Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಎರಡನೇ ದಿನ ಪರಂಪರಾ ದರ್ಶನ-ಕಹಳೆ ನ್ಯೂಸ್

ಪುತ್ತೂರು, : ವಿದ್ಯಾರ್ಥಿಗಳು, ಯುವಕ-ಯುವತಿಯರು ದೇಶಕ್ಕಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಡಲು ಸಿದ್ಧರಾಗಿರಬೇಕು. ದೇಶವನ್ನು ಆಕ್ರಮಿಸುವವರ ವಿರುದ್ಧ ಧ್ವನಿಯೆತ್ತಬೇಕು. ಮಾತ್ರವಲ್ಲದೆ, ದೇಶಕ್ಕೆ ವಂಚನೆಗೆಯ್ಯುವವರನ್ನು ವಿರೋಧಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಮಾಧ್ಯಮಗಳ ಮುಖಾಂತರ ಪ್ರಚಲಿತ ಘಟನೆಗಳನ್ನು ವಿದ್ಯಾರ್ಥಿಗಳು ಅರಿತುಕೊಂಡು ಮುಂದಿನ ನಡೆಗಳಿಗೆ ಸನ್ನದ್ಧರಾಗಬೇಕು ಎಂದು ರಾಷ್ಟ್ರಸೇವಿಕಾ ಸಮಿತಿಯ ಕರ್ನಾಟಕ ದಕ್ಷಿಣ, ಹೊಯ್ಸಳ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್ ಹೇಳಿದರು. ಅವರು ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನ. 14ರಂದು ನಡೆದ ಕಾಲೇಜು ವಾರ್ಷಿಕೋತ್ಸವ “ಪರಂಪರಾ ದರ್ಶನ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಇನ್ನೋರ್ವ ಮುಖ್ಯ ಅತಿಥಿಗಳಾದ ಜಿ.ಎಲ್. ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಧನ್ವ ಆಚಾರ್ಯ ಮಾತನಾಡಿ, ಜೀವನ ಎನ್ನುವುದು ಪಾಠ
ಪುಸ್ತಕಗಳಿಂದ ಹೊರತಾದುದು, ಬದುಕು ಸವಾಲುಗಳ ಮಾಲಿಕೆ. ಸವಾಲುಗಳನ್ನು ಅವಕಾಶವಾಗಿ ಬಳಸಿಕೊಂಡು, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಯಾವುದೇ ಕಾರ್ಯಗಳಲ್ಲಿ ಪೂರ್ಣವಾಗಿ
ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಯಶಸ್ಸು ನಮ್ಮದಾಗುತ್ತದೆ. ಇನ್ನೊಬ್ಬರ ಸೋಲು ನಮಗೆ ಪಾಠವಾಗಲಿ. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಮಾನವೀಯ ಗುಣಗಳನ್ನು ಹೊಂದಿ ಜೀವನದಲ್ಲಿ ಜಯಶಾಲಿಯಾಗಬೇಕು ಎಂದು ಶುಭಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕರಾದ ಎಂ. ಗೋಪಾಲಕೃಷ್ಣ ಭಟ್ ಮಾತನಾಡುತ್ತಾ, ವಿವೇಕಾನಂದ ವಿದ್ಯಾಸಂಸ್ಥೆಗಳು ಪರಂಪರೆಯನ್ನು ಬಿಂಬಿಸುವ
ಜ್ಞಾನದೇಗುಲಗಳು. ಇಲ್ಲಿ ಜ್ಞಾನಾರ್ಜನೆಯನ್ನು ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ- ವಿದೇಶಮಟ್ಟದಲ್ಲಿ ಯಶಸ್ಸನ್ನು ಗಳಿಸಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಇಂದಿನ
ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುಂದುವರೆಯಬೇಕು ಎಂದು ಹಿತನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ವತ್ಸಲಾ ರಾಜ್ಞಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೆ. ಎನ್. ಸುಬ್ರಹ್ಮಣ್ಯ, ಇಂದಿರಾ ಬಿ.ಕೆ, ಡಾ. ಕೃಷ್ಣಪ್ರಸನ್ನ, ಶಿಕ್ಷಕ-ರಕ್ಷಕ ಸಂಘದ ಜತೆಕಾರ್ಯದರ್ಶಿ ಪ್ರಸನ್ನ ಕುಮಾರ್, ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಕಾಲೇಜಿನ ಪ್ರಾಚಾರ್ಯ ಮಹೇಶ್ ನಿಟಿಲಾಪುರ, ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು.