Sunday, January 19, 2025
ಕೇರಳಸುದ್ದಿ

ಶ್ರೀ ಎಡನೀರು ಮಠಕ್ಕೆ ನ.17ರಂದು ಕಾಮಕೋಟಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಪೂಜ್ಯ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿ ಆಗಮನ – ಕಹಳೆ ನ್ಯೂಸ್

ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠಕ್ಕೆ ನ.17ರಂದು ಕಾಮಕೋಟಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಪೂಜ್ಯ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿ ಆಗಮಿಸಲಿದ್ದಾರೆ.

ಬೆಳಗ್ಗೆ ಪೂಜ್ಯ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪೂರ್ಣಕುಂಭ ಸ್ವಾಗತ ಮೂಲಕ ಬರಮಾಡಿಕೊಂಡು ಬಳಿಕ ಬೆಳಗ್ಗೆ 10.30 ರಿಂದ 3.00 ರವರೆಗೆ ಪೂಜ್ಯ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರಿಂದ ಸಂಸ್ಥಾನ ದೇವರ ಪೂಜೆ ನಡೆಯಲಿದೆ.
ಸಂಜೆ ಪರಮಪೂಜ್ಯ ಶ್ರೀ ಶ್ರೀ ಮಹಾಸ್ವಾಮಿಗಳವರ ಅಭಿನಂದನ ಕಾರ್ಯಕ್ರಮ ನಡೆದು, ಬಳಿಕ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಿಂದ ಜಾಂಬವತೀ ಕಲ್ಯಾಣ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು