ಕೇಪು ಸರಕಾರಿ ಹಿ ಪ್ರಾ ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ ; ಎಂಆರ್ ಪಿ ಎಲ್ ನಿಂದ ಸಮಾಜಮುಖಿ ಕೆಲಸ ನಿರಂತರ; ಅಶೋಕ್ ಕುಮಾರ್ ರೈ-ಕಹಳೆ ನ್ಯೂಸ್
ಪುತ್ತೂರು: ಎಂ ಆರ್ ಪಿ ಎಲ್ ಸಂಸ್ಥೆಯಿಂದ ನಿರಂತರ ಸಮಾಜಮುಖಿ ಕೆಲಸ ನಡೆಯುತ್ತಿದೆ, ಎಲ್ಲಾ ಕ್ಷೇತ್ರಗಳಿಗೂ ಈ ಸಂಸ್ಥೆಯ ನೆರವು ವ್ಯಾಪಿಸಿರುವುದು ಅತ್ಯಂತ ಸಂತೋಷ ಹಾಗೂ ಅಭಿಮಾನದ ವಿಚಾರವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೇಪು ಸರಕಾರಿ ಹಿ ಪ್ರಾ ಶಾಲೆಯಲ್ಲಿ ಎಂಆರ್ ಪಿ ಎಲ್ ನಿಂದ 25 ಲಕ್ಷ ಅನುದಾನದಿಂದ ನಿರ್ಮಠಣವಾದ ವಿವೇಕ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.ಸರಕಾರಿ ಶಾಲೆಯಲ್ಲಿ ಅತ್ಯುತ್ತಮ ವಿದ್ಯಾಬ್ಯಾಸ ದೊರೆಯುತ್ತಿದೆ. ಸರಕಾರಿ ಶಾಲೆಯಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ದೊರೆಯುತ್ತಿದೆ. ಈ ಹಿಂದೆ ಸರಕಾರಿ ಶಾಲೆಯಲ್ಲಿಕಲಿತವರೇ ಇಂದು ದೇಶ ,ರಾಜ್ಯವನ್ನು ಆಳುತ್ತಿದ್ದಾರೆ ಇದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು. ಕೇಪು ಸರಕಾರಿ ಶಾಲೆಯಲ್ಲಿನ ಹಳೆ ವಿದ್ಯಾರ್ಥಿ ಇಂದು ಹೈಕೋರ್ಟಿನಲ್ಲಿ ಉನ್ನತ ಹುದ್ದೆಯಲ್ಲಿರುವುದು ಗ್ರಾಮಕ್ಕೆ ಅಭಿಮಾಮದ ಸಂಕೇತವಾಗಿದೆ ಎಂದು ಹೇಳಿದರು.
ಸರಕಾರಿ ಶಾಲೆಗಳು ಉಳಿಯಬೇಕು, ಶಾಲೆಗಳು ಬಂದ್ ಆದರೆ ಮುಂದೆ ಬಹು ದೊಡ್ಡಸಮಸ್ಯೆ ಎದುರಾಗಬಹುದು ಎಂದು ಹೇಳಿದ ಶಾಸಕರು ಮಕ್ಕಳಿಗೆ ಶಾಲೆಯ ಶಿಕ್ಷಣದ ಜೊತೆ ಬದುಕಿನ ಶಿಕ್ಷಣವನ್ನು ನೀಡಬೇಕು. ನಮ್ಮ ಆಚಾರ, ವಿಚಾರ ,ಸಂಸ್ಕøತಿಯನ್ನು ಪಾಲನೆ ಮಾಡುವಲ್ಲಿ ಮಕ್ಕಳಿಗೆ ಪೋಷಕರು ನೆರವಾಗಬೇಕು. ಕೇವಲ ಪುಸ್ತಕದ ಪಾಠ ಮಾತ್ರ ಶಿಕ್ಷಣವಲ್ಲ, ಬದುಕೂ ನಮಗೆ ಪಾಠ ಕಲಿಸುತ್ತದೆ ಎಂದು ಹೇಳಿದರು.
ಎಂ ಆರ್ ಪಿ ಎಲ್ ಬಗ್ಗೆ ಅಭಿಮಾನವಿದೆ, ಆರಂಭದಲ್ಲಿ ಅವರಿಗೆ ವಿರೋಧ ಇತ್ತು ಆದರೆ ಇಂದು ಅದೇ ಸಂಸ್ಥೆ ಗ್ರಾಮದಲ್ಲಿ ಶಿಕ್ಷಣಕ್ಕೆ, ಆರೋಗ್ಯಕ್ಕೆ ನೆರವು ನೀಡುತ್ತಿದೆ.ಮುಂದೆ ಇದೇ ಸಂಸ್ಥೆಯಲ್ಲಿ ನಮ್ಮ ಜಿಲ್ಲೆಯ ಯುವಕರಿಗೂ ಉದ್ಯೋಗ ಸಿಗುವಂತೆ ಆಗಬೇಕು. ಸರೋಜಿನಿ ವರದಿ ಜಾರಿ ಮಾಡಬೇಕೆಂದು ಅಧಿವೇಶನದಲ್ಲಿ ಮಾತನಾಡುವೆ ಎಂದು ಶಾಸಕರು ಹೇಳಿದರು.
ವೇಧಿಕೆಯಲ್ಲಿ ಪುತ್ತೂರು ವಿಧಾನಸಭ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ, MRPL ನ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ದಯಾನಂದ ಪ್ರಭು, ಕೇಪು ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಶ್ರೀ ರಾಘವ ಮಣಿಯಾಣಿ, ಕೇಪು ಗ್ರಾಮ ಪಂಚಾಯತ್‍ನ ಸದಸ್ಯರಾದ ಶ್ರೀ ಪುರುಶೋತ್ತಮ ಗೌಡ ಕಲ್ಲಂಗಳ, ಉಳ್ಳಾಲ್ತಿ ಸೇವಾಟ್ರಸ್ಟನ ಗೌರವಾಧ್ಯಕ್ಷರಾದ ಶ್ರೀ ಪ್ರಕಾಶ್ ರೈ, ಕೇಪು ಗ್ರಾಮ ಪಂಚಾಯತ್‍ನ ಸದಸ್ಯರಾದ ಶ್ರೀ ಜಗಜೀವನ್ ರಾಮ್ ಶೆಟ್ಟಿ, ಬಂಟ್ವಳಾ ಕ್ಷೇತ್ರ ಶಿಕ್ಷಣಧಿಕಾರಿಯಾದ ಶ್ರೀ ಮಂಜುನಾಥ್ ಎಂ.ಜಿ., ಕೇಪು ಗ್ರಾಮ ಪಂಚಯತ್‍ನ ಸದಸ್ಯರಾದ ಶ್ರೀಮತಿ ಮೋಹಿನಿ ಕುಕ್ಕೆಬೆಟ್ಟು, ಕೇಪು ಗ್ರಾಮ ಪಂಚಾಯತ್‍ನ ಸದಸ್ಯರಾದ ಶ್ರೀಮತಿ ವಿಶಾಲಾಕ್ಷಿ, ಕುದ್ದುಪದವು ಉದಯಗಿರಿ ಸಮೂಹ ಸಂಪನ್ಮೂಲ ಅಧಿಕಾರಿಯಾದ ಶ್ರೀಮತಿ ಪುಷ್ಪಾವತಿ ಬಲ್ಲಾಳ್, ಶ್ರೀ ಉಳ್ಳಾಲ್ತಿ ಸೇವಾ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಪ್ರಭಾಕರ್ ಶೆಟ್ಟಿ ಪಡಿಬಾಗಿಲು, ಸರಕಾರಿ ನೌಕರರ ಸಂಘದ ಶ್ರೀ ಯತೀಶ್, ಹಿರಿಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಶ್ರೀ ಮರಳೀಧರ ರೈ ಗುತ್ತು, ಉಪಸ್ಥಿತರಿದ್ದರು.
ಶ್ರೀ ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ ಕಾರ್ಯಕ್ರಮವನ್ನು ನಿರೂಪಿಸಿದರು, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ವೆಂಕಟರಾಘವೇಂದ್ರ ಸ್ವಾಮಿಯವರು ಸ್ವಾಗತಿಸಿದರು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾಗೀರಥಿಯವರು ಧನ್ಯವಾದಕೋರಿದರು.