Saturday, November 16, 2024
ಬೆಂಗಳೂರುಮಂಡ್ಯರಾಜ್ಯಸುದ್ದಿ

ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ; ಟಿಪ್ಪು ಗೋಷ್ಠಿ ನಡೆಸಲು ಚಿಂತನೆ, ಕನ್ನಡ ದ್ರೋಹಿ, ಮತಾಂಧನ ಗೋಷ್ಠಿ ನಡೆಸಿದ್ರೆ ಎಚ್ಚರ ಎಂದ ಹಿಂದುಪರ ಸಂಘಟನೆಗಳು..!! – ಕಹಳೆ ನ್ಯೂಸ್

ಮಂಡ್ಯ : 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Kannada Sahitya Sammelan) ಮಂಡ್ಯದಲ್ಲಿ (Mandy) ಡಿಸೆಂಬರ್‌ 20, 21, 22 ರಂದು ನಡೆಯಲಿದೆ. ಈ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ಗೋಷ್ಠಿ ನಡೆಸಬೇಕು ಎಂದು ಚಿಂತಕ, ಬರಹಗಾರ ಜಗದೀಶ್ ಕೊಪ್ಪ (Jagadeesh Koppa) ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಈ ವಿಚಾರವಾಗಿ ಜಗದೀಶ್ ಕೊಪ್ಪ ಅವರು ಮಂಡ್ಯದಲ್ಲಿ ಮಾತನಾಡಿ, ಮಂಡ್ಯ, ಮೈಸೂರು ಆಸ್ಥಾನಕ್ಕೆ ಟಿಪ್ಪು ನೀಡಿದ ಕೊಡುಗೆ ಬಗ್ಗೆ ಗೋಷ್ಠಿ ಆಗಬೇಕು. ಟಿಫ್ಪು ಕೊಡುಗೆ ಬಗ್ಗೆ ಬ್ರಿಟೀಷರೆ ತಿಳಿಸಿದ್ದಾರೆ. ಮಂಡ್ಯ, ಮೈಸೂರು ರೈತರಿಗೆ ಟಿಪ್ಪು ಅಪಾರ ಕೊಡುಗೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಟಿಪ್ಪು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ ಹಾಗಾಗಿ ಟಿಪ್ಪು ಗೋಷ್ಠಿ ನಡೆಸಲೇಬೇಕು ಎಂದು ಆಗ್ರಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಟಿಪ್ಪುವಿನ ಕೊಡುಗೆ ಬಗ್ಗೆ ನಾನೇ ಅನೇಕ ಪುಸ್ತಕ ಬರೆದಿದ್ದೇನೆ. ಈ ಬಾರಿ ಸಮ್ಮೇಳನದಲ್ಲಿ ಟಿಪ್ಪುವಿನ ಗೋಷ್ಟಿ ಆಗಲೇಬೆಕು. ಎಂದು ಜಗದೀಶ್ ಕೊಪ್ಪ ಅವರು ಹೇಳಿದ್ದಾರೆ.

ಜಗದೀಶ್ ಕೊಪ್ಪ ಹೇಳಿಕೆಗೆ ಹಿಂದು ಸಂಘಟನೆಗಳ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಟಿಪ್ಪು ಸುಲ್ತಾನ್ ಕನ್ನಡ ದ್ರೋಹಿ, ಮತಾಂಧ. ಮೈಸೂರು ಪ್ರಾಂತ್ಯದಲ್ಲಿ ಪರ್ಸಿಯನ್ ಭಾಷೆಯನ್ನ ಹೇರಿದ ಕನ್ನಡ ವಿರೋಧಿ. ಇಂತ ಟಿಪ್ಪುವಿನ ಗೋಷ್ಠಿ ಮಾಡಲು ಮುಂದಾದ್ರೆ ಅದನ್ನ ತಡೆಯಲಿದ್ದೇವೆ ಎಂದು ಹಿಂದುಪರ ಸಂಘಟನೆಗಳ ಮುಂಖಂಡರಿಂದ ಆಕ್ರೋಶ ವ್ಯಕ್ತವಾಗಿದೆ.