮೇಲೆ ರಾಜ್ಯದ ವಿವಿಧ ಬೆಳೆಗಳ ಉತ್ಪನ್ನವನ್ನು ಅಂದಾಜು ಮಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾಕೆ ಬೇಕು ಬೆಳೆ ಕಟಾವು ಸಮೀಕ್ಷೆ?
ಸದರಿ ಬೆಳೆ ಕಟಾವು ಪ್ರಯೋಗಗಳನ್ನು ಕೃಷಿ ಇಳುವರಿಯನ್ನು ಅಂದಾಜಿಸಲು ಮಾತ್ರವಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೃಷಿಯ ಆದಾಯ, ಉತ್ಪಾದನೆ, ಮತ್ತು ಮೇವಿನ ಪ್ರಮಾಣವನ್ನು ಮತ್ತು ಕೃಷಿ ಪ್ರಶಸ್ತಿ ನೀಡಲು ಪ್ರಮುಖ ಪಾತ್ರ ವಹಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳೆ ವಿಮೆ ಪರಿಹಾರದ ಅಂದಾಜು ಮಾಡಲು ಬೇಕು ಬೆಳೆ ಕಟಾವು ಫಲಿತಾಂಶ
ಬೆಳೆ ವಿಮೆ ನಷ್ಟವನ್ನು ಅಂದಾಜಿಸಿ ವಿಮೆಯನ್ನು ಇತ್ಯರ್ಥಪಡಿಸಲು ಇದರ ದತ್ತಾಂಶವನ್ನು ಉಪಯೋಗಿಸಲಾಗುತ್ತದೆ.

???ಪ್ ಮೂಲಕ ಬೆಳೆ ಕಟಾವು ದತ್ತಾಂಶ ದಾಖಲು
??ಪ್ರಸ್ತುತ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರಾಜ್ಯದಲ್ಲಿ 2016-17 ನೇ ಸಾಲಿನಿಂದ ಮೊಬೈಲ್ ಆಪ್ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ.
??ಈ ಯೋಜನೆಯಡಿ ಬೆಳೆ ಕಟಾವು ಪ್ರಯೋಗಗಳನ್ನು ಹೋಬಳಿ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ.
?? ಪ್ರಸ್ತುತ ಬೆಳೆ ಕಟಾವು ಪ್ರಯೋಗಗಳನ್ನು ನಿಖರವಾಗಿ ಮತ್ತು ಪಾರದರ್ಶಕವಾಗಿ ಕೈಗೊಳ್ಳಲು ಓIಅ ಯು ಅಭಿವೃದ್ಧಿ ಪಡಿಸಲಾದ ಮೊಬೈಲ್ ಅಪ್ ತಂತ್ರಾAಶವನ್ನು ಬಳಸಲಾಗುತ್ತಿದೆ.

ಋತುವಾರು ಬೆಳೆಯ ಬಿತ್ತನೆ ಅವಧಿ
??ಮುಂಗಾರು – ಏಪ್ರಿಲ್ ನಿಂದ ಆಗಸ್ಟ್.
??ಹಿಂಗಾರು : ಸೆಪ್ಟೆಂಬರ್ ನಿಂದ ಡಿಸೆಂಬರ್
??ಬೇಸಿಗೆ ಜನವರಿ ಯಿಂದ ಮಾರ್ಚ್

ಮೂಲ ಕಾರ್ಯಕರ್ತರು
*?ಕಂದಾಯ ಇಲಾಖೆ ಗಿಂಔ
ಕೃಷಿ ಇಲಾಖೆ ಂAಔ, ಂಔ
ತೋಟಗಾರಿಕೆ ಇಲಾಖೆ ಂಊಔ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
Seಛಿಡಿeಣಚಿಡಿಥಿ/Pಆಔ

ಮೇಲ್ವಿಚಾರಕರು.
ಕಂದಾಯ ಇಲಾಖೆ :
ಂಅ, ತಹಶಿಲ್ದಾರ್
ಕೃಷಿ ಇಲಾಖೆ: ಎಆ, ಆಆಂ, ಂಆA, ಂಔ
ತೋಟಗಾರಿಕೆ ಇಲಾಖೆ:ಆಆಊ/Sಂಆಊ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ: ಇಔ ಂಆ ಖಿPಔ
ಸಾಂಖ್ಯಿಕ ಇಲಾಖೆ: ಆSಔ ಂಆ, ಂSಔ, SI

ಪ್ರಾಯೋಗಿಕ ಬೆಳೆಯ ಷರತ್ತುಗಳು:
?? ಯೋಜನಾ ಪಟ್ಟಿಯಲ್ಲಿ ಆಯ್ಕೆಯಾದ ಬೆಳೆಯು (ನೀರಾವರಿ/ಮಳೆ ಆಶ್ರಿತ).ಆಯ್ಕೆಯಾದ ಗ್ರಾಮದಲ್ಲಿ ಎರಡು ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಬೆಳೆದಿರಬೇಕು.
??. ಹೊಲವು ನಿರ್ಧಿಷ್ಟ ಅಳತೆ (5m*5m ಅಥವಾ 10m* 5m) ಪ್ಲಾಟಿಗಿಂತ ದೊಡ್ಡದಿರಬೇಕು.
?? ಬೆಳೆ ಸ್ಪರ್ಧೆಗೆ/ಬೀಜ ಉತ್ಪಾದನೆಗೆ/ಮೇವಿನ ಉತ್ಪಾದನೆಗೆ ಬೆಳೆದಿರಬಾರದು.
?? ಮಿಶ್ರ ಬೆಳೆಯಾಗಿದ್ದಲ್ಲಿ 10% ರಷ್ಟು ಪ್ರಾಯೋಗಿಕ ಬೆಳೆ ಇರಬೇಕು.

ಸಮೀಕ್ಷೆಯ ಹಂತಗಳು
1.ಗ್ರಾಮದ ಆಯ್ಕೆ
2.ಸರ್ವೆ/ಸಬ್ ಸರ್ವೆ ನಂಬರ್ ಗಳ ಆಯ್ಕೆ
3. ಹೊಲದ ಆಯ್ಕೆ
4. ಬೆಳೆ ಕಟಾವು ಮಾಡುವ ನಿರ್ದಿಷ್ಟ ಅಳತೆಯ ಪ್ರಾಯೋಗಿಕ ಪ್ಲಾಟ್ ಅನ್ನು ಗುರುತಿಸುವುದು
5. ಪ್ರಾಯೋಗಿಕ ಪ್ಲಾಟಿನಲ್ಲಿ ಬೆಳೆಯ ಕಟಾವು ಮಾಡಿ ತೂಕ ಮಾಡುವುದು.

ತಹಶಿಲ್ದಾರ್ ಡಾ.ಪ್ರತಿಭಾ ಆರ್
_” ಬೆಳೆ ಸಮೀಕ್ಷೆಯ ದತ್ತಾಂಶವು ಬೆಳೆ ವಿಮೆ ಮೊತ್ತ ಇತ್ಯರ್ಥಪಡಿಸಲು, ದೇಶದ ಕೃಷಿ ಇಳುವರಿಯನ್ನು ಅಂದಾಜಿಸಲು, ಕೃಷಿ ಪ್ರಶಸ್ತಿ ನೀಡಲು, ಕೃಷಿ ಆದಾಯ ನಿರ್ಧರಿಸಲು ಬಳಕೆಯಾಗುವುದರಿಂದ ವೈಜ್ಞಾನಿಕವಾಗಿ ಮತ್ತು ನಿಖರವಾಗಿ ಬೆಳೆ ಕಟಾವು ನಡೆಯಬೇಕು. ಇಗ ನಿಖರವಾದ ???ಪ್ ನ ಮೂಲಕ ನಡೆಯುತ್ತಿದ್ದು 100% ನಿಖರ ಫಲಿತಾಂಶ ಬರುತ್ತಿದೆ. ಕಾಪು ತಾಲ್ಲೂಕಿನಲ್ಲಿ ಅತ್ಯಂತ ನಿಖರವಾಗಿ ಬೆಳೆ ಕಟಾವು ಸಮೀಕ್ಷೆ ನಡೆಯುತ್ತಿದೆ.”

ತಹಶಿಲ್ದಾರ್ ಪ್ರತಿಭಾ ಆರ್ ರವರು ಇಂದು ಸ್ವತಃ ಕಾಪು ತಾಲ್ಲೂಕಿನ ಮೂಡಬೆಟ್ಟು ಗ್ರಾಮದ ಹೊಲಕ್ಕೆ ಭೇಟಿ ನೀಡಿ ಭತ್ತದ ಬೆಳೆ ಕಟಾವು ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಖರವಾದ ಫಲಿತಾಂಶಕ್ಕೆ ಅಗತ್ಯವಾದ ಮಾರ್ಗದರ್ಶನ ಮತ್ತು ಸಲಹೆ ನೀಡಿದರು.

ಗ್ರಾಮ ಆಡಳಿತಾಧಿಕಾರಿ ಡೇನಿಯಲ್, ಗ್ರಾಮ ಸಹಾಯಕ ಸದಾನಂದ ಇವರು ಬೆಳೆ ಕಟಾವು ಸಮೀಕ್ಷೆಗೆ ಸಹಕರಿಸಿದರು.