Friday, November 15, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಧರ್ಮನಗರ: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ) ಮಲರಾಯ ಜೇರ ಕ್ಷೇತ್ರದ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತದ ಬಗ್ಗೆ ಪತ್ರಿಕಾಗೋಷ್ಠಿ-ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ವಿಟ್ಲ- ಕಂಬಳಬೆಟ್ಟು ಧರ್ಮನಗರ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ) ಮಲರಾಯ ಜೇರ ಇಲ್ಲಿ ಡಿ. 21 ರಿಂದ ಡಿ. 25 ರವರೆಗೆ ವೈದ್ಯನಾಥ, ಮಲರಾಯ ಸಪರಿವಾರ ದೈವಗಳ ಸಾನಿಧ್ಯವೃದ್ಧಿ ಬ್ರಹ್ಮ ಕಲಶಾಭಿಷೇಕ ಮತ್ತು ನೇಮೋತ್ಸವ ಕಾರ್ಯಕ್ರಮದ ಬಗ್ಗೆ ಧರ್ಮನಗರ ಸಮಾಜ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಜೆರ್ಣೋದ್ದಾರ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಮುಡೈಮಾರ್‌ ಮಾತನಾಡಿ ’21 ವರ್ಷಗಳ ಹಿಂದೆ ಪ್ರಶ್ನೆಚಿಂತನೆ ನಡೆದು ಯಾವ ಅಭಿವೃದ್ಧಿ ಕಾಣದೆ ಈಗ 9 ವರ್ಷದ ಹಿಂದೆ ಕುoಡಡ್ಕ ವಿಷ್ಣ್ಣು ಮೂರ್ತಿ ಸಪರಿವಾರ ದೇವರ ಜೀರ್ಣೋದ್ದಾರ ಚಿಂತನೆಯಲ್ಲಿ ಕಂಡು ಬಂದ ಹಾಗೆ ಈ ಸಾನಿಧ್ಯ ಗಳ ಬಗ್ಗೆ ಮತ್ತೆ ಇಲ್ಲಿ ಅಷ್ಟ ಮಂಗಲ ಚಿಂತನೆ, ನಿವೃತಿ ಕಾರ್ಯಗಳು ನಡೆದು ಜೀರ್ಣೋದ್ದಾರ ಕಾರ್ಯ ಅಂತಿಮ ಹಂತದಲ್ಲಿವೆ. ವೈದ್ಯನಾಥ ಮಲರಾಯ ದೈವಗಳಿಗೆ ಪ್ರತ್ಯೇಕ ಗುಡಿಗಳು ದೈವಗಳಿಗೆ ಕಟ್ಟೆ ಗಳನ್ನು ನಿರ್ಮಾಣ ಮಾಡಲಾಗಿದೆ, ಒಟ್ಟು 60 ಲಕ್ಷ ವೆಚ್ಚ ಗಳ ನಿರ್ಮಾಣ ಕಾರ್ಯಗಳು ನಡೆದಿದ್ದು, ಇದರಲ್ಲಿ ಸುಮಾರು 40 ಲಕ್ಷ ಕ್ಕೂ ಮೀರಿದ ಖರ್ಚು ವೆಚ್ಚಗಳನ್ನು ಗ್ರಾಮಸ್ಥರು ಹಾಗೂ ಭಕ್ತರು ಪೂರೈಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಹ್ಮ ಕಲಶ ಸ್ವಾಗತ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಅಮೈ ಮಾತನಾಡಿ ’ನವೆಂಬರ್ 17 ರಂದು ನಡೆಯುವ ಚಪ್ಪರ ಮುಹೂರ್ತ ಕಾರ್ಯ ಕ್ರಮಕ್ಕೆ ಸುಮಾರು 1000 ದಿಂದ 1500 ಜನರು ಸೇರುವ ನಿರೀಕ್ಷೆ ಇದೆ. ಬ್ರಹ್ಮ ಕಲಶಾಭೀಷೇಕ ಕಾರ್ಯಕ್ರಮದಲ್ಲಿ 1 ಲಕ್ಷ ಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇದರ ತಯಾರಿಗಾಗಿ 600 ಮನೆಗಳಿಗೆ ಭೇಟಿ ವಿಶೇಷ ಅಭಿಯಾನ ರಚಿಸಲಾಗಿದೆ. 15 ರಿಂದ 20 ಜನರನ್ನೊಳಗೊಂಡ ಎರಡು ಮೂರು ತಂಡಗಳ ಮೂಲಕ ಈ ಅಭಿಯಾನ ನಡೆಯುತ್ತಿದ್ದು, ಪ್ರತಿ ಮನೆಗಳಿಗೆ ಭೇಟಿ ನೀಡಿ ಆಮಂತ್ರಣ ಪತ್ರವನ್ನು ಹಂಚಲಾಗಿದೆ. ಪ್ರಸ್ತುತ 1786 ಮನೆಗಳಿಗೆ ಈಗಾಗಲೇ ಭೇಟಿ ನೀಡಲಾಗಿದ್ದು, ಇನ್ನು 3000 ಮನೆ ತಲುಪಬೇಕೆಂಬ ಗುರಿ ಇದೆ. ಹಾಗೂ ಚಪ್ಪರ ಮುಹೂರ್ತ ಬಳಿಕ ಹೆಚ್ಚಿನ ತಂಡಗಳನ್ನು ರಚಿಸಿ ಅಭಿಯಾನ ಮುಂದುವರೆಸುವುದೆಂದು ತೀರ್ಮಾನಿಸಲಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬ್ರಹ್ಮಕಲಶ ಸ್ವಾಗತ ಸಮಿತಿಯ ಉಪಾಧ್ಯಕ್ಷರು ಸುಧಾಕರ್‌ ಶೆಟ್ಟಿ ಬೀಡಿನಮಜಲು ಮಾತನಾಡಿ’ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ) ಮಲರಾಯ ಜೇರ ಕ್ಷೇತ್ರದಲ್ಲಿ ಡಿ. 21 ರಿಂದ 25 ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದರ ಚಪ್ಪರ ಮುಹೂರ್ತ ಕಾರ್ಯಕ್ರಮ ನವೆಂಬರ್‌ 17 ನೇ ಆದಿತ್ಯವಾರ ನಡೆಯಲಿದೆ. ಬೆಳಗ್ಗೆ ವೇ.ಮೂ.ಜಯರಾಮ ಜೋಯಿಸರು ಬಡೆಜ ಇವರ ಪೌರೋಹಿತ್ಯದಲ್ಲಿ ಗಣಪತಿ ಹವನ ಪ್ರಾರ್ಥನೆ ನಡೆಯಲಿದೆ. ಬಳಿಕ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಪ್ರಭಾಕರ್‌ ಭಟ್‌ ಕಲ್ಲಡ್ಕ ಇವರು ಬ್ರಹ್ಮಕಲಶೋತ್ಸವದ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಿದ್ದಾರೆ. ಬಳಿಕ ಕೃಷ್ಣಪ್ಪ ಪೂಜಾರಿ, ಧರ್ಮದರ್ಶಿಗಳು ಚಾಮುಂಡೇಶ್ವರಿ ದೇವಸ್ಥಾನ ರಜತಾದ್ರಿ ಹಾಗೂ ಸೇಸಪ್ಪ ಗೌಡ ಹಡೀಲು ಅಧ್ಯಕ್ಷರು ಮಲರಾಯ ದೈವಸ್ಥಾನ ನಡುಮನೆ ಪಿಲಿಂಜ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಲಿದ್ದಾರೆ. ನಂತರ ನಾರಾಯಣ ಶೆಟ್ಟಿ ಕುಂಡಡ್ಕ, ಬಾಲಕೃಷ್ಣ ಗೌಡ ಅಮೈ, ರಮೇಶ್‌ ಭಟ್‌ ಎಂ.ಹೆಚ್‌ ಭಂಡಾರದ ಮನೆ ಮಿತ್ತೂರು, ಜಯರಾಮ ಕಾರ್ಯಾಡಿಗುತ್ತು ಇವರು ತೋರಣ ಮುಹೂರ್ತಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಸತೀಶ್‌ ಶೆಟ್ಟಿ ಮೂಡೈಮಾರ್‌, ಅಧ್ಯಕ್ಷರು ಜೀರ್ಣೊದ್ಧಾರ ಸಮಿತಿ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ ಮಲರಾಯ ಜೇರ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಚಪ್ಪರ ಮುಹೂರ್ತದ ಸಭಾ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಸುರೇಂದ್ರ ಕಾರ್ಯಾಡಿ, ಬ್ರಹ್ಮಕಲಶ ಸ್ವಾಗತ ಸಮಿತಿ ಕಾರ್ಯದರ್ಶಿ ಮೋಹನ್‌ ಕೆ ಎಸ್‌, ಬ್ರಹ್ಮಕಲಶ ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ಮಹಾಬಲ ಆಚಾರ್ಯ ಉಪಸ್ಥಿತರಿದ್ದರು.