Recent Posts

Saturday, November 16, 2024
ಉಡುಪಿಕಾರ್ಕಳಸುದ್ದಿ

ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.9ರಿಂದ 14ರ ವರೆಗೆ ನಡೆಯುವ ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ – ಕಹಳೆ ನ್ಯೂಸ್

ಡುಪಿ: ದೇವಸ್ಥಾನದಲ್ಲಿ ಶತ ಚಂಡಿಕಾಯಾಗ ನಿರ್ವಿಘ್ನವಾಗಿ ನಡೆಯಲಿ. ಇದರಿಂದ ಲೋಕ ಮತ್ತು ಎಲ್ಲ ಭಕ್ತರಿಗೂ ಒಳಿತಾಗಲಿ. ಇಂಥ ಧಾರ್ಮಿಕ ಕಾರ್ಯಕ್ರಮಗಳು ಜಿಲ್ಲೆಯ ದೇವಸ್ಥಾನಗಳಲ್ಲಿ ನಡೆಯು ವಂತಾಗಲಿ ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.9ರಿಂದ 14ರ ವರೆಗೆ ನಡೆಯುವ ಶತ ಚಂಡಿಕಾ ಯಾಗ ಮತ್ತು ಬ್ರಹ್ಮಮಂಡಲ ಸೇವೆಯ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಸಭಾಂಗಣದಲ್ಲಿ ಗುರುವಾರ ಬಿಡುಗಡೆಗೊಳಿಸಿ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ನ ಉಡುಪಿ ಮಹಿಳಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಶತ ಚಂಡಿಕಾಯಾಗ ಮತ್ತು ಬ್ರಹ್ಮಮಂಡಲ ಸೇವೆ ಸಮಿತಿ ಅಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಅರ್ಥಿಕ ಸಮಿತಿ ಸಂಚಾಲಕ ರಮೇಶ್‌ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ನಾರಾಯಣ ದಾಸ್‌ ಉಡುಪ, ಕೋಶಾಧಿಕಾರಿ ಸುದರ್ಶನ್‌ ಶೇರಿಗಾರ್‌, ಪವಿತ್ರಪಾಣಿ ಶ್ರೀನಿವಾಸ ಆಚಾರ್ಯ, ಮೊಕ್ತೇಸರರಾದ ರಾಜಶೇಖರ ಭಟ್‌, ಸುಭಾಶ್‌ ಭಂಡಾರಿ, ಸುರೇಶ್‌ ಶೆಟ್ಟಿ ಬೈಲೂರು, ಮೋಹನ ಆಚಾರ್ಯ, ಅರುಣ್‌ ಶೆಟ್ಟಿಗಾರ್‌, ಜಿ.ಪ್ರೇಮ್‌ನಾಥ್‌, ಪ್ರವೀಣ್‌ ಕುಮಾರ್‌, ದುರ್ಗಾಪ್ರಸಾದ್‌ ಸಿ.ಎಚ್‌., ಭಾರತಿ ಜಯರಾಮ್‌ ಆಚಾರ್ಯ, ಹರೀಶ್‌ ಸುವರ್ಣ, ಶಾಂತಾ ಶೇರಿಗಾರ್‌, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಅಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಉಡುಪಿ ವಿಭಾಗದ ಗೌರವ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೆ.ದಿವಾಕರ ಶೆಟ್ಟಿ ತೋಟದ ಮನೆ, ಮಹಿಳಾ ವಿಭಾಗ ಅಧ್ಯಕ್ಷೆ ನಿರುಪಮಾ ಪ್ರಸಾದ್‌, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಪ್ರಸಂಗಕರ್ತ ಪವನ್‌ ಕಿರಣ್‌ಕೆರೆ, ಎಂ.ಎಲ್‌.ಸಾಮಗ ಉಪಸ್ಥಿತರಿದ್ದರು. ಉಡುಪಿ ವಿಭಾಗದ ಅಧ್ಯಕ್ಷ ಜಯಕರ್‌ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ದಾಮೋದರ ಶರ್ಮಾ ನಿರೂಪಿಸಿದರು.