Saturday, November 23, 2024
ಸುದ್ದಿ

ಕರಾವಳಿ ಮೀನಿಗೆ ನೋ ಎಂಟ್ರಿ ಎಂದ ಗೋವಾ ; ಸಂಕಷ್ಟದಲ್ಲಿ ಕರಾವಳಿಯ ಮೀನುಗಾರರು – ಕಹಳೆ ನ್ಯೂಸ್

ಕರಾವಳಿ : ಕರಾವಳಿಯಿಂದ ರವಾನೆಯಾಗುವ ಮೀನಿನಲ್ಲಿ ಅಪಾಯಕಾರಿ ಫಾರ್ಮಾಲಿನ್ ರಾಸಾಯನಿಕ ಇದೆ ಎಂಬ ನೆಪದಿಂದ ಗೋವಾ ಸರ್ಕಾರ ಕರ್ನಾಟಕದ ಮೀನು ಅಮದಿಗೆ ನಿಷೇಧ ಹೇರಿರುವ ಕಾರಣ ಕರಾವಳಿ ಜಿಲ್ಲೆಯಲ್ಲಿ ಮೀನಿನ ಧಾರಣೆ ಕುಸಿದಿದ್ದು, ಇದರಿಂದ ಮೀನುಗಾರರು ಕಂಗಾಲಾಗಿದ್ದಾರೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಡೀಸೆಲ್‌ ಬೆಲೆ ಏರಿಕೆ, ಹವಾಮಾನ ವೈಪರೀತ್ಯ, ಮುಂತಾದ ಸವಾಲುಗಳನ್ನು ಎದುರಿಸಿ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕರಾವಳಿ ಮೀನಿಗೆ ನೋ ಎಂಟ್ರಿ ಎಂದ ಗೋವಾದ ನಿರ್ಧಾರದಿಂದ ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.‌

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ ಪ್ರತಿನಿತ್ಯ 100 ಲೋಡ್‌ ಮೀನು ಗೋವಾಕ್ಕೆ ರವಾನೆಯಾಗುತ್ತಿತ್ತು. ಪ್ರವಾಸಿಗರು ಹೆಚ್ಚಾಗಿ ಬೇಡಿಕೆ ಇಟ್ಟು ತಿನ್ನುವ ಪಾಂಪ್ಲೆಟ್‌, ಅಂಜಲ್‌ ಸೇರಿದಂತೆ ದುಬಾರಿ ಬೆಲೆಯ ಮೀನುಗಳಿಗೆ ಅತಿ ಹೆಚ್ಚಿನ ಬೇಡಿಕೆ ಇತ್ತು. ಇದೀಗ ನಿರ್ಬಂಧದಿಂದ ಮೀನುಗಾರಿಕಾ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ ಯಶಪಾಲ್ ನೋವು ತೋಡಿಕೊಂಡಿದ್ದಾರೆ.

ಗೋವಾಕ್ಕೆ ಮೀನು ರವಾನೆ ನಿಷೇಧವಾದ ಬಳಿಕ ಉಡುಪಿ ಮಾರುಕಟ್ಟೆಯಲ್ಲಿ ಮೀನಿನ ಬೆಲೆ ಅರ್ಧದಷ್ಟು ಕುಸಿದಿದೆ. ಮೊದಲು ಒಂದು ಕೆ.ಜಿ ಪಾಂಪ್ಲೆಟ್‌ಗೆ 600 ರೂ ಇತ್ತು. ನಿಷೇಧದ ಇದು 300ಕ್ಕೆ ಇಳಿದಿದೆ. ಗೋವಾದಲ್ಲಿ ಮಾತ್ರ ಬೆಲೆ ದುಪ್ಪಟ್ಟಾಗಿದೆ. ಇನ್ನು ಮಂಗಳೂರಿನಲ್ಲಿ ಗೋವಾ ನಿರ್ಬಂಧದ ತೀವ್ರತೆ ಅಷ್ಟಾಗಿ ಬಾಧಿಸಿಲ್ಲ ಎನ್ನುತ್ತಾರೆ ಮಂಗಳೂರು ಮಾರುಕಟ್ಟೆಯ ಮೀನು ಮಾರಾಟಗಾರರು