Sunday, January 19, 2025
ಸುದ್ದಿ

ಮೂರು ಲಕ್ಷ ಯುವಕರಿಗೆ ಬಂಪರ್ ಕೊಡುಗೆ ನೀಡಿದ ಮೋದಿ ಸರಕಾರ!

ದೆಹಲಿ : ಮೂರು ಲಕ್ಷ ಯುವಕರಿಗೆ ಜಪಾನ್‌ನಲ್ಲಿ ತರಬೇತಿ: ಕೇಂದ್ರ ಸರಕಾರದ ಹೊಸ ಯೋಜನೆ. ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಕೇಂದ್ರ ಸರಕಾರ ಮತ್ತೊಂದು ಮಹತ್ವದ ಯೋಜನೆ ಕೈಗೊಂಡಿದೆ.ಜಪಾನ್‌ನಲ್ಲಿ ತರಬೇತಿ ಪಡೆಯಲು 3 ಲಕ್ಷ ಯುವ ಸಮುದಾಯವನ್ನು ಕಳುಹಿಸಿಕೊಡಲು ನಿರ್ಧರಿಸಿದೆ. ಈ ತರಬೇತಿಯ ಸಂಪೂರ್ಣ ವೆಚ್ಚವನ್ನು ಜಪಾನ್‌ ಭರಿಸಲಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

ಭಾರತ ಮತ್ತು ಜಪಾನ್‌ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಟೆಕ್ನಿಕಲ್‌ ಇಂಟರ್ನ್‌ ಟ್ರೇನಿಂಗ್‌ ಪ್ರೋಗ್ರಾಮ್‌ ಯೋಜನೆಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ಅಕ್ಟೋಬರ್‌ 16ರಂದು ಟೊಕಿಯೋ ಪ್ರವಾಸ ಕೈಗೊಳ್ಳುತ್ತಿದ್ದು, ಅಂದು ಈ ಒಪ್ಪಂದಕ್ಕೆ ಅಂತಿಮ ಅಂಕಿತ ಹಾಕಲಾಗುವುದು ಎಂದು ಪ್ರಧಾನ್‌ ಮಾಹಿತಿ ನೀಡಿದರು.
ಈ ಯೋಜನೆಯನ್ವಯ ಮೂರು ಲಕ್ಷ ಮಂದಿಯನ್ನು ಜಪಾನ್‌ಗೆ ಕಳುಹಿಸಲಾಗುವುದು. ಅಲ್ಲಿ ಅವರು ತರಬೇತಿ ಪಡೆಯಲಿದ್ದಾರೆ. ಪ್ರತಿಭಾವಂತರು ಅಲ್ಲಿಯೇ ಉದ್ಯೋಗ ಕೂಡ ಅರಸಿ ಉಳಿಯಬಹುದು. ಸುಮಾರು ಐವತ್ತು ಸಾವಿರ ಮಂದಿಗೆ ಅಲ್ಲಿಯೇ ಉದ್ಯೋಗ ದೊರೆಯುವ ಅವಕಾಶಗಳು ಇವೆ ಎಂದು ಅವರು ಹೇಳಿದರು.
ಅತಿ ಶೀಘ್ರದಲ್ಲಿಯೇ ಈ ತರಬೇತಿ ಯೋಜನೆ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿದೆ ಎಂದು ಧರ್ಮೇಂದ್ರ ಪ್ರಧಾನ್‌ ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response