
ನವದೆಹಲಿ: 90 ರೂ.ಗಳ ಗಡಿ ದಾಟುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳ ಪ್ರತಿಭಟನೆಗೂ ಕಾರಣವಾಗಿದ್ದ ಇಂಧನ ಬೆಲೆ ಇದೀಗ ಕಳೆದ ಎರಡು ವಾರಗಳಿಂದಲೂ ಪೈಸೆಗಳಲ್ಲಿ ಸತತ ಇಳಿಕೆ ಕಾಣುತ್ತಿದ್ದು, ಗ್ರಾಹಕರಿಗೆ ರಿಲೀಫ್ ನೀಡುತ್ತಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶುಕ್ರವಾರವೂ ಬೆಲೆ ಇಳಿಕೆಗೆ ಸಾಕ್ಷಿಯಾಗಿದೆ. ಲೀಟರ್ ಪೆಟ್ರೋಲ್‌ಗೆ 15 ಪೈಸೆ ಕಡಿಮೆಯಾಗಿದ್ದು, 78.06 ರೂ.ಗಳಷ್ಟಿದೆ. ಇನ್ನು ಡೀಸೆಲ್ ಕೂಡ ಲೀಟರ್‌ಗೆ 15 ಪೈಸೆ ಕಡಿಮೆಯಾಗಿದ್ದು, 72.74 ರೂ.ಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ 78.69 ಮತ್ತು ಡೀಸೆಲ್‌ಗೆ 73.13ರೂ.ಗಳಿಗೆ ಮಾರಾಟವಾಗುತ್ತಿದೆ.
ಮುಂಬೈನಲ್ಲೂ ಕೂಡ ಬೆಲೆ ಇಳಿಕೆಯಾಗಿದ್ದು, ಲೀಟರ್ ಪೆಟ್ರೋಲ್ 83.57 ರೂ. ಮತ್ತು ಡೀಸೆಲ್ ಲೀಟರ್‌ಗೆ 76.22 ರೂ.ಗಳಷ್ಟಿದೆ. ಪೆಟ್ರೋಲ್ ಮತ್ತು ಡೀಸೆಲ್ ಲೀಟರ್‌ಗೆ 16 ಪೈಸೆ ಬೆಲೆ ಇಳಿಕೆಯಾಗಿದೆ.
ಕೋಲ್ಕತಾದಲ್ಲಿ 35 ಪೈಸೆ ಇಳಿಕೆಯಾಗಿರುವ ಪೆಟ್ರೋಲ್ 79.98 ರೂ.ಗಳಷ್ಟಿದೆ ಮತ್ತು ಡೀಸೆಲ್ 15 ಪೈಸೆ ಕಡಿತಗೊಂಡು 74.60 ರೂ.ಗೆ ಮಾರಾಟವಾಗುತ್ತಿದೆ.
ಇದೇರೀತಿ ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 81.08 ಮತ್ತು ಡೀಸೆಲ್‌ಗೆ 76.89 ರೂ.ಗಳಷ್ಟಿದ್ದು, ಸತತ 35 ಮತ್ತು 15 ಪೈಸೆ ಇಳಿಕೆಯಾಗಿದೆ.
ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರವು ಅ. 4 ರಂದು ಲೀ. ಪೆಟ್ರೋಲ್ ಮತ್ತು ಡೀಸೆಲ್‌ಗೆ 2.50 ರೂ. ಕಡಿಮೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿತ್ತು. ಅದಾದ ಬಳಿಕ ಇಂಧನ ಬೆಲೆಯಲ್ಲಿ ದಿನೇ ದಿನೇ ಇಳಿಕೆ ಕಾಣುತ್ತಿದೆ.