Sunday, January 19, 2025
ದಕ್ಷಿಣ ಕನ್ನಡಮಂಗಳೂರುಸುದ್ದಿ

ಶ್ರೀ ಶ್ರೀನಿವಾಸ ದೇವಸ್ಥಾನ, ವೈಕುಂಠ, ವಳಚಿಲ್, ಮಂಗಳೂರು – ಶ್ರೀನಿವಾಸ ಲಕ್ಷತುಳಸಿ ಅರ್ಚನೆ-ಕಹಳೆ ನ್ಯೂಸ್

ಮಂಗಳೂರು: ಶ್ರೀ ಶ್ರೀನಿವಾಸ ದೇವಸ್ಥಾನ, ವೈಕುಂಠ, ವಳಚಿಲ್ ಮಂಗಳೂರಿನಲ್ಲಿ 13 ನವೆಂಬರ್ 2024 ರಂದು ನಡೆದ ಶ್ರೀನಿವಾಸ ಲಕ್ಷತುಳಸಿ ಅರ್ಚನೆ ಕಾರ್ಯಕ್ರಮವು ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿದೆ. ಬೆಳಗ್ಗೆ ತುಳಸಿ ಪೂಜೆ, ಗೋ ಪೂಜೆ, ಲಕ್ಷತುಳಸಿ ಅರ್ಚನೆಗಳನ್ನು ವೈದಿಕ ಆಚರಣೆಗಳೊಂದಿಗೆ ನಡೆಸಲಾಯಿತು. ಮಧ್ಯಾಹ್ನ ಮಹಾಪೂಜೆಯನ್ನು ಅರ್ಚಕರು ವೈಭವವಾಗಿ ನಡೆಸಿದರು. ನಂತರ ಭಕ್ತರಿಗೆ ಪ್ರಸಾದವನ್ನು ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ ಮೈಸೂರು ನಗಾರಿ, ಹುಲಿ ಕುಣಿತ, ಭಜನೆ ಮತ್ತು ಕುಣಿತ ಭಜನೆಯು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು. ತದನಂತರ ದೀಪೋತ್ಸವ ಹಾಗೂ ಮಹಾಪೂಜೆಯನ್ನು ನಡೆಸಲಾಯಿತು. ದೀಪೋತ್ಸವ ಸಮಾರಂಭದಲ್ಲಿ, ಭಕ್ತರು ಸಾಂಪ್ರದಾಯಿಕ ದೀಪಗಳ ಜೊತೆಗೆ ಆಕಾಶ ದೀಪಗಳನ್ನು ಹಾರಿಸುವ ಮೂಲಕ ಆಕಾಶ ದೀಪೋತ್ಸವವನ್ನು ಆಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು