₹6 ಕೋಟಿ 60 ಲಕ್ಷದ ಅಡಿಕೆ ವ್ಯಾಪಾರ ; ಕೋಟಿ ಕೋಟಿ ಮೋಸ, ಅಡಿಕೆ ಉದ್ಯಮಿ ಉದಯ್ ಶೆಟ್ಟಿ ವಿರುದ್ಧ ಎಫ್ಐಆರ್..!! ಅವಮಾನಕ್ಕೆ ಅಂಜಿದ ವ್ಯಾಪಾರಿ ಶೈಲೇಶ್ ನೇಣಿಗೆ ಶರಣು.! – ಕಹಳೆ ನ್ಯೂಸ್
ಜೀವನ ಅನ್ನೋದು ಮೂರು ದಿನದ ಸಂತೆ ಅಂತೀವಲ್ಲ, ಇದಕ್ಕೇ ನೋಡಿ ಇವತ್ತು ಖುಷಿ ಖುಷಿಯಾಗಿದ್ದವ್ರು ಅರೆಗಳಿಗೆಯಲ್ಲಿ ಏನಾಗ್ತಾರೋ ಹೇಳೋದಕ್ಕಾಗಲ್ಲ. ನೋಡೋದಕ್ಕೆ ಹೈಫೈ ಆಗಿದ್ದಾರೆ ಅಂದ್ರೆ ಅವ್ರಿಗೆ ಕಷ್ಟಗಳೇ ಇಲ್ಲ ಅಂತಲ್ಲ. ನೋಡೋರ ದೃಷ್ಟಿಗೆ ರಾಯಲ್ ಲೈಫ್ ನಡೆಸುತ್ತಿದ್ದರೂ ಅವರಿಗೂ ಬೆಟ್ಟದಷ್ಟು ಕಷ್ಟಗಳಿರ್ತವೆ. ಕೋಟಿ ಕೋಟಿ ಎಣಿಸೋ ಕೈಗಳಿಗೂ ಮೋಸ ಮಾಡೋರಿರ್ತಾರೆ. ಚಿತ್ರದುರ್ಗದಲ್ಲಿ ಆಗಿದ್ದೂ ಇದೇ. ಅಡಿಕೆ ವ್ಯಾಪಾರ ಮಾಡ್ತಿದ್ದ ಅಮಾಯಕನೊಬ್ಬ ದುರಂತ ಅಂತ್ಯ ಕಂಡಿದ್ದಾನೆ. ಕೋಟಿ ಕೋಟಿ ಬೆಲೆಯ ಅಡಿಕೆ ಖರೀದಿ ಮಾಡಿ, ವ್ಯಾಪಾರಿಯೊಬ್ಬರ ಕೈಗಿಟ್ಟವ ನೇಣಿನ ಕುಣಿಕೆಯಲ್ಲಿ ನೇತಾಡಿದ್ದಾನೆ.
ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದ ಶೈಲೇಶ್, ಸುಮಾರು ವರ್ಷದಿಂದ ಅಡಿಕೆ ವ್ಯಾಪಾರ ಮಾಡ್ತಿದ್ದರು. ಆದರೆ, ಯಾವತ್ತೂ ಕೂಡಾ ಎಡವಿರಲಿಲ್ಲ. ಪ್ರತಿ ವರ್ಷವೂ ಕೋಟಿ ಕೋಟಿ ಬೆಲೆಯ ಅಡಿಕೆಯನ್ನ ರೈತರಿಂದ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದರು. ಅದೇ ರೀತಿ ಈ ಬಾರಿಯೂ 6 ಕೋಟಿ 60 ಲಕ್ಷ ಬೆಲೆಯ ಅಡಿಕೆ ಖರೀದಿ ಮಾಡಿದರು. ಅದನ್ನೆಲ್ಲಾ ಉದಯ್ ಶೆಟ್ಟಿ ಅನ್ನೋ ಉದ್ಯಮಿಗೆ ಮಾರಾಟ ಮಾಡಿದರು.
ಅಡಿಕೆ ಖರೀದಿ ಮಾಡಿದ್ದ ಉದಯ್ ಶೆಟ್ಟಿ, ಹಣ ಕೊಡದೆ ಸತಾಯಿಸ್ತಿದ್ದ. ನಿತ್ಯವೂ ಒಂದೊಂದು ಕಾರಣ ಹೇಳಿ, ಸಾಗಹಾಕ್ತಿದ್ದ. ನಿನ್ನೆ ಇದೇ ವಿಷ್ಯವಾಗಿ ಹಣ ಕೇಳೋದಕ್ಕೆ ಹೋಗಿದ್ದಾರೆ. ಈ ವೇಳೆ ಬಾಯಿಗೆ ಬಂದಂತೆ ಬೈದ ಉದಯ್ ಶೆಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳಿಸಿದ್ನಂತೆ. ಒಂದ್ಕಡೆ ಅಡಿಕೆ ಕೊಟ್ಟ ರೈತರ ಕಾಟ, ಇನ್ನೊಂದ್ಕಡೆ ಹಣ ಸಿಗೋದೇ ಅನುಮಾನ. ಇದೆಲ್ಲದರಿಂದ ಒತ್ತಡಕ್ಕೆ ಸಿಲುಕಿದ ಶೈಲೇಶ್, ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ನನ್ನ ಸಾವಿಗೆ ಉದಯ್ ಶೆಟ್ಟಿಯೇ ಕಾರಣ ಅಂತಾ ಮರಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಆರೋಪಿ ಉದಯ್ ಶೆಟ್ಟಿ, ನನ್ನ ಸಹೋದರನ ಸಾವಿಗೆ ಕಾರಣ ಆದವ್ನಿಗೆ ತಕ್ಕ ಶಿಕ್ಷೆ ಆಗ್ಬೇಕು ಅಂತಾ ಶೈಲೇಶ್ ಸಹೋದ ಸಂತೋಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕಂತೂ ಉದಯ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದರೆ ಮುಂದೆ ಹೇಗೆಲ್ಲಾ ತನಿಖೆ ನಡೆಯುತ್ತೆ ಅನ್ನೋದೇ ಯಕ್ಷಪ್ರಶ್ನೆ.